ದೇಶೀಯ ಸಂಸ್ಥಾನಗಳನ್ನು ಕುರಿತ ಡಿ.ವಿ.ಜಿ. ಅವರ ಚಿಂತನೆಗಳು - 6
ನರೇಂದ್ರ ಮಂಡಲದ ಅವಾಂತರಗಳು
ಇದರ ಇನ್ನೊಂದು ಪಾರ್ಶ್ವವನ್ನು ಡಿ.ವಿ.ಜಿ. ಅವರ Chamber of Princes (ನರೇಂದ್ರ ಮಂಡಳ) ಕುರಿತಾದ ಸಮಗ್ರ ಲೇಖನಗಳಲ್ಲಿ ಕಾಣಬಹುದು. ಅದರ ತಾತ್ಪರ್ಯವನ್ನು ಈ ರೀತಿ ನಿರೂಪಿಸಬಹುದು.
೧೯೨೦ರಲ್ಲಿ ಆರಂಭಗೊಂಡ ನರೇಂದ್ರ ಮಂಡಲ್ ಸಂಸ್ಥೆಯು ಪ್ರತಿವರ್ಷ ದೆಹೆಲಿಯಲ್ಲಿ ಸೇರುತಿತ್ತು. ಈ ಹೊತ್ತು ನಮ್ಮ ದೇಶದ ಸಂಸದಭವನದ ಗ್ರಂಥಾಲಯ (Parliament Library) ಇರುವ ಕಟ್ಟಡದಲ್ಲಿ ಅದರ ವಾರ್ಷಿಕ ಕಲಾಪ ನಡೆಯುತ್ತಿತ್ತು.
ಅದರ ಧ್ಯೇಯ ಸರಳವಾಗಿಯೇ ಇತ್ತು: ದೇಶೀಯ ಸಂಸ್ಥಾನಗಳ ಆಗುಹೋಗುಗಳನ್ನು, ಸಮಸ್ಯೆಗಳನ್ನು ಬ್ರಿಟಿಷ್ ಸರಕಾರದೊಂದಿಗೆ ಚರ್ಚಿಸುವುದು.
