Prekshaa articles feed

Saṃskṛta-saurabha in Śaṅkarābharaṇam’s Title Song

Telugu literature is known for its dexterous use of Sanskrit. While the language of the gods is a brilliant but hard diamond for many, it becomes supremely malleable for Telugu poets who weave their lyrical magic in it. This deft use of Sanskrit extends even to Telugu movie songs whose lyricists are not mere commercial song writers but poets in the truest sense of the word.

ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 8

ಕೃಷ್ಣಮೂರ್ತಿಗಳನ್ನು ನೆನೆದಾಗಲೆಲ್ಲ ನನಗೆ ಎದ್ದುತೋರುವುದು ಅವರ ಧರ್ಮಪ್ರಜ್ಞೆ. ಅರ್ಥ-ಕಾಮಗಳ ಕೋಲಾಹಲ ಸ್ವಲ್ಪವೂ ಇರದ ಈ ಧರ್ಮಪ್ರಜ್ಞೆಯು ನಿಶ್ಚಿತವಾಗಿ ಮೋಕ್ಷೈಕಗಾಮಿ. ಚಿಕ್ಕ ವಯಸ್ಸಿನಿಂದ ಅವರು ಆಚಾರ-ಪ್ರಾಯಶ್ಚಿತ್ತಗಳ ಮೂಲಕ ಮೈಗೂಡಿಸಿಕೊಂಡಿದ್ದ ಸತ್ತ್ವಾಭಿಮುಖತೆ ಸಾಹಿತ್ಯಸಂಸ್ಕಾರದ ಮೂಲಕ ಮತ್ತಷ್ಟು ಪಾಕಗೊಂಡಿತೆನ್ನಬೇಕು. ಮುಂದೆ ಕಾನೂನನ್ನು ಓದುವಾಗ, ಉದ್ಯೋಗ ನಿರ್ವಹಿಸುವಾಗ ಧರ್ಮಕ್ಕಿರುವ ದಂಡ-ವ್ಯವಹಾರಗಳೆಂಬ ಮತ್ತೆರಡು ಪಾದಗಳನ್ನು ಹತ್ತಿರದಲ್ಲಿ ಕಾಣುವ ಅವಕಾಶವಾಯಿತು. ಹೀಗಾಗಿ ಅವರ ಜೀವನವಿಡೀ ನಾಲ್ಕು ಪಾದಗಳುಳ್ಳ ಧರ್ಮದ ಹಲವು ತೆರನಾದ ಸೂಕ್ಷ್ಮತೆ-ಸಂದಿಗ್ಧತೆಗಳನ್ನು ಸಾವಧಾನವಾಗಿ ಗಮನಿಸಿ ಅನ್ವಯಿಸಿಕೊಳ್ಳುವ ಸಾಧನೆಯಾಯಿತು.