Prekshaa articles feed

ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 5

ಇನ್ನೊಮ್ಮೆ ನಿಮ್ಹಾನ್ಸ್ ಸಂಸ್ಥೆಯವರು ಅವಧಾನಕಾಲದ ಮನೋವ್ಯಾಪಾರಗಳನ್ನು ತಿಳಿಯಲೆಂದು ರಾಜ್ಯೋತ್ಸವದ ಅಂಗವಾಗಿ ನನ್ನ ಅವಧಾನವನ್ನು ಆಯೋಜಿಸಿದ್ದರು. ಇದಕ್ಕೂ ಕೃಷ್ಣಮೂರ್ತಿಗಳೇ ಸೂತ್ರಧಾರರು. ನಿಮ್ಹಾನ್ಸ್ ಸಂಸ್ಥೆಯ ರೋಗಿಗಳನ್ನು ಕರೆದೊಯ್ಯುವ ದೊಡ್ಡ ಬಿಳಿಯ ವ್ಯಾನಿನಲ್ಲಿ ಪೃಚ್ಛಕರೊಡನೆ ಅಲ್ಲಿಗೆ ಹೊತ್ತಿಗೆ ಮುನ್ನವೇ ತಲುಪಿದ್ದಾಯಿತು. ವೇದಿಕೆಯ ಮುಂದೆ ಸಾಕಷ್ಟು ಜನರಿದ್ದರೂ ಒಬ್ಬರ ಮುಖದಲ್ಲಿ ಕೂಡ ಸ್ಪಂದನವಿರಲಿಲ್ಲ. ಇಂಥವರಿಗೆ ಹೇಗೆ ತಾನೆ ಅವಧಾನದಂಥ ಅಭಿಜಾತಕಲೆಯನ್ನು ಮುಟ್ಟಿಸುವುದೆಂಬ ಚಿಂತೆ ನನಗಾದರೆ, ಲಂಕಾ ಕೃಷ್ಣಮೂರ್ತಿಯವರು ನಿಶ್ಚಿಂತರಾಗಿ ಹೇಳಿದರು: “ಸಾರ್, ಇದು ಅವರ ಅಧ್ಯಯನಕ್ಕೆ ವಸ್ತು. ನಾವು ಅದಕ್ಕೆ ಬೇಕಾದ ಅನುಕೂಲ ಮಾಡಿಕೊಡೋಣ.

ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 4

ಅವಧಾನ ಮರುದಿನ ಸಂಜೆ ಏರ್ಪಾಟಾಗಿತ್ತು. ಹೀಗಾಗಿ ಹಿಂದಿನ ದಿನವೆಲ್ಲ ನಮಗೆ ಬಿಡುವಿತ್ತು. ಹತ್ತಿರದ ಕೆಳದಿ, ಇಕ್ಕೇರಿ, ಬನವಾಸಿ ಮುಂತಾದ ಕ್ಷೇತ್ರಗಳಿಗೆಲ್ಲ ಶರ್ಮರು ನಮ್ಮನ್ನು ಕರೆದೊಯ್ದರು. ಎಲ್ಲೆಲ್ಲೂ ಸುಗ್ರಾಸವಾದ ಹವ್ಯಕಭೋಜನ ಸ್ವಾಗತಿಸುತ್ತಿತ್ತು. ರಾತ್ರಿ ಹೊಸಬಾಳೆಯಲ್ಲಿ ಗಮಕಿ ಸೀತಾರಾಮರಾಯರ ಮನೆಯಲ್ಲಿ ಉಳಿದದ್ದಾಯಿತು. ಅವರು ಶರ್ಮರ ಬಂಧುಗಳೂ ಹೌದು. ಜಗಲಿಯ ಮೇಲೆ ಪದ್ಮನಾಭನ್ ಅವರು ಮಲಗಿದರು. ಅವರ ಇರ್ಕೆಲಗಳಲ್ಲಿ ಕೃಷ್ಣಮೂರ್ತಿಗಳಿಗೂ ರಂಗನಾಥಶರ್ಮರಿಗೂ ಹಾಸಿಗೆ ಹಾಸಿತ್ತು. ನಾನು ಈ ಹಿರಿಯರಿಂದ ಸಾಕಷ್ಟು ದೂರದಲ್ಲಿ ಮಲಗಿದ್ದೆ. ದಿನವಿಡೀ ಸುತ್ತಿದ್ದ ಕಾರಣ ಎಲ್ಲರಿಗೂ ದಣಿವು. ಯಾವಾಗ ನಿದ್ರೆಗೆ ಜಾರಿದೆವೋ ಒಬ್ಬರಿಗೂ ನೆನಪಿಲ್ಲ. ಮುಂಜಾನೆ ಎದ್ದು ಪದ್ಮನಾಭನ್ ಅವರನ್ನು ಮಾತನಾಡಿಸಿದೆ.

Dasappa and Varadacharya

A distant relative of mine, who was quite well-to-do and had heard about my academic prowess agreed to provide me with some financial assistance. He, in fact, had seen a potential groom in me. This (his assistance) went on for five to six months. I joined the Fourth Form at the High School in the Maharaja college in Mysuru.

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 15)

ಕರ್ಣ ಶಿಶುವಾಗಿದ್ದಾಗಿನಿಂದಲೂ ಮನ ಸೆಳೆವ, ಮನಸ್ಸನ್ನು ಕರಗಿಸುವಂತಹ ಪಾತ್ರ.  ಈ ಮಗುವಿನ ಮುಗ್ಧಮನೋಹರ ಚಿತ್ರಣವನ್ನು ಮರೆಯುವವರಾರು? 

ಹೊಳೆ ಹೊಳೆದು, ಹೊಡಮರಳಿ ನಡು ಹೊ-

ಸ್ತಿಲಲಿ ಮಂಡಿಸಿ ಬೀದಿ ಬೀದಿ

ಗಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ |

ಲಲಿತರತ್ನದ ಬಾಲದೊಡಿಗೆಯ

ಕಳಚಿ ಹಾಯ್ಕುವ ಹೆಸರು ಜಗದಲಿ

ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ || (ಆದಿಪರ್ವ 3.27)