ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ- ಭಾಗ ೪
(ಕಳೆದ ಸಂಚಿಕೆಯಿಂದ...) ಮಹಾನಟನಿಗೆ ಕಾವ್ಯನೃತ್ಯೋಪಚಾರ- ಆಲಯವಿಶೇಷತೆಯ ನರ್ತನಕ್ಕೊಂದು ಸೇರ್ಪಡೆ ಪ್ರಕೃತ ಲೇಖನದ ಪ್ರಧಾನ ಆಶಯವನ್ನು ಪೋಷಿಸುವಂತೆ ಶಿಲ್ಪಸಾಮ್ರಾಜ್ಯದ ಮುಖ್ಯವಾಹಿನಿಯಲ್ಲಿ ಬೆಳಗಿಯೂ ಮರೆಯಲ್ಲಿರುವ ಕರ್ನಾಟಕದ ಒಂದು ಉತ್ಕೃಷ್ಟ ಶಿಲ್ಪಕ್ಕೆ ನೃತ್ಯಕಾವ್ಯವೊಂದನ್ನು ರಚಿಸುವ ಪ್ರಯತ್ನ ಲೇಖಿಕೆಯದ್ದು.
