Prekshaa articles feed

A story for a verse - HG Wilson

निष्पिष्टापि परं पदाहतिशतैः शश्वद्बहुप्राणिनां

संतप्तापि करैः सहस्रकिरणेनाग्निस्फुलिङ्गोपमैः |

छागाद्यैश्च विचर्चितापि सततं मृष्टापि कुद्दालकै

र्दूर्वा न म्रियते तथापि तरां धातुर्दया दुर्बले ||

Yugadi

Yugadi, also called Ugadi, is a well-known festival in India. Though it is often considered as a South Indian festival, textual evidences and local practices clearly indicate that it has a pan-Indian perspective. ‘युग’ in Sanskrit means ‘an era’. It also has many more meanings like ‘a couple’, ‘unit of time’, ‘yoke’, ‘age’, ‘generation’ and ‘lifespan’. ‘उग’ means ‘star’ or a glowing celestial body. Yugadi or Ugadi means the beginning of these. i.e, start of a year or in general a unit of time.

ಸಾಕ್ಷಿ – ಇರುವು; ಅರಿವು; ಹರವು – 6

ಕಾಮದ ಅತಿಯಾದ ವಿವರಣೆ: ಒಂದು ಸಾಮಾನ್ಯ ಆಕ್ಷೇಪ?

ಸಾಕ್ಷಿಯ ಬಗೆಗೆ ಹಲವರು ಆಕ್ಷೇಪಿಸುವುದೇನೆಂದರೆ, ಅದರಲ್ಲಿ ಅತಿಯಾದ ಕಾಮದ ಚಿತ್ರಣವಿದೆ  ಅಥವಾ ಅನೌಚಿತ್ಯವಾಗಿ ಲೇಖಕರು ಕಾಮವನ್ನು ವಿಜೃಂಭಿಸಿದ್ದಾರೆ ಎಂದು. ಈ ರೀತಿಯ ಆಕ್ಷೇಪಗಳಿಗೆ ಉತ್ತರವನ್ನು ಹುಡುಕುವಾಗ ಎರಡು ವಿಷಯಗಳನ್ನು ಗಮನದಲ್ಲಿಡಬೇಕು:

೧. ಈ ಕಾದಂಬರಿಯ ಜೀವಾಳವೇ ಪುರುಷಾರ್ಥಗಳ ಹಾಗೂ  ಅಹಂಕಾರದ  ಉಚ್ಚವಚನಿರೂಪಣೆ. ಇದನ್ನೇ ಅರ್ಥಮಾಡಿಕೊಳ್ಳದ ಓದುಗರ ನಿಲವಿಗೆ ಭದ್ರವಾದ ತರ್ಕದ ಬುನಾದಿಯಿಲ್ಲವಷ್ಟೆ.

ಸಾಕ್ಷಿ – ಇರುವು; ಅರಿವು; ಹರವು – 5

. ಅನುರಣಿಸುವ ಕೆಲವು ಧ್ವನಿಗಳು

ಸಾಕ್ಷಿಯ ಅಂತ್ಯದಲ್ಲಿ ಕೆಲವೊಂದು ಸೂಚನೆಗಳು ಸೂಕ್ಷ್ಮವಾಗಿ ಕಾಣುತ್ತವೆ. ಅವುಗಳಲ್ಲಿ ಗಣೇಶ(ಸುಕನ್ಯಳ ಮಗ) ಮತ್ತೊಬ್ಬ ಮಂಜಯ್ಯನಂತಾಗಿರುವುದು ಮತ್ತು  ಮಂಜಯ್ಯನ ತೋಟದ ಸುತ್ತ ಬೆಳೆದಿರುವ ಕಟ್ಟುಕತೆಯು ಮೌಲ್ಯ, ಅಹಂಕಾರ ಮತ್ತು ಪ್ರವೃತ್ತಿಗಳ ವಾಸ್ತವತೆ ಮತ್ತು ವಿಸ್ತಾರವನ್ನೂ ಮತ್ತು ಅವುಗಳ ನಡುವಿನ ಸಂಘರ್ಷದ ನಿತ್ಯತೆಯನ್ನೂ ಹಾಗೂ ಇವುಗಳು ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಗೆ ಏರಿದಾಗ ಯಾವ ವಿಸ್ತಾರವನ್ನು ಪಡೆಯುತ್ತವೆ ಎಂಬುದನ್ನೂ ತೋರಿಸುತ್ತವೆ.

ಸಾಕ್ಷಿ – ಇರುವು; ಅರಿವು; ಹರವು – 4

ಪ್ರತಿಮೆ, ಪ್ರಕರಣ ಮತ್ತು ತತ್ತ್ವಗಳು

ಅತಿ ಗಹನವೂ  ಕ್ಲಿಷ್ಟವೂ ಆದ ತತ್ತ್ವವನ್ನು ಪ್ರತಿನಿಧಿಸುವ ಈ ಕಥಾವಸ್ತುವನ್ನು ಚಿತ್ರಿಸುವಲ್ಲಿ ಪರಿಣಾಮಕಾರಿ ಮತ್ತು ತೀಕ್ಷ್ಣವಾದ ಕಾವ್ಯಮಯಪ್ರತಿಮೆಗಳು ಮತ್ತು ಸಂದರ್ಭಗಳನ್ನು ಲೇಖಕರು ಸಮುಚಿತವಾಗಿ ಬಳಸಿ ಸಾಕ್ಷಿಯನ್ನು ರಸಸಾಂದ್ರವನ್ನಗಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ನೋಡೋಣ.

ಸಾಕ್ಷಿ – ಇರುವು; ಅರಿವು; ಹರವು – 2

ಮಂಜಯ್ಯ:

ಹೆಣ್ಗಳ ಕಣ್ಣಿನಲ್ಲಿ ಮನ್ಮಥನು ಮನುಷ್ಯರೂಪವನ್ನು ತಾಳಲು ಯೋಚಿಸಿದರೆ ಯಾವ ರೂಪವನ್ನು ತಾಳಬಹುದೋ ಅದೇ ಮಂಜಯ್ಯ.  ಆದರೆ ಇವನದ್ದು ಶೃಂಗಾರದ ಮುಸುಕಿನಲ್ಲಿರುವ ವೀರ ಮತ್ತು ಅದರ ಮದ .  ಇವನಿಗೆ ಮುಪ್ಪಿಲ್ಲ. ಇವನಿಗೆ ಸೋಲದ  ಹೆಣ್ಣುಗಳಿಲ್ಲ. ಆದರೆ ಪ್ರತಿಯೊಂದು  ಹೆಣ್ಣಿನ ಸಂಗದಲ್ಲಿಯೂ ಇವನು ಬಯಸುತ್ತಿರುವುದು ದೇಹಪ್ರಕೃತಿಯ, ಕಾಮದ ಚೋದನೆಯ ಈಡೇರಿಕೆಯಲ್ಲ; ತನ್ನ ಅಹಂಕಾರದ ಮೆರವಣಿಗೆ. ಹೆಣ್ಣನ್ನು ಗೆದ್ದೆನೆಂಬ ಹೆಮ್ಮೆಯ ಅನುಭವ. ಇವನ ಹೆಣ್ಣುಬಾಕತನದ ಹಿಂದಿರುವುದು ತೀವ್ರವಾದ ಕಾಮವಲ್ಲ, ಅಹಂಕಾರ.   ಹಾಗಾಗಿಯೇ ಇವನ ಈ ದಾಹವು, ಅವನನ್ನು ವಿಕೃತಕಾಮಿಯನ್ನಾಗಿಸಿ, ಮೌಲ್ಯಭ್ರಷ್ಟನನ್ನಾಗಿಸಿ ಸಮಾಜದ ಸ್ಥಾಪಿತಮೌಲ್ಯಪ್ರತಿಮೆಗಳನ್ನು ಲೆಕ್ಕಕ್ಕಿಡದೆ ಒಡೆದುಹಾಕುವಂತೆ ಮಾಡುವುದು.