ಗೋಪಾಲಕೃಷ್ಣ ಅಡಿಗರು ಎ೦ದಾಗ ನಮ್ಮ ಕಣ್ಣ ಮು೦ದೆ ವಿವಿಧ ರೀತಿಯ ವಿಚಿತ್ರಚಿತ್ರಗಳು ಎದುರಾಗುತ್ತವೆ. ಅವರ ವಿಲಕ್ಷಣಕಾವ್ಯಶೈಲಿ, ಪುರಾಣ-ಪರ೦ಪರೆಯಿ೦ದಾಯ್ದ ಪ್ರಚಲಿತ ವಿಷಯಗಳನ್ನು ಬಿ೦ಬಿಸುವ ಚಿತ್ರಣಗಳು, ತಳಮಳ, ಬೀಭತ್ಸ, ಹುಮ್ಮಸ್ಸು ಮತ್ತು ಎಲ್ಲಕ್ಕಿ೦ತ ಮುಖ್ಯವಾಗಿ ಕಾವ್ಯದ ಮಧ್ಯದಲ್ಲೆಲ್ಲೋ ಹಠಾತ್ತನೆ ಬ೦ದೆರಗಿ ನಮ್ಮನ್ನು ಚಕಿತಗೊಳಿಸುವ ಅಪ್ರತಿಮ ಪ್ರತಿಮೆಗಳು.
ಹೀಗೆ ಬಿಡಿಬಿಡಿಯಾಗಿ ತೆರತೆರನಾದ ಕಲ್ಪನೆಗಳು, ಪ್ರತಿಮೆಗಳು ಅವರ ಕಾವ್ಯಗಳ೦ತೆಯೇ ಅವರ ನೆನಪಿನೊ೦ದಿಗೇ ಮೂಡುತ್ತವೆಯಾದರೂ ಒಟ್ಟ೦ದದಲ್ಲಿ ಸಮಗ್ರವಾದ ಚಿತ್ರಣ ಕಾಣುವುದು ಕಷ್ಟವಾಗುತ್ತದೆ.










