Prekshaa articles feed

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 4

ಎಷ್ಟೋ ಬಾರಿ ನರಕವಿಗಳೂ ವರಕವಿಗಳೂ ತಮ್ಮ ಕಾವ್ಯಗಳ ಮಟ್ಟಿಗೆ ಮೌಲ್ಯನಿಷ್ಠರಾಗಿರುವರಲ್ಲದೆ ಅವುಗಳ ಆಚೆಗೆ ಸಾಮಾನ್ಯಮಾನವರಂತೆಯೇ ಮೌಲ್ಯವಿಕ್ಷೋಭೆಗಳೊಳಗೇ ಒದ್ದಾಡುತ್ತಿರುತ್ತಾರೆ. ಋಷಿಕವಿಗಳು ಮಾತ್ರ ತಮ್ಮ ಕೃತಿಯಿಂದಾಚೆಗೂ ಮೌಲ್ಯಬದ್ಧರಾಗಿರುತ್ತಾರೆ. ಈ ಕಾರಣದಿಂದಲೇ ಅವರ ಭಣಿತಿ ಮಾತ್ರವಲ್ಲದೆ ಬದುಕೂ ಕಾವ್ಯವೆನಿಸುತ್ತದೆ. ಇಂಥ ಒಂದು ಮಹತ್ತ್ವದ ಸಂಗತಿಯನ್ನು ಉತ್ತರಕಾಂಡದ ಕಡೆಯಲ್ಲಿ ಕಾಣಬಹುದು. ಪರಿತ್ಯಕ್ತಳಾದ ಸೀತೆಯನ್ನು ಮತ್ತೆ ರಾಮನು ಸ್ವೀಕರಿಸುವಂತೆ ಮಾಡುವಲ್ಲಿ ಆಸ್ಥೆಯುಳ್ಳ ವಾಲ್ಮೀಕಿಮುನಿಗಳು ಸೀತೆಯ ಚಾರಿತ್ರ್ಯಶುದ್ಧಿಯನ್ನು ಶಪಥಪೂರ್ವಕವಾಗಿ ಸಾರುತ್ತಾರೆ. ಆ ಸರ್ಗಕ್ಕೆ “ವಾಲ್ಮೀಕಿಪ್ರತ್ಯಯದಾನ”ವೆಂದೇ ಹೆಸರು (೭.೯೬).

Vīrakesari Sitarama Shastri: As witness, meeting Rahul Sankrityayan - Part 7

Problems escalated when the leaders of the workers were fired on flimsy reasons. The cases went to the high court, the leaders requested Shastri to be a witness in the case. The administration didn’t budge and appointed the then famous criminal lawyer from Madras, Mr. Norton. Mr. Norton had a stellar record when it came to winning cases he argued and used to charge an exorbitant fee of ₹10000 per day. The case came under the bench headed by Singaravelu Mudaliar. Shastri was the main eyewitness who was to be cross examined.

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 3

ಅನಂತರ ಚತುರ್ಮುಖಬ್ರಹ್ಮನೇ ಮಹರ್ಷಿಗಳ ಬಳಿ ಬರುತ್ತಾನೆ. ಆ ಹೊತ್ತಿನಲ್ಲಿ ಕೂಡ ವಾಲ್ಮೀಕಿಮುನಿಗಳಿಗೆ ಆ ಶ್ಲೋಕದ್ದೇ ಗುಂಗು: ತದ್ಗತೇನೈವ ಮನಸಾ ವಾಲ್ಮೀಕಿರ್ಧ್ಯಾನಮಾಸ್ಥಿತಃ, ೧.೨.೨೮. ಕ್ರೌಂಚವಧೆಯ ಧರ್ಮಾಧರ್ಮಗಳ ವಿಚೇಚನೆಯೂ ಕ್ರೌಂಚಿಗೊದಗಿದ ವೈಧವ್ಯಕ್ಕೆ ಮರುಕವೂ ಮತ್ತೆ ಮತ್ತೆ ಸುಳಿಸುತ್ತುತ್ತಿತ್ತು. ಇದು ಕವಿಯೊಬ್ಬ ತನ್ನ ಕಾವ್ಯಕ್ಕೆ ಪ್ರೇರಕವಾದ ಘಟನೆಯನ್ನು ಮತ್ತೆ ಮತ್ತೆ ಪರ್ಯಾಲೋಚಿಸುವ ಪರಿಯೇ ಹೌದು. ಜಗತ್ತಿನ ಭಾವಗಳು ಈ ಮಟ್ಟದ ಕ್ಷೋಭೆಯನ್ನುಂಟುಮಾಡದೆ ಕಾವ್ಯರಚನೆಗೆ ತಕ್ಕ ಪ್ರೇರಣೆ ಒದಗಿಬರದು. ಹೀಗೆ ಪ್ರೇರಿತನಾದ ಕವಿ ತನ್ನ ತಾರ್ಕಿಕವಾದ ಅರಿವನ್ನೂ ಮೀರಿ ಭಾವಪೂರ್ಣವಾದ ಪ್ರತಿಕ್ರಿಯೆಯನ್ನು ನೀಡುವುದೇ ನಿಜವಾದ ಕಾವ್ಯ.