ಅಭಿಜಾತನೃತ್ಯ ಮತ್ತು ಯಕ್ಷಗಾನ ಈ ಹಿನ್ನೆಲೆಯಲ್ಲಿ ಭಾರತೀಯ ಅಭಿಜಾತನೃತ್ಯಗಳನ್ನು ಯಕ್ಷಗಾನದೊಡನೆ ಹೋಲಿಸಿ ನೋಡಿದಾಗ, ಮಿಕ್ಕೆಲ್ಲ ನೃತ್ಯಪದ್ಧತಿಗಳಿಗಿಂತ ಭಿನ್ನವಾಗಿ ಯಕ್ಷಗಾನವು ನಾಟ್ಯಪದ್ಧತಿಯಾಗಿ ತೋರುವುದು ಸುವೇದ್ಯ. ಈ ಕಾರಣದಿಂದಲೇ ಇಲ್ಲಿ ಲೋಕಧರ್ಮಿಯ ಪಾರಮ್ಯವಿರುತ್ತದೆ; ಮತ್ತಿದು ಸಮಸ್ತಜನರಿಗೂ ಸಂತೋಷವೀಯುತ್ತದೆ. ಆದರೆ ಈಚೆಗೆ—ಅಂದರೆ, ಚಲನಚಿತ್ರ ಮತ್ತು ದೂರದರ್ಶನಗಳ ಪ್ರಭಾವ ವ್ಯಾಪಕವಾಗುತ್ತ ಬಂದಂತೆ—ಇವುಗಳ ಲೋಕಧರ್ಮಿಯ ಪಾರಮ್ಯವು ಸಹಜವಾಗಿಯೇ ಮಿಗಿಲಾಗಿ ತೋರಿ, ಇವುಗಳ ಹೋಲಿಕೆಯಲ್ಲಿ ಯಕ್ಷಗಾನವು ನಾಟ್ಯಧರ್ಮಿಗೇ ನಿಕಟವೆನಿಸಿದೆ. ಹೀಗಾಗಿಯೇ...
ಉಪಕ್ರಮ [ಈಗಾಗಲೇ ಹಲವು ಲೇಖನಗಳಲ್ಲಿ ನಾನು ನೃತ್ಯ, ನಾಟ್ಯ ಮತ್ತು ಯಕ್ಷಗಾನಗಳನ್ನು ಕುರಿತಂತೆ ಹೇಳಿರುವ ಕಾರಣ ಅವುಗಳನ್ನೆಲ್ಲ ಹಿನ್ನೆಲೆಯಲ್ಲಿರಿಸಿಕೊಂಡು ಸದ್ಯದ ಬರೆವಣಿಗೆಯನ್ನು ಸಹೃದಯರು ಗಮನಿಸಿಕೊಳ್ಳಬೇಕೆಂದು ವಿನಂತಿ. ಮುಖ್ಯವಾಗಿ “ಸೋದರಕಲೆಗಳ ನಡುವೆ ಯಕ್ಷಗಾನ,” “ಯಕ್ಷಗಾನ: ಒಂದು ದೇಶೀಯ-ಪಾರಂಪರಿಕ-ರಂಗಕಲೆ,” “ಯಕ್ಷಗಾನದಲ್ಲಿ ನವೀನಸುಧಾರಣೆ-ಪ್ರಯೋಗಗಳ ಸಾಧ್ಯತೆ: ಒಂದು ಮೀಮಾಂಸೆ,” “ಬಡುಗುತಿಟ್ಟಿನ ಆಂಗಿಕಾಭಿನಯ,” “ಏಕವ್ಯಕ್ತಿಯಕ್ಷಗಾನ: ತತ್ತ್ವ ಮತ್ತು ಪ್ರಯೋಗ,” “ನೃತ್ಯ-ನಾಟ್ಯಗಳನ್ನು ಅನುಲಕ್ಷಿಸಿ ಅಭಿಜಾತಕಲೆಗಳ ನೆಲೆ-ಬೆಲೆ,” “...