ಜೀವರೇಖೆಗಳು – ಸಾ.ಕೃ.ರಾ. ಚಿತ್ರಿಸಿದ ಸತ್ತ್ವಮೂರ್ತಿಗಳು - 2
‘ಪುರುಷಸರಸ್ವತಿ’ (ವಿ.ಸೀ. ಸಂಪದ, ಬೆಂಗಳೂರು, ೧೯೯೪) ಸಣ್ಣದಾದರೂ ಹಿರಿದಾದ ಕೃತಿ. ಕೇವಲ ಐವತ್ತು ಪುಟಗಳ ಒಳಗೆ ಕರ್ಣಾಟಾಂಧ್ರಸವ್ಯಸಾಚಿ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಸ್ಫಟಿಕೋಪಮ ಜೀವನವನ್ನು ಕಟ್ಟಿಕೊಡುವ ರಾಯರು ಅನುಬಂಧವಾಗಿ ‘ಸಂಗೀತದ ಮೂಲದ್ರವ್ಯಗಳು’ ಎಂಬ ಶರ್ಮರ ತೆಲುಗು ಬರೆಹವೊಂದರ ಕನ್ನಡ ಅನುವಾದವನ್ನು ಒದಗಿಸಿ, ಅವರ ಜೀವನಪಥದ ಪ್ರಮುಖ ಘಟ್ಟಗಳನ್ನೂ ಅವರಿಗೆ ಸಂದ ಪ್ರಶಸ್ತಿಗಳನ್ನೂ ಅವರು ಬರೆದ ಗ್ರಂಥಗಳ ವಿವರಗಳನ್ನೂ ನೀಡಿದ್ದಾರೆ. ಹೀಗೆ ಇದೊಂದು ಸ್ವಯಂಪೂರ್ಣವಾದ ರಚನೆ. ಶರ್ಮರ ಜನ್ಮಶತಮಾನೋತ್ಸವದಲ್ಲಿ ಪ್ರಕಟವಾದ ಈ ಕೃತಿಗೆ ಸಂದರ್ಭದ ಔಚಿತ್ಯವೂ ಸಂದಿದೆ.