ಕನ್ನಡ ಚಿತ್ರಗೀತಗಳಲ್ಲಿ ಅಲಂಕಾರಗಳು – ಒಂದು ಹಕ್ಕಿನೋಟ
|| ಶ್ರೀಃ ||
ಯಾವ ಜೀವಿಗಾಗಲಿ ಬೇಕಾಗಿರುವ ದುಃಖನಿವೃತ್ತಿ ಮತ್ತು ಸುಖಪ್ರಾಪ್ತಿಗಳು ಶಾಶ್ವತವಾಗಿ ಮೋಕ್ಷದಿಂದ ದೊರೆತರೂ ತಾತ್ಕಾಲಿಕವಾಗಿ ಕಲಾಸ್ವಾದದ ಮೂಲಕವೂ ಪಡೆಯಬಹುದೆಂದು ಲೋಕಾನುಭವವೇದ್ಯ. ಇದೇ ಮೂಲಪ್ರವೃತ್ತಿಯು ಮಾನವಚರಿತ್ರೆಯಲ್ಲಿ ಕಲೆಯ ಬೆಳೆವಳಿಗೆಗೂ ಕಾರಣವಾಗಿದೆ. ಕಲೆಯ ಕವಲುಗಳು ಹಲವಾದರೂ ಕಲಾಸ್ವಾದದ ತಿರುಳನ್ನೂ ಹುರುಳನ್ನೂ ರಸ-ಸಿದ್ಧಾಂತದ ಮೂಲಕ ಸೆರೆ ಹಿಡಿಯುವಲ್ಲಿ ಭಾರತೀಯಸೌಂದರ್ಯಮೀಮಾಂಸಕರು ಸಮರ್ಥರಾಗಿದ್ದಾರೆ.
