Prekshaa articles feed

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 1

‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್‌ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು.

ಸೀಸಪದ್ಯ ಮತ್ತು ಸಾನೆಟ್: ಪದ್ಯಶಿಲ್ಪವಿವೇಚನೆ - 7

ಈ ಮೊದಲೇ ಕಂಡಂತೆ ನವೋದಯದಿಂದೀಚೆಗೆ ನಮ್ಮಲ್ಲಿ ಸಾನೆಟ್ ಹೆಚ್ಚಿನ ಪ್ರಸಿದ್ಧಿ-ಪ್ರಾಶಸ್ತ್ಯಗಳನ್ನು ಗಳಿಸಿದೆ. ನವ್ಯ-ನವ್ಯೋತ್ತರಯುಗಗಳಲ್ಲಿಯೂ ಈ ಬಂಧವು ಉಳಿದುಬಂದಿದೆ. ಆದರೂ ಲಕ್ಷಣಶುದ್ಧವಾದ ಸಾನೆಟ್‌ಗಳನ್ನು ನವೋದಯದಲ್ಲಿಯೇ ಕಾಣಬಹುದು. ಈಚಿನ ದಶಕಗಳಲ್ಲಿ ಮಾತ್ರಾಸಮತೆ, ಪಾದಬದ್ಧತೆ, ಪ್ರಾಸಪೂರ್ಣತೆ ಮುಂತಾದ ಶಿಸ್ತಿಲ್ಲದೆ ಸಾನೆಟ್ ತನ್ನ ಲಕ್ಷಣಶುದ್ಧಿಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಲಕ್ಷಣಬದ್ಧವಾದ ಬಂಧಗಳನ್ನೇ ವಿವೇಚಿಸುವ ಈ ಪ್ರಯತ್ನದಲ್ಲಿ ಚ್ಯುತಲಕ್ಷಣಗಳಿಗೆ ಅವಕಾಶವಿಲ್ಲದಿರುವುದು ಯುಕ್ತವೇ ಆಗಿದೆ. ಈ ಹಿನ್ನೆಲೆಯಲ್ಲಿ ನವೋದಯದ ಕೆಲವು ಮಾದರಿಗಳನ್ನು ನಾವು ಪರಿಶೀಲಿಸಬಹುದು:

ನನ್ನವೀ ನುಡಿಗಳಿರ! ಕಾಲದಲೆಗಳಲಿ

Ch. 9 Yoga of the Relationship between Brahman and the World (Part 4)

7. "Mamātmā bhūtabhāvanaḥ" : Brahma-consciousness is the cause of a jīva's rise and fall. The term bhāvanaḥ can variously mean birth, existence, sustenance, or control. Brahma has embedded the seed of Ṛta (Cosmic order) and dharma in human nature. Ṛta is the law in creation. "Deeds beget appropriate rewards and a jīva has to experience them" is the cosmic law of ṛta. The practical application of ṛta in life is dharma.

ಸೀಸಪದ್ಯ ಮತ್ತು ಸಾನೆಟ್: ಪದ್ಯಶಿಲ್ಪವಿವೇಚನೆ - 6

ನವೋದಯದಿಂದ ಈಚೆಗೆ ಕಾಣಲು ಅಸಂಭವವೇ ಎನಿಸುವಷ್ಟರ ಮಟ್ಟಿಗೆ ವಿರಳವಾದ ಕರ್ಷಣಜಾತಿಯ ಸೀಸಪದ್ಯಕ್ಕೆ ಮಾದರಿಗಳಾಗಿ ನನ್ನ ಅವಧಾನದ ಎರಡು ಉದಾಹರಣೆಗಳನ್ನು ಗಮನಿಸಬಹುದು: 

ಕಾಳರಾತ್ರಿಗಳಲ್ಲಿ ಕದವ ತಟ್ಟುವ ಭಾವ-

ಜಾಲಂಗಳಲ್ಲಿರ್ಪ ಜೀವನವನು

ಚಂಡಮಾರುತದಲ್ಲಿ ತಾಂಡವಾಂಬುಧಿಯಲ್ಲಿ

ತತ್ತರಂಗೊಂಡಿರ್ಪ ತೆಪ್ಪಗಳನು

ಮುಸ್ಸಂಜೆಮುಗುಳಾಗಿ ಮೂಗುವಟ್ಟುತ್ತಿರ್ಪ