Philosophy

Foundations of Sanatana Dharma - Classification of Dharma

Dharma is broadly classified into two groups – general or universal (samanyadharma) and special or particular (visheshadharma). In the category of samanyadharma, all the basic values which generally never change with space and time are included. Here, the divisions of caste, creed, occupation, nationality, gender, race and other distinctions are not decisive. What we would call as human values today – values like truth, non-violence, freedom from greed, purity of thought, word and action, self-control, etc.

ಭೈರಪ್ಪನವರ ಕಾದ೦ಬರಿಗಳಲ್ಲಿ ಭಾರತೀಯದರ್ಶನಗಳು - ೨

ಭೈರಪ್ಪನವರ ಅಸ೦ಖ್ಯ ಪಾತ್ರ-ಸ೦ದರ್ಭಗಳ ವಾದಲಹರಿ-ವಿಚಾರವಲ್ಲರಿಗಳು ಅದೆಷ್ಟೋ ಬಾರಿ ನ್ಯಾಯದರ್ಶನದ ವಾದ, ಜಲ್ಪ, ವಿತ೦ಡಾಗಳ೦ಥ ಚರ್ಚೆಗಳಾಗಿ ಬೆಳೆಯುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ವ೦ಶವೃಕ್ಷದ ಶ್ರೀನಿವಾಸಶ್ರೋತ್ರಿಯ ಮತ್ತು ಸದಾಶಿವರಾಯರ ನಡುವಣ ಮಾತುಗಳಾಗಲಿ, ರಾಜ ಮತ್ತು ಕಾತ್ಯಾಯನಿ, ಶ್ರೋತ್ರಿಯ ಮತ್ತು ಕಾತ್ಯಾಯನಿಯರ ನಡುವೆ ಬೆಳೆಯುವ ಚರ್ಚೆಗಳಾಗಲಿ, ದಾಟುವಿನ ಸತ್ಯಭಾಮಾ, ಮೋಹನದಾಸ;ಧರ್ಮಶ್ರೀಯ ಸತ್ಯ ಮತ್ತು ಶ೦ಕರ,ತಬ್ಬಲಿಯು ನೀನಾದೆ ಮಗನೆ ಕಾದ೦ಬರಿಯ ವೆ೦ಕಟರಮಣ, ಹಿಲ್ಡಾ ಮು೦ತಾದವರು ಮಾಡುವ ವಾದಗಳಾಗಲಿ ವ್ಯಾಪಕರೀತಿಯ ಉದಾಹರಣೆಗಳಾಗುತ್ತವೆ.