ಪು.ತಿ. ನರಸಿಂಹಾಚಾರ್ಯರ ರಸದರ್ಶನ

ಅಧ್ಯಾತ್ಮ ಎಂದರೆ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವ ಚೆಲುವು, ಬದುಕಿನಲ್ಲಿ ಅಂತರ್ಗವಾಗಿರುವ ಚೆಲುವು, ಒಲವು ಮತ್ತು ಇತರ ರಾಗ ಭಾವಗಳಿಗೆಲ್ಲ ವಿಮುಖವಾಗಿ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ, ವೈಯಕ್ತಿಕ ಮೋಕ್ಷಕ್ಕೆ ಪ್ರಯತ್ನಿಸುವುದು ಮಾತ್ರವಲ್ಲ.  ಬದುಕಿನ ಜಂಜಡಗಳಿಂದ ಜರ್ಜರಿತವಾದ ಮಾನವ ಚೇತನವನ್ನು ಉನ್ನತ ಸ್ತರಕ್ಕೆ ಏರಿಸಿ ಈ ಸೃಷ್ಟಿಯಲ್ಲಿನ ವ್ಯಕ್ತ ಮತ್ತು ಅವ್ಯಕ್ತ ಚಲುವನ್ನು , ಇದರ ಹಿಂದಿರುವ ಸೃಷ್ಟಿಕರ್ತನ ಅದ್ಭುತ ಚೆಲುವು-ಚೈತನ್ಯಗಳನ್ನು ಅರಗಳಿಗೆಯಾದರೂ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ರಸದೃಷ್ಟಿಯನ್ನು ಜಾಗೃತಗೊಳಿಸುವ ಅದ್ಭುತಶಕ್ತಿಯೇ ಅಧ್ಯಾತ್ಮ ಎನಿಸುತ್ತದೆ. ಇಂತಹ ಅಧ್ಯಾತ್ಮ ರಸ-ದರ್ಶನ ಪು.ತಿ. ನರಸಿಂಹಾಚಾರ್ಯರ ಕಾವ್ಯದಲ್ಲಿ ಓತ-ಪ್ರೋತವಾಗಿ ಕಂಡುಬರುತ್ತದೆ.

ಬೆಳಗು ಬೈಗುಗಳಲ್ಲಿ ಸೂರ್ಯೋದಯ,ಸೂರ್ಯಾಸ್ತ, ಚಂದ್ರೋದಯಗಳಿಂದ ಪ್ರಕೃತಿ ಚಲುವನ್ನು ನಮ್ಮ ಕಣ್ಣೆದುರು ತೆರೆದಿಡುತ್ತಾಳೆ. ನೂರು ನೂರು ಮರಗಳಿಂದ ಸಾವಿರ ಸಾವಿರ ಹಕ್ಕಿಗಳು ವಿಧವಿಧವಾದ ಇನಿದನಿಯಲ್ಲಿ ಹಾಡುತ್ತವೆ.  ನದಿಗಳು ಕಲ-ಕಲ ನಿನದಿಸುತ್ತಾ ಪ್ರವಹಿಸುತ್ತವೆ. ಸುಳಿಗಾಳಿಗೆ ಮರದೆಲೆಗಳು ಮರ್ಮರ ಧ್ವನಿಗೈಯ್ಯುತ್ತವೆ. ಒಂದೊಂದು ಪ್ರಾಣಿಯೂ ಒಂದೊಂದು ರೀತಿಯ ಸ್ವರ ಮೂಡಿಸುತ್ತದೆ. ನಮ್ಮ ಶ್ರವಣೇಂದ್ರಿಯಗಳಿಗೆ ಕೇಳಿಸುವ ಆಹತ-ನಾದ, ಕೇಳಿಸದೆಯೇ ವಿಶ್ವವ್ಯಾಪಿಯಾಗಿರುವ ಅನಾಹತ-ನಾದ,  ಜಗತ್ತಿನ ಚರಾಚರಗಳಲ್ಲಿ ತಾವೇ ತಾವಾಗಿ ಆವರಿಸಿಕೊಂಡಿರುವ ಚೆಲುವು, ಕುರೂಪ, ರೌದ್ರ, ರಮಣೀಯತೆಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸುವುದರಿಂದ ಮಾನವ ಚೇತನದಲ್ಲಿ ರಸಾನುಭೂತಿಯುಂಟಾಗುತ್ತದೆ. ಹೀಗೆ ಸೃಷ್ಟಿಯಲ್ಲಿ ಅನಾವರಣಗೊಂಡಿರುವ ಚೆಲುವು, ನಾದ-ಮಾಧುರ್ಯಗಳಿಗೆ ಸ್ಪಂದಿಸುವ ಪು.ತಿ.ನ ರಸಾವಿಷ್ಟಚೇತನರಾಗುತ್ತಾರೆ. ಹಾಗೆಯೇ ಬದುಕಿನ ರಾಗ-ದ್ವೇಷಗಳಿಗೂ ಸ್ಪಂದಿಸುತ್ತಾರೆ. ಇವುಗಳೊಡನೆ ತಮ್ಮ ಆರಾಧ್ಯ ದೈವ ಶ್ರೀಹರಿಯ, ಚೆಲುವನಾರಾಯಣನ ಅವ್ಯಯ, ಅಪ್ರತಿಮ ಚಲುವಿಗೆ, ಭವಭೀತಿಯನ್ನು ಪರಿಹರಿಸುವ ಅವನ ಮುರಳೀ-ಗಾನಕ್ಕೆ ಅನನ್ಯ ಭಕ್ತಿ, ಪ್ರಪತ್ತಿಗಳಿಂದ ಶರಣಾಗತರಾಗುತ್ತಾರೆ. ಇವು ಮೂರೂ ಎಳೆಗಳು ಪು.ತಿ.ನ ಅವರ ರಸದರ್ಶನವನ್ನು ತ್ರಿವೇಣೀ-ಸಂಗಮದಂತೆ ರೂಪಿಸಿವೆ ಎನ್ನಬಹುದು.

P T Narasimhachar

ಪ್ರಕೃತಿಯಲ್ಲಿ ವ್ಯಕ್ತಗೊಂಡಿರುವ ಚಲುವಿನ ವೈವಿಧ್ಯದ ಬಗೆಗೆ ಪು.ತಿ.ನರ ನಿಲುವು ಆಂಗ್ಲ ಅನುಭಾವಿ ಕವಿ ಜೆರಾಲ್ಡ್ ಮ್ಯಾನ್ಲಿ ಹಾಪ್ಕಿನ್ಸ್ ನನ್ನು ನನಪಿಸುತ್ತದೆ. 'ಪೈಡ್ ಬ್ಯೂಟಿ' (Pied Beauty)  ಎಂಬ ಸಣ್ಣ ಕವನದಲ್ಲಿ (curtal sonnet) ಅವನು ಈ ಸೃಷ್ಟಿಯಲ್ಲಿನ ಪ್ರತಿಯೊಂದು ವಿರುದ್ಧ ಗುಣದ ವಸ್ತುವಲ್ಲಿಯೂ ಸೌಂದರ್ಯ ಕಾಣುತ್ತಾನೆ. ಸಹಜ ಮತ್ತು ಕೃತಕವಾದದ್ದು, ವಿಚಿತ್ರವಾದದ್ದು , ಸಾಧಾರಣವಾದದ್ದು, ಮೃದು ಮತ್ತು ಕಠಿಣವಾದದ್ದು, ಮಂದಗತಿ ಉಳ್ಳದ್ದು, ವೇಗವಾದದ್ದು, ಸಿಹಿ, ಹುಳಿ, ಕಹಿ, ಉಜ್ಜ್ವಲವಾದದ್ದು ಮತ್ತು ಮಬ್ಬಾದದ್ದು, ಉಳುಮೆಮಾಡಿರುವ ಭೂಮಿ, ಉಳುಮೆಮಾಡದ ಭೂಮಿ, ಬೀಜ ಬಿತ್ತಿ ಮೊಳಕೆ ಬಂದು ಹಸಿರಾಗಿರುವ ಭೂಮಿ, ಹಸುವಿನ ಮೈಮೇಲಿನ ಮಚ್ಚೆಗಳು - ಇಂತಹ ಎಲ್ಲಾ ವೈವಿಧ್ಯಗಳಲ್ಲಿಯೂ ಮತ್ತು ಸೃಷ್ಟಿಯ ಎಲ್ಲಾ ಬದಲಾವಣೆಗಳಲ್ಲಿಯೂ ಸೌಂದರ್ಯ ಕಾಣುತ್ತಾನೆ.  ಅವನು ಇಂತಹ ಪರಿವರ್ತನಶೀಲ ವೈವಿಧ್ಯಕ್ಕೆ ಜನ್ಮ ನೀಡಿರುವ ಆ ಸೃಷ್ಟಿಕರ್ತನ ಬದಲಾಗದಿರುವ ಅವ್ಯಯ ಶಾಶ್ವತ ಸೌಂದರ್ಯವನ್ನು ಆರಾಧಿಸು - ಎನ್ನುತ್ತಾನೆ. 'Fathers forth' ಎಂಬ ಪದವನ್ನು ಉಪಯೋಗಿಸಿ ಈ ಪರಿವರ್ತನಶೀಲ ಸೌಂದರ್ಯದ ಜನ್ಮದಾತನದು ಎಂದೂ ಬದಲಾಗದ ಸೌಂದರ್ಯ - ಎನ್ನುತ್ತಾನೆ. ಹಾಗೆಯೇ ಈ ಸಂದರ್ಭದಲ್ಲಿ ಕೀಟ್ಸ್ ಕವಿಯ ಸೌಂದರ್ಯಪ್ರಜ್ಞೆಯೂ ನೆನಪಾಗುತ್ತದೆ. ಕಟಾವು ಮುಗಿಸಿ ಕೂಳೆಬಿಟ್ಟಿರುವ ಹೊಲದ ಮೇಲೆ ಸಂಜೆ ಸೂರ್ಯನ ಬೆಳಕು ಬಿದ್ದಾಗ ಅಲ್ಲಿ ಅದ್ಭುತ ಸೌಂದರ್ಯ ಕಾಣುತ್ತಾನೆ ಕೀಟ್ಸ್. ಪು.ತಿ.ನ ಅಂತಹ  ರಸಸ್ನಾತಚೇತನರ.

ಕೇವಲ ಪ್ರಕೃತಿಯ ಚೆಲುವು ಮಾತ್ರಕ್ಕಲ್ಲದೆ, ಮನುಷ್ಯಸ್ವಭಾವದಲ್ಲಿ ಅಡಗಿರುವ ರಾಗ ದ್ವೇಷಗಳಿಗೆ ಪು.ತಿ.ನ ಅತ್ಯಂತ ಆಳವಾಗಿ, ಸೂಕ್ಷ್ಮವಾಗಿ ಸ್ಪಂದಿಸುತ್ತಾರೆಂಬುದು ಶ್ರೀಹರಿಚರಿತೆಯ ಹಲವಾರು ಸನ್ನಿವೇಶಗಳಿಂದ ಕಂಡುಬರುತ್ತದೆ. ತಂಗಿ ದೇವಕಿಯ ವಿವಾಹದ ನಂತರ ಸಂತಸದಿಂದ ದೇವಕಿ-ವಸುದೇವರನ್ನು ರಥದಲ್ಲಿ ಕೂಡಿಸಿಕೊಂಡು ಬರುತ್ತಿದ್ದ ಕಂಸನ ಮನಸ್ಸು ಆಕಾಶವಾಣಿಯ 'ನಿನ್ನ ಸಾವಿಗೆ ಕಾರಣವಾಗುವ ಶಿಶುವು ದೇವಕಿಯ ಹೊಟ್ಟೆಯಲ್ಲಿ ಹುಟ್ಟಿಬರುತ್ತದೆ' ಎಂಬ ಮಾತುಗಳಿಂದ ಸಂಪೂರ್ಣವಾಗಿ ಬದಲಾಗಿ ಬಿಡುತ್ತದೆ. ತನ್ನ ಸಾವಿನ ಭೀತಿ ಅವನಲ್ಲಿ ಅತೀವ ಕ್ರೌರ್ಯ, ಹಿಂಸೆಗಳನ್ನು ಮೂಡಿಸುತ್ತದೆ. ವಸುದೇವ-ದೇವಕಿಯರನ್ನು ತತ್ಕ್ಷಣ ಕಾರಾಗೃಹಕ್ಕೆ ಹಾಕುವುದಲ್ಲದೆ, ಅವರಿಗೆ ಜನಿಸಿದ ಹಸುಗೂಸುಗಳನ್ನೂ ತತ್ಕ್ಷಣವೇ ಕೊಲ್ಲುವ ಮಟ್ಟ ಮುಟ್ಟುತ್ತದೆ ಅವನ ಕ್ರೌರ್ಯ.

ಶ್ರೀಹರಿಚರಿತೆಯಂತಹ ಕಾವ್ಯ, ಮಲೆದೇಗುಲದಂತಹ ಕವನಗುಚ್ಛದಲ್ಲಲ್ಲದೆ ಪು.ತಿ.ನ ರ ಹಲವಾರು ಬಿಡಿ ಕವನಗಳಲ್ಲಿಯೂ ಅವರ ರಸದೃಷ್ಟಿ ಅನುಭವವೇದ್ಯವಾಗುತ್ತದೆ. ಕೇವಲ ಅಧ್ಯಾತ್ಮ ಮತ್ತು ಭಕ್ತನ ದೃಷ್ಟಿಯಲ್ಲದೆ, ಒಂದು ರೀತಿಯ ಶಿಶು ಹೃದಯದ ಅಚ್ಚರಿ ಮತ್ತು ಕುತೂಹಲಗಳನ್ನು ನಾವಲ್ಲಿ ಕಾಣಬಹುದು. ರಂಗವಲ್ಲಿ ಕವನದಲ್ಲಿ ಇದು ವ್ಯಕ್ತಗೊಳ್ಳುತ್ತದೆ. 'ಜಗತ್ತಿನ ಬಗೆಗೆ, ಬದುಕಿನ ಬಗೆಗೆ ಎಂದೂ ಅಚ್ಚರಿ, ಕುತೂಹಲಗಳನ್ನು ಕಳೆದುಕೊಳ್ಳಬೇಡಿ' - ಎಂದು ಹೇಳುವ ಆಂಗ್ಲ ಲೇಖಕನ ಮಾತುಗಳು ನೆನಪಿಗೆ ಬರುತ್ತವೆ. ರಂಗವಲ್ಲಿ ಕವನದಲ್ಲಿ ಇದು ಸಿದ್ದವಾಗುತ್ತದೆ. ಅಂದು ಬೆಟ್ಟವನ್ನು ಹತ್ತಿ ದೇಗುಲಕ್ಕೆ ಹೋಗುವಾಗ ಪು.ತಿ.ನ ಬಾಲಕನೊಬ್ಬನನ್ನು  ಜೊತೆಯಲ್ಲಿ ಕರೆದುಕೊಂಡು ಹೋದರೋ ಇಲ್ಲವೋ - ಇಂದು ನಮಗೆ ಇದು ತಿಳಿದಿಲ್ಲವಾದರೂ, ಅವರೊಡನೆ ಬೆಟ್ಟವೇರಿ ಹೋದದ್ದು ಅವರಲ್ಲಿ ಸದಾ ಜಾಗೃತವಾಗಿರುತ್ತಿದ್ದ ಶಿಶುಹೃದಯ - ಎನ್ನಬಹುದು.  ಬೆಟ್ಟವನ್ನೇರಿ ದೇಗುಲಕ್ಕೆ ಪ್ರದಕ್ಷಿಣೆ ಬಂದು, ದೇಗುಲದ ಬಾಗಿಲು ತೆರೆದ ನಂತರ ಅಲ್ಲಿನ ಸುಂದರ ವಿಗ್ರಹ ಹೊಳೆಹೊಳೆಯುತ್ತಿದ್ದ ಕಿರೀಟ-ಕುಂಡಲ-ಭುಜಕೀರ್ತಿಗಳನ್ನು ನೋಡುತ್ತಿದ್ದ ಭಕ್ತಹೃದಯವನ್ನು ತತ್ಕ್ಷಣೆ ಶಿಶುಹೃದಯ ಆವರಿಸುತ್ತದೆ. ದೇಗುಲದೆದುರು ಮುದುಕಿಯೊಬ್ಬಳು ರಂಗೋಲಿಯಲ್ಲಿ ಸೃಷ್ಟಿಸುತ್ತಿದ್ದ ಸುಂದರ ವಿನ್ಯಾಸದ ಜೀವಂತ ಕಲೆಗೆ ಆ ಶಿಶುಹೃದಯವು  ಆಕೃಷ್ಟವಾಗಿ ಮಂತ್ರಮುಗ್ಧವಾಗಿ ನಿಲ್ಲುತ್ತದೆ. ರಂಗೋಲಿಯಲ್ಲಿ ಬಿಡಿಸಿದ್ದ ಸಹಸ್ರದಳ ಪದ್ಮವು, ಸುಂದರ ವಿನ್ಯಾಸ ರೇಖೆಗಳು, ಗಿಳಿಗಳು, ಈ ವಿನ್ಯಾಸದ ಚೆಲುವು ಅವರನ್ನು ಸೆಳೆದುಕೊಳ್ಳುವಂತೆಯೇ, ಮಲೆದೇಗುಲದಲ್ಲಿ ದೇಗುಲದ  ವಾಸ್ತುಶಿಲ್ಪ, ಸೌಂದರ್ಯವಿನ್ಯಾಸಗಳು ಅವರನ್ನು ಆಕರ್ಷಿಸುತ್ತವೆ.

ಶ್ರೀಕೃಷ್ಣ ಬಲರಾಮರು ತಮ್ಮ ಎಳವೆಯಲ್ಲಿ ಗೋಕುಲದ ಹಳ್ಳಿಗರ ನಡುವೆ ಬೆಳೆದದ್ದು, ಅವರ ಬಾಳಿನಲ್ಲಿ ಮತ್ತು ನಮ್ಮ ಭಾರತದೇಶದಲ್ಲಿ ಸಂಭವಿಸಿದ ಮಹತ್ತರ ಘಟನೆ ಎಂಬುದು ಪು.ತಿ.ನ.ರ ನಂಬಿಕೆ. ಕೃಷ್ಣನ ವ್ಯಕ್ತಿತ್ವ ವಿಕಸಿಸಿ ರೂಪುಗೊಳ್ಳಲು ಗೋಕುಲವಾಸ ಭದ್ರ ಬುನಾದಿ ಆಯಿತು - ಎನ್ನುತ್ತಾರೆ.

ಶ್ರೀಹರಿಚರಿತೆಯ ಅರಿಕೆಯಲ್ಲಿ ಕರ್ಮಯೋಗವನ್ನು ಪು.ತಿ.ನ ವಿಶಿಷ್ಟ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಸಂಕ್ಷೇಪವಾಗಿ ಹೇಳುವುದಾದರೆ - ಅಸಂಗ್ರಹದದಿಂದ ಲೋಕಸಂಗ್ರಹ, ಹಿತವರಿತ ವಿತರಣೆ, ತ್ಯಾಗದಿಂದ ಭೋಗ, ಕರ್ಮರತಿಯಿಂದ ನೈಷ್ಕರ್ಮ್ಯ. "ವ್ಯಕ್ತ್ಯರ್ಪಿತ-ಕರ್ಮಫಲ-ಪರಿಚಲನ-ಯೋಗಕ್ಷೇಮ-ವಿತರಣಾಚಕ್ರ-ಸಂವಹನ-ಪ್ರಕ್ರಿಯೆ' ಎಂದು ಇದನ್ನು ಅವರು ಸೂತ್ರೀಕರಿಸುತ್ತಾರೆ.  ಈ ಚಕ್ರಪರಿವರ್ತನೆ ಸಮಷ್ಟಿಯ ಪ್ರತಿನಿಧಿಗಳಾದ ಲೋಕನಾಯಕರ ಕರ್ತವ್ಯ ಎನ್ನುವುದು ಅವರ ಅಭಿಮತ. ಇಂತಹ ಎಲ್ಲಾ ಚಿಂತನೆಗಳೂ ಮೇಳೈಸಿ ಪು.ತಿ.ನ.ರ ರಸದರ್ಶನ ರೂಪುಗೊಂಡಿದೆ.

Author(s)

About:

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.

Prekshaa Publications

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhāni Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...