1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೫)
“ಚಲೋ ದಿಲ್ಲೀ!”
ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ.
1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!”
ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು.