ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 7
{ಮಂಜುಭಾಷಿಣಿ} ರಥೋದ್ಧತಾವೃತ್ತದ ಪ್ರತಿ ಪಾದದ ಮೊದಲಿಗೆ ಎರಡು ಲಘುಗಳನ್ನು ಬೆಸೆದರೆ ‘ಮಂಜುಭಾಷಿಣಿ’ ಸಿದ್ಧವಾಗುತ್ತದೆ:
ರಥೋದ್ಧತಾ
– u – u u u – u – u –
ಮಂಜುಭಾಷಿಣಿ
[u u] – u – u u u – u – u –
ಇದು ಸಂಸ್ಕೃತಸಾಹಿತ್ಯದಲ್ಲಿ ತಕ್ಕಮಟ್ಟಿಗೆ ನೆಲೆಗೊಂಡಿದೆ. ಮಾಘನೇ ಮೊದಲಾದ ಕವಿಗಳು ಇದನ್ನು ಕಥನಕ್ಕೆ ಕೂಡ ಬಳಸಿದ್ದಾರೆ. ಒಂದೆರಡು ಉದಾಹರಣೆಗಳನ್ನೀಗ ಕಾಣೋಣ:
ಬೆಲೆಚೀಟಿ ನಿನ್ನ ಬೆಲೆಯಂ ಪೊಗಳ್ವುದೇಂ
ತಲೆಮಾಸಿಕೊಂಡ ಬಳಿಕಲ್ತೆ ಸಲ್ವೆಯಯ್ |