ಗೋವಿಂದ ಪೈಗಳ ಕಾವ್ಯದ ಮರುನೋಟ - 4
ಪರಂಪರೆಯ ಪರಿಜ್ಞಾನ ಮತ್ತು ಸಂಪ್ರದಾಯದ ಮುಂದುವರಿಕೆಯ ಜೊತೆಗೆ ಪ್ರಯೋಗಶೀಲತೆ ಹಾಗೂ ನೂತನ ಆವಿಷ್ಕಾರಗಳ ವಿಷಯದಲ್ಲಿ ಕೂಡ ಪೈಗಳಿಗೆ ಆಸ್ಥೆಯುಂಟು. ಇದಕ್ಕೆ ಅವರ ಛಂದೋನುಶೀಲನವೂ ಒಂದು ಸಮರ್ಥ ನಿದರ್ಶನ. ಆದಿಪ್ರಾಸದ ಪಾಲನೆ ಮತ್ತು ಅದರ ನಿರಾಸದೊಂದಿಗೆ ಪೈಗಳು ಅಲ್ಲಲ್ಲಿ ಸಾಂಪ್ರದಾಯಿಕ ವೃತ್ತಗಳನ್ನು ಹಿಗ್ಗಿಸುವ ಇಲ್ಲವೇ ಹೊಸ ಬಗೆಯ ರಚನೆಗೆ ಒಗ್ಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ.
