Literature

ಅದ್ವೈತಂ ಸುಖದುಃಖಯೋಃ - 1

ಮಹಾಕವಿ ಭವಭೂತಿಯ ‘ಉತ್ತರರಾಮಚರಿತ’ ನಾಟಕವು ತನ್ನ ಘನತೆ-ಮಹೋನ್ನತಿಗಳಿಂದ ಅನನ್ಯವೆನಿಸಿದೆ. ಸೀತಾ-ರಾಮರ ಅಮೃತದಾಂಪತ್ಯವನ್ನು ಇದು ಕಂಡರಿಸಿರುವ ಪರಿ ಇಡಿಯ ರಾಮಾಯಣಸಾಹಿತ್ಯದಲ್ಲಿಯೇ ಮಿಗಿಲೆನಿಸಿದೆ. ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಂಘರ್ಷ ತಲೆದೋರಿದಾಗ ಸಂವೇದನಶೀಲರಾದ ವ್ಯಕ್ತಿಗಳು ಹೇಗೆ ತಳಮಳಿಸುತ್ತಾರೆ ಮತ್ತು ಅವರ ಅಂತರಂಗದ ಮೌಲ್ಯಪ್ರಕ್ಷೋಭ ಏನೆಲ್ಲ ಅವಸ್ಥೆಗಳನ್ನು ಪಡೆಯುತ್ತದೆಂಬ ಜೀವನದರ್ಶನವನ್ನು ಈ ಕೃತಿಯು ಕಂಡರಿಸುವಂತೆ ಹೆಚ್ಚಿನ ಕಾವ್ಯಗಳು ರೂಪಿಸುವುದಿಲ್ಲ. ಈ ಕಾರಣದಿಂದಲೇ ತತ್ತ್ವಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರಗಳ ಮೂರ್ಧನ್ಯವಿದ್ವಾಂಸರಾದ ಪ್ರೊ|| ಎಂ. ಹಿರಿಯಣ್ಣನವರು ‘ಉತ್ತರರಾಮಚರಿತ’ವನ್ನು ವಿಶೇಷವಾಗಿ ಮೆಚ್ಚಿಕೊಳ್ಳುತ್ತಾರೆ.[1]

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 7

ಆದಿಪ್ರಾಸದ ನಿರ್ಬಂಧ ಇಲ್ಲವಾದ ಬಳಿಕ ಮತ್ತೆ ಕನ್ನಡಕ್ಕೆ ಶ್ಲೋಕ ಬರಬಹುದಿತ್ತು  ಎಂಬ ಪ್ರಶ್ನೆ ಏಳಬಹುದು. ಇದಕ್ಕೂ ಕಾರಣವಿದೆ. ಆದಿಪ್ರಾಸ ಅಳಿಯುವ ಹೊತ್ತಿಗೆ ಹಳಗನ್ನಡವಿರಲಿ, ನಡುಗನ್ನಡವೂ ಅಳಿದು ಹೊಸಗನ್ನಡದ ಯುಗ ಮೊದಲಾಗಿತ್ತು. ನಾವು ಈ ಮೊದಲೇ ಕಂಡಂತೆ ಶ್ಲೋಕಕ್ಕೆ ಒಗ್ಗುವ ಭಾಷೆ ಹಳಗನ್ನಡವೇ. ಅಷ್ಟೇಕೆ, ಕಂದ-ವೃತ್ತಗಳಿಗೆಲ್ಲ ಇದೇ ಅನಿವಾರ್ಯ. ನಡುಗನ್ನಡ-ಹೊಸಗನ್ನಡಗಳಲ್ಲಿ ಈ ಎಲ್ಲ ಬಂಧಗಳು ನೀರಿಲ್ಲದ ಸರೋವರದ ಮೀನುಗಳಂತೆಯೇ ಸರಿ. ಹೀಗಾಗಿ ಶ್ಲೋಕದ ಪ್ರವೇಶಕ್ಕೆ ನವೋದಯವೂ ಒದಗಿಬರಲಿಲ್ಲ. ಮತ್ತೂ ಮುಂದಿನ ಕಾಲದಲ್ಲಿ ಛಂದಸ್ಸೇ ಬಹಿಷ್ಕೃತವಾದುದು ತಿಳಿದೇ ಇದೆ. ಪರಿಸ್ಥಿತಿ ಹೀಗಿರುವಾಗ ಶ್ಲೋಕಕ್ಕೆ ಆಸ್ಪದವೆಲ್ಲಿ?

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 6

ಕರ್ಷಣಜಾತಿಗಳು ಮಾತ್ರಾಜಾತಿಗಳಂತೆಯೇ ಏಕದೇಶಸ್ಥಿರವಾಗಿವೆ. ಈ ಸ್ಥಿರತೆ ಪದ್ಯಬಂಧಗಳ ಚಾಕ್ಷುಷರೂಪದಲ್ಲಿರದೆ ಶ್ರಾವಣರೂಪದಲ್ಲಿ ಕಾಣಸಿಗುತ್ತದೆ. ಅಂದರೆ, ಕರ್ಷಣಜಾತಿಗಳ ಭಾಷಾಪದಗತಿ ಗದ್ಯಕ್ಕಿಂತ ಬಲುಮಟ್ಟಿಗೆ ಬೇರೆ ಎನಿಸದ ಹಾಗೆ ಅನಿಬದ್ಧವಾಗಿ ತೋರುತ್ತದೆ. ಅವುಗಳ ಪದ್ಯಗತಿ ಛಂದಃಪದಗತಿಯ ಮೂಲಕ ಮಾತ್ರ ಉನ್ಮೀಲಿಸಬೇಕು. ಆದುದರಿಂದಲೇ ಇವುಗಳ ಭಾಷಾಪದಗತಿ ಹೇಗೇ ಇದ್ದರೂ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಬಗೆಯ ಮೂಲಭೂತ ಲಯಗಳಿಗೆ ಒಗ್ಗುವಂತೆ ಪದ್ಯಗತಿ ಕರ್ಷಣದ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಸಾಂಗತ್ಯದಂಥ ಒಂದು ಬಂಧ ಶ್ರಾವಣರೂಪದಲ್ಲಿ ನಾಲ್ಕು ಬಗೆಯ ಗತಿಗಳಿಗೂ ಅಳವಟ್ಟಾಗ ಎಷ್ಟೆಲ್ಲ ಮಾತ್ರೆಗಳ ಆಕೃತಿವ್ಯತ್ಯಾಸವನ್ನು ಹೊಂದುವುದೆಂಬ ನಿದರ್ಶನದ ಮೂಲಕ ಮನಗಾಣಬಹುದು:

Kathāmṛta - 133 - The Story of the Bṛhatkathā-śloka-saṅgraha

Early next morning they heard a resounding thunder in the cloudless sky. When the sages turned to Divākaradeva questioningly, he said, ‘This is the sound made by the kettle drums in the air-chariots. Since it’s coming from inside, it sounds like thunder. Here comes our master now, lo behold!’ The sky acquired a tinge of gold as if it were enveloped in the colours of rainbow and lightning. Then, several air-chariots glowing with hues of an array of precious stones became visible. The emperor’s chariot landed right in front of Kāśyapa’s hermitage.

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 5

ಈ ಮುನ್ನ ಕಾಣಿಸಿದ ಮಾದರಿಗಳಲ್ಲಿ ಹ್ರಸ್ವ ಮತ್ತು ಮಧ್ಯಮಗಾತ್ರದ ಬಗೆಬಗೆಯ ಅಕ್ಷರ / ಮಾತ್ರಾಘಟಕಗಳನ್ನು ಪರಿಶೀಲಿಸಿದಾಗ ‘ಇವೇ ಪರಿಮಾಣಗಳಲ್ಲಿ ಹೆಚ್ಚಿನ ಭಾಷಾಪದಗಳು ರೂಪುಗೊಳ್ಳುವುವೇ?’ ಎಂಬ ಸಂದೇಹ ಕೆಲವರಲ್ಲಿ ಮೂಡಬಹುದು. ಭಾಷಾಪದಗಳು ತಮ್ಮ ಪರಿಮಾಣದಲ್ಲಿ ಲಯಾನ್ವಿತವಾದ ಛಂದಃಪದಗಳಿಗಿಂತ ಹೆಚ್ಚು-ಕಡಮೆಗಳನ್ನು ಹೊಂದಿರುತ್ತವೆ ಎಂಬುದು ಅವರ ಸಂದೇಹಕ್ಕೆ ಕಾರಣ. ಆದರೆ ಇಂಥ ಸಂಶಯ ನಿಲ್ಲುವಂಥದ್ದಲ್ಲ.

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 4

ಇನ್ನು ಮುಂದೆ ಶ್ಲೋಕದಲ್ಲಿ ಬರಬಹುದಾದ ವಿಭಿನ್ನಸಂಖ್ಯೆಯ ಮಾತ್ರಾಗಣಗಳ ಕೆಲವು ಪ್ರಮುಖ ಸಾಧ್ಯತೆಗಳನ್ನು ಪರಿಶೀಲಿಸೋಣ.

ಅ) ಮೂರು ಮಾತ್ರೆಗಳ ಘಟಕಗಳುಳ್ಳ ರಚನೆ:

ನಾನ | ನಾನ | ನನಾ | ನಾನ/ನಾ | ನಾನ | ನಾನ | ನನಾ | ನನಾ |

ನನಾ | ನನಾ | ನನಾ | ನಾನ/ನಾ | ನನಾ | ನಾನ | ನನಾ | ನನಾ |