Literature

Around Samasyā-pūraṇa: Examples

A note about the translation of verses:

In translating Sanskrit into English, we had to chart our course through a thoroughly challenging terrain. The reason for this is not hard to seek: the two languages have widely differing modalities of structure and substance. Sanskrit bears a stark resemblance with gold: it is naturally radiant and eminently malleable. And in translating it into English—in trying to fashion ornaments of it—we could not help corrupting it! Indeed, this is a problem that bedevils all translations.

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 7)

ಪಾಂಡವರಲ್ಲಿ ಭೀಮ, ಆಕಾರ ಮತ್ತು ಸ್ವಭಾವ ಎರಡರಲ್ಲಿಯೂ ವಿಶಿಷ್ಟನಾಗಿ ನಿಲ್ಲುತ್ತಾನೆ.  ಕಪಟ, ಕುತಂತ್ರಗಳಾಗಲೀ, ಇರದ ನೇರ ನುಡಿ ನೇರ ನಡೆಯವನು.  ಇವನ ಅಸಾಧ್ಯ ಹಸಿವಿನಿಂದಾಗಿ ಇವನಿಗೆ ವೃಕೋದರನೆಂಬ ಹೆಸರೂ ಸಹ ಇದ್ದಿತು.  ತನ್ನ ಮಗನ ಹಸಿವಿನ ಪ್ರಮಾಣ ಅರಿತಿದ್ದ ಕುಂತಿ, ಏಕಚಕ್ರನಗರದಲ್ಲಿ ಐವರು ಮಕ್ಕಳೂ ತಂದ ಭಿಕ್ಷೆಯಲ್ಲಿ ಅರ್ಧವನ್ನು ‘ಭೀಮ ಪಾಲು’ ಎಂದು ತೆಗೆದಿಡುತ್ತಿದ್ದಳು.  ಇಂಥ ಭೀಮ ದಿನ ಗಟ್ಟಳೆ ಉಪವಾಸ ಕೂಡ ಇರಬಲ್ಲವನಾಗಿದ್ದ.  ಬಕನಂತಹ ರಾಕ್ಷಸನನ್ನು, ಅದೊಂದು ವಿನೋದದ ಆಟವೆಂಬಂತೆ ತಣ್ಣಗೆ ಕೊಂದು ಬರುವ ಭೀಮ ಮಕ್ಕಳಿಂದ, ದೊಡ್ಡವರತನಕ ಎಲ್ಲರನ್ನೂ ಮುದಗೊಳಿಸುತ್ತಾನೆ.  ಭಿಕ್ಷಾನ್ನದ ರುಚಿ ಇರದ ಆಹಾರವನ್ನು ಅರೆಹೊಟ್ಟೆ ಉಂಡೂ ಉಂಡು ಬೇಸತ್ತಿದ್ದ ಭೀಮನಿಗೆ ಬಕನನ್ನು ಕೊಲ್ಲಲು ಹೊರಟಂದು ಸುಗ್ಗಿ.  ಗಾಡಿ ಅನ್ನ ಹಾಲು ತುಪ್ಪ ಭಕ್ಷ್

"ಬಿಡಿಮುತ್ತು” ಮತ್ತು “ಸುಭಾಷಿತಚಮತ್ಕಾರ: ಪಾ. ವೆಂ. ಅವರ ಅನುವಾದಗಳು

ಇನ್ನು ಮುಂದೆ ಸುಭಾಷಿತಚಮತ್ಕಾರದ ಕೆಲವೊಂದು ಅನುವಾದಗಳನ್ನು ಪರಿಶೀಲಿಸೋಣ.

ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಷ್ಚಿಕದಂಶನಮ್ |

ತನ್ಮಧ್ಯೇ ಭೂತಸಂಚಾರೋ ಯದ್ವಾ ತದ್ವಾ ಭವಿಷ್ಯತಿ ||

ಮಂಗ ಸೆರೆಯ ಕುಡಿಯಿತು,

ಮೇಲೆ ಚೇಳು ಕಡಿಯುತು,

ಮತ್ತೆ ಭೂತ ಬಡಿಯಿತು,

ಏನಕೇನೊ ಆಯಿತು (ಸು.ಚ., ಪುಟ ೯೮)

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 6)

ಯುದ್ಧಾರಂಭವಾದ ಮೇಲೆ, ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯ, ಭೀಷ್ಮ, ದ್ರೋಣ, ಕರ್ಣ ಮಹಾವೀರರ ನೆರವಿನಿಂದ ಜಯದ ಭರವಸೆ ಹೊತ್ತಿದ್ದ ದುರ್ಯೋಧನ, ತನ್ನ ತಮ್ಮಂದಿರನ್ನೂ, ಮಕ್ಕಳನ್ನೂ, ಮಿತ್ರರನ್ನು ಕಳೆದುಕೊಂಡ ಮೇಲೆ ಛಲವನ್ನು ಬಿಡುವುದಾಗಲೀ, ಈ ಭೂಮಿಯ ಮೇಲೆ ಬದುಕುವುದಾಗಲೀ ಅರ್ಥಹೀನವೆನಿಸುತ್ತದೆ ಅವನಿಗೆ.  ಹಾಗಾಗಿ ಕಡೆತನಕ ಹಗೆತನದ ಕವಚ ತೊಟ್ಟೇ ಬದುಕಿ ವೈಶಂಪಾಯನ ಕೊಳದ ಬಳಿ ಭೀಮನಿಂದ ಹತನಾಗುವ ದುರಂತನಾಯಕನಾಗುತ್ತಾನೆ.

ರಣಮುಖದೊಳೀ ಕ್ಷತ್ರಧರ್ಮದ

ಕುಣಿಕೆ ತಪ್ಪದೆ ವೇದಶಾಸ್ತ್ರದ

ಭಣಿತೆ ನೋಯದೆ ವೀರ ವೃತ್ತಿಯ ಪದದ ಪಾಡರಿದು |

ಸೆಣಸು ಸೋಂಕಿದ ಛಲದ ವಾಸಿಯೊ-

ಳಣುವ ಹಿಂಗದೆ ಜೀವದಾಸೆಗೆ

ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ || (ಗದಾಪರ್ವ 08.41)

ಬಿಡಿಮುತ್ತು” ಮತ್ತು “ಸುಭಾಷಿತಚಮತ್ಕಾರ: ತೀನಂಶ್ರೀ ಅವರ ಅನುವಾದಗಳು

ಇನ್ನು ಮುಂದೆ ಇವರಿಬ್ಬರ ಕೆಲವೊಂದು ಅನುವಾದಗಳನ್ನು ಸ್ವತಂತ್ರವಾಗಿ ಪರಿಶೀಲಿಸೋಣ. ಮೊದಲಿಗೆ ಬಿಡಿಮುತ್ತನ್ನು ಗಮನಿಸಬಹುದು.

ಚತುರ್ಮುಖಮುಖಾಂಭೋಜವನಹಂಸವಧೂರ್ಮಮ |

ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||

ನಾಲ್ಮೊಗನ ಸಾಲ್ಮೊಗದ ತಾವರೆಯ ಬನದೊಳಗೆ

ರಾಜಿಸುವ ಹಂಸರಮಣಿ

ಚಿರಕಾಲ ವಿಹರಿಸಲಿ ನನ್ನ ಮಾನಸದೊಳಗೆ

ಸರ್ವಾಂಗಧವಳೆ ವಾಣಿ (ಬಿ.ಮು., ಪುಟ ೬)

“ಬಿಡಿಮುತ್ತು” ಮತ್ತು “ಸುಭಾಷಿತಚಮತ್ಕಾರ”: ತೌಲನಿಕವಿಶ್ಲೇಷಣ

ಇನ್ನು ಮುಂದೆ ಈ ಎರಡು ಕೃತಿಗಳ ಹಲಕೆಲವು ಪದ್ಯಗಳನ್ನು ತೌಲನಿಕವಾಗಿ ಸಮೀಕ್ಷಿಸಬಹುದು. ಮೊದಲಿಗೆ ಇಬ್ಬರೂ ಅನುವಾದಕ್ಕೆ ತೆಗೆದುಕೊಂಡಿರುವ ಸಮಾನಪದ್ಯಗಳನ್ನು ಪರಿಶೀಲಿಸೋಣ.

ಕರಾರವಿಂದೇನ ಪದಾರವಿಂದಂ

      ಮುಖಾರವಿಂದೇ ವಿನಿವೇಶಯಂತಮ್ |

ವಟಸ್ಯ ಪತ್ರಸ್ಯ ಪುಟೇ ಶಯಾನಂ

      ಬಾಲಂ ಮುಕುಂದಂ ಮನಸಾ ಸ್ಮರಾಮಿ ||

ಹಸ್ತಕಮಲದಿಂದ ತನ್ನ ಚರಣಕಮಲವ

“ಬಿಡಿಮುತ್ತು” ಮತ್ತು “ಸುಭಾಷಿತಚಮತ್ಕಾರ”: ಒಂದು ತೌಲನಿಕಪರಿಚಯ

ಸಂಸ್ಕೃತಸಾಹಿತ್ಯದ ಚಿರಸುಂದರವಾದ ರಸಮಯಭಾಗಗಳಲ್ಲಿ ಸುಭಾಷಿತಗಳಿಗೆ ಮಿಗಿಲಾದ ಸ್ಥಾನವಿದೆ. ಇವನ್ನು ಭಾವಕವಿತೆಯ ಅತ್ಯುತ್ತಮಪ್ರತಿನಿಧಿಗಳೆಂದು ಕೂಡ ಕರೆಯಬಹುದು. ಜೀವನದ ಎಲ್ಲ ಮುಖಗಳನ್ನೂ ಪ್ರಕೃತಿಯ ಎಲ್ಲ ಪರಿಯ ಸೊಗಸುಗಳನ್ನೂ ಶಾಸ್ತ್ರ-ಕಲೆಗಳ ಅಸಂಖ್ಯಸ್ವಾರಸ್ಯಗಳನ್ನೂ ಸುಭಾಷಿತಗಳು ಸಮರ್ಥವಾಗಿ ಬಿಂಬಿಸಿಕೊಂಡು ಬಂದಿವೆ. ಭಾರತೀಯಸಾಹಿತ್ಯಪರಂಪರೆಯ ಕಥನೇತರಧಾರೆಯ ಸರ್ವೋಚ್ಚಸಾಧನೆಯೇ ಸುಭಾಷಿತವೆಂದರೆ ತಪ್ಪಲ್ಲ. ಇವುಗಳ ಹೂರಣವೆಷ್ಟು ಸವಿಯೋ ತೋರಣವೂ ಅಷ್ಟೇ ಸೊಗಸು. ಇಲ್ಲಿ ಬಗೆಬಗೆಯ ಛಂದಸ್ಸುಗಳ, ಪರಿಪರಿಯ ಅಲಂಕಾರಗಳ, ಕಿವಿಗಳನ್ನು ಜಕ್ಕುಲಿಸುವ ಪದಪುಂಜಗಳ ಲಾಸ್ಯ-ತಾಂಡವಗಳು ಗೌರೀಶಂಕರರ ಸಾನ್ನಿಧ್ಯವನ್ನೇ ಓದುಗರಿಗೆ ತಂದೀಯುತ್ತವೆ. ಹೀಗಾಗಿಯೇ ಸುಭಾಷಿತಗಳ ಆಕರ್ಷಣೆ ಅವಿಚ್ಛಿನ್ನ.

Principle of Mystery: The Governing Force of Creativity in S. L. Bhyrappa’s Novels

Studying the life and works of S L Bhyrappa, I strongly feel that the urge to probe into the principle of mystery around is the governing force of his creative imagination. Mystery of nature, birth, death, sexual instinct, history, the intellectual and emotional world of humans—all play a dominant role in shaping him as an individual and litterateur par excellence.