ಬಿಡಿಮುತ್ತು” ಮತ್ತು “ಸುಭಾಷಿತಚಮತ್ಕಾರ: ತೀನಂಶ್ರೀ ಅವರ ಅನುವಾದಗಳು
ಇನ್ನು ಮುಂದೆ ಇವರಿಬ್ಬರ ಕೆಲವೊಂದು ಅನುವಾದಗಳನ್ನು ಸ್ವತಂತ್ರವಾಗಿ ಪರಿಶೀಲಿಸೋಣ. ಮೊದಲಿಗೆ ಬಿಡಿಮುತ್ತನ್ನು ಗಮನಿಸಬಹುದು.
ಚತುರ್ಮುಖಮುಖಾಂಭೋಜವನಹಂಸವಧೂರ್ಮಮ |
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||
ನಾಲ್ಮೊಗನ ಸಾಲ್ಮೊಗದ ತಾವರೆಯ ಬನದೊಳಗೆ
ರಾಜಿಸುವ ಹಂಸರಮಣಿ
ಚಿರಕಾಲ ವಿಹರಿಸಲಿ ನನ್ನ ಮಾನಸದೊಳಗೆ
ಸರ್ವಾಂಗಧವಳೆ ವಾಣಿ (ಬಿ.ಮು., ಪುಟ ೬)