“ಝಳದ ಝಾಡಿಗೆ ಹೆದರಿ ಸೂರ್ಯನನುಳುಹುವನೆ ಕಲಿರಾಹು”, “ಕರಣ ಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ”, “ಉರಿವ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ”, “ಗರ್ಭ ಬಲಿಯದೇ ಹಗಲನೀದುದು ರಾತ್ರಿ”, “ಕುಡಿಕುಡಿದುಗುಳುತ್ತಿರ್ದವು ತಿಮಿರವನು ಕರಿ ದೀಪ್ತಿ ಕಾಳಿಗಳು”, “ಮಂಜಿನ ಮಳೆಗೆ ಕುಲಗಿರಿ ಕರಗುವುದೇ”, “ಮೇಘದ ಮರೆಯ ಹೊಕ್ಕರೆ ರಾಹು ಬಿಡುವನೇ ಉರಿವ ರವಿ ಮಂಡಲವ”, “ಅರಗಿನರಸನ ಬಾಗಿಲಲಿ ದಳ್ಳುರಿಗೆ ಕಡವೇ”, ಇಂತಹವು ಸಾವಿರಾರು ಪ್ರತಿಮೆಗಳು, ಕುಮಾರವ್ಯಾಸನ ಭಾಷಾ ಪ್ರಯೋಗದಲ್ಲಿ ಹಾಸುಹೊಕ್ಕಾಗಿವೆ. ಅಭಿಮನ್ಯುವಿನ ಮರಣದ ನಂತರ ಪಾಂಡವರ ದುಃಖವನು...
“ರೂಪಕ-ಪ್ರತಿಮೆ ಭಾಷಾಪ್ರಯೋಗ” ಇತ್ಯಾದಿ ಕುಮಾರವ್ಯಾಸನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಬಣ್ಣಿಸುತ್ತಾರೆ. ಅವನು ಉಪಯೋಗಿಸುವ ಸಾಧಾರಣ ಭಾಷೆ ಕೂಡ ರೂಪಕದ ದೀಪ್ತಿಯಿಂದ ಪ್ರಕಾಶಿಸುತ್ತದೆ. ಈತನ ರೂಪಕ ರಚನಾಸಾಮರ್ಥ್ಯಕ್ಕೆ ನಿದರ್ಶನಕೊಡಬೇಕೆಂದರೆ ಇಡೀ ಗ್ರಂಥವನ್ನೇ ಉದ್ಧರಿಸಬೇಕಾಗುತ್ತದೆ. ಕುಮಾರವ್ಯಾಸನ ರೂಪಕಗಳು, ಪ್ರತಿಮೆಗಳು ಪ್ರಾಕೃತಿಕ ಘಟನೆಗಳಿಂದ, ನಿತ್ಯ ಜೀವನದ ಸಾಮಾನ್ಯ ಘಟನೆಗಳಿಂದ, ಹಲವಾರು ರೀತಿಯ ತನ್ನದೇ ಜೀವನದ ಅನುಭವಗಳಿಂದ ಹಾಗೂ ಪೌರಾಣಿಕ ಘಟನೆ, ಪಾತ್ರಗಳ ಆಧಾರದಿಂದ ಸುಂದರವಾಗಿ ಶಕ್ತವಾಗಿ ಮೈದಳೆದು ನಿಲ್ಲುತ್ತವೆ. ಕುಮಾರವ್ಯಾಸನ...
ಈ ಭಾರತಕಥಾನಕದಲ್ಲಿ ಮೂಡಿ ಬಂದಿರುವ ಸ್ನೇಹದ ಚಿತ್ರಣ ಅತ್ಯಂತ ಅಮೂಲ್ಯವಾದದ್ದು.  ಪರಸ್ಪರ ದ್ವೇಷ, ಅಸೂಯೆ, ಮತ್ಸರದ ಪ್ರಪಂಚದಲ್ಲಿಯೂ, ಸ್ನೇಹ, ಪ್ರೀತಿಗಳು ಮೊಳೆತು ಬೆಳೆಯುವ ಪ್ರಕ್ರಿಯೆ, ಒಳಿತುಕೆಡಕುಗಳ, ಸತ್ವ ರಜೋ ತಮೋಗುಣಗಳ ಸಮ್ಮಿಳನವಿಲ್ಲದೆ ಜೀವನವಿರದೆಂಬುದನ್ನು ಅಭಿವ್ಯಕ್ತಿಸುತ್ತದೆ. “ಮಮ ಪ್ರಾಣಾ ಹಿ ಪಾಂಡವಾಃ” ಎನ್ನುವ ಕೃಷ್ಣ ಮತ್ತು ಕೃಷ್ಣಾರ್ಜುನರ ಸ್ನೇಹ, ಮತ್ತೊಂದೆಡೆ ಕುಲಹೀನನೆಂದು ಜಗವೆಲ್ಲ ತಿರಸ್ಕರಿಸುತ್ತಿದ್ದ ಅಸಮಾನ ಪರಾಕ್ರಮಿ ಕರ್ಣನನ್ನು ತನ್ನ ಅಂತರಂಗದ ಮಿತ್ರನನ್ನಾಗಿ ಮಾಡಿಕೊಂಡು ಸ್ನೇಹದ ಹೊಳೆ ಹರಿಸುವ ದುರ್ಯೋಧನನ ಸ್ನೇಹ.  ಅದೇ...
ಕರ್ಣ ಶಿಶುವಾಗಿದ್ದಾಗಿನಿಂದಲೂ ಮನ ಸೆಳೆವ, ಮನಸ್ಸನ್ನು ಕರಗಿಸುವಂತಹ ಪಾತ್ರ.  ಈ ಮಗುವಿನ ಮುಗ್ಧಮನೋಹರ ಚಿತ್ರಣವನ್ನು ಮರೆಯುವವರಾರು?  ಹೊಳೆ ಹೊಳೆದು, ಹೊಡಮರಳಿ ನಡು ಹೊ- ಸ್ತಿಲಲಿ ಮಂಡಿಸಿ ಬೀದಿ ಬೀದಿ ಗಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ | ಲಲಿತರತ್ನದ ಬಾಲದೊಡಿಗೆಯ ಕಳಚಿ ಹಾಯ್ಕುವ ಹೆಸರು ಜಗದಲಿ ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ || (ಆದಿಪರ್ವ 3.27)  ಲೋಕವೆಲ್ಲಾ ಸೂತಪುತ್ರನೆಂದು ಹೀಗಳೆಯುತ್ತಿದ್ದಾಗ, ದುರ್ಯೋಧನ ಕರ್ಣನನ್ನು ಸ್ನೇಹದಿಂದ ಆದರಿಸಿ ರಾಜನ ಸ್ಥಾನಮಾನವನ್ನು ಕೊಟ್ಟಿದ್ದರಿಂದಾಗಿ, ಸ್ವಭಾವತಃ...
ಕುಮಾರವ್ಯಾಸನಲ್ಲಿ ಕಂಡು ಬರುವ ಯುದ್ಧ ತಂತ್ರ (Stratergy of War)   ಕುರುಕ್ಷೇತ್ರದಲ್ಲಿನ ಮಹಾಯುದ್ಧದ ತಂತ್ರ ವಿನ್ಯಾಸಗಳು, ಯುದ್ಧದ ಯೋಜನೆಗಳು ವೈವಿಧ್ಯಮಯವಾಗಿವೆ.  ಪದಾತಿಗಳು ಎದುರು ಎದುರು ಕಾದಿದರೆ, ರಥಿಕರು, ಅಶ್ವ, ಗಜ, ಸೈನಿಕರು ಎದುರೆದುರು ಹೋರಾಡುತ್ತಾರೆ.  ಇವರೆಲ್ಲರೂ ಸೇನಾಧಿಪತಿಯ ಯುದ್ಧ ಯೋಜನೆಯಲ್ಲಿ ಸಿಕ್ಕು ನುಗ್ಗಾಗುವ ಬರಿ ಕಾಯಿಗಳು.  ದ್ರೋಣ ಗರುಡ ವ್ಯೂಹ ರಚಿಸಿದರೆ – ಗರುಡ ಆಕಾರದಲ್ಲಿ ಸೈನ್ಯವನ್ನು ಅಣಿಮಾಡಿ ನಿಲ್ಲಿಸುವುದು - ಪ್ರತಿಯಾಗಿ ದೃಷ್ಟದ್ಯುಮ್ನ ಅರ್ಧ ಚಂದ್ರೋತ್ಕರ ವ್ಯೂಹ ರಚಿಸುತ್ತಾನೆ.  “ಕಾಲನಬಳಗಕೌತಣವಾದಂತೆ” (...
  ಕುಮಾರವ್ಯಾಸನ ಯುದ್ಧವರ್ಣನೆಯಲ್ಲಿನ ಕಲ್ಪನಾಶಕ್ತಿ ಹಾಗೂ ಯುದ್ಧದ ಬಗೆಗೆ ಅವನ ಅಭಿಮತ              ಮಹಾಭಾರತದ, ಮಹಾಕಥಾನಕದಲ್ಲಿ ಕುರುಕ್ಷೇತ್ರದಲ್ಲಿ ಹದಿನೆಂಟು ದಿವಸ, ಹದಿನೆಂಟು ಅಕ್ಷೌಹಿಣಿ ಸೈನ್ಯದ ನಡುವೆ ನಡೆಯುವ ಮಹಾಯುದ್ಧವಲ್ಲದೆ, ಅನೇಕ ಸಣ್ಣ ಪುಟ್ಟ ಯುದ್ಧಗಳು, ಕಾಳಗಗಳ ವಿವರಣೆ, ವರ್ಣನೆಗಳು, ವೈವಿಧ್ಯಮಯವಾಗಿ ನಿರೂಪಿಸ್ಪಲ್ಪಟ್ಟಿವೆ.  ಕುಮಾರವ್ಯಾಸನ ಯುದ್ಧದ ವರ್ಣನೆಗಳು ಕದನಕುತೂಹಲರಾಗವನ್ನು ವಿಸ್ತಾರಮಾಡಿದಂತೆ ನಿಧಾನವಾಗಿ ಆರಂಭಗೊಂಡು, ಧಪ ಧಪ ಧಪ ಸಾ ಎಂದು ಸುರಿಮಳೆಯಾಗಿ ಸುರಿದು ಮತ್ತೆ ಇಳಿಮುಖವಾಗಿ ಶಾಂತ ಮುಕ್ತಾಯ ಕಂಡಂತೆ, ಸಾವಿನ...
ಆ ರಥದ ಸ್ವರೂಪದ ವಿವರಣೆಯನ್ನು ಓದಿದ ಮೇಲೆ ರಥ ಎಂದರೆ ಹೇಗಿರಬಹುದೆಂಬ ಬೃಹತ್ ಕಲ್ಪನೆ ನಮ್ಮ ಮುಂದೆ ಸುಳಿಯುತ್ತದೆ.  ಅರಸ ಕೇಳೈಹತ್ತು ಸಾವಿರ- ತುರಗನಿಕರದ ಲಳಿಯ ದಿವ್ಯಾಂ- ಬರದ ಸಿಂಧದ ಸಾಲ ಸತ್ತಿಗೆಗಳ ಪತಾಕೆಗಳ | ಖರರುಚಿಯ ಮಾರಾಂಕವೋ ಸುರ- ಗಿರಿಯ ಸೋದರವೋ ಮೃಗಾಂಕನ ಮರುದಲೆಯೊ ಮೇಣೆನಲು ರಥ ಹೊಳೆದುದಂಬರದಿ || (ಅರಣ್ಯ ಪರ್ವ 7.12) ಇಂತಹ ದಿವ್ಯರಥವನ್ನು ಏರಿದ ಅರ್ಜುನನನ್ನು ಮಾತಲಿ “ಧೃಢವಾಗು” ಎಂದು ಹೇಳಿ ಕುದುರೆಗಳನ್ನು ಚಪ್ಪರಿಸುತ್ತಾನಂತೆ – ವಿಮಾನ ಮೇಲೇರುವಾಗ ಬೆಲ್ಟ್‍ಗಳನ್ನು ಕಟ್ಟಿಕೊಳ್ಳಿ ಎನ್ನುವಂತೆ – ರಥ ಮೇಲೇರುತ್ತಿದ್ದಂತೆ...
ಕುಸುಮ ಕೋಮಲೆಯೆನಿಸಿದ್ದ ದ್ರೌಪದಿ, ಸೋದರರ ಬಗೆಗೆ ಅಮಿತ ಪ್ರೇಮವುಳ್ಳ, ಭೀಮ ಹಿಂದೆ ತಮಗಾದ ಒಂದೊಂದು ಅನ್ಯಾಯವನ್ನೂ, ಅಪಮಾನವನ್ನೂ ನೆನೆಯುತ್ತ ಭೀಭತ್ಸ ಎನಿಸುವಂತಹ ಕೃತ್ಯಕ್ಕೆಳಸಿ, ಅದರಲ್ಲಿ ಸಂತೃಪ್ತಿ ಕಾಣುವುದನ್ನು ನೋಡಿವಾಗ, ಎಲ್ಲ ದ್ವೇಷ, ಸೇಡು, ಅಪಮಾನಗಳೂ, ಇಂತಹ ಕೃತ್ಯಗಳಲ್ಲಿ ಸಮಾಧಾನ ಪಟ್ಟುಕೊಳ್ಳುವಂತಹ ಮಾನವನ ಮೂಲ ಪ್ರವೃತ್ತಿಯಲ್ಲಿರುವ ಸಾರ್ವಕಾಲಿಕ ಸತ್ಯ ಗೋಚರವಾಗುತ್ತದೆ.  ಪ್ರತಿಹಿಂಸೆಯಿಲ್ಲದೇ ಸೇಡಿಗೆ ಶಾಂತಿಯಿಲ್ಲವೆನಿಸುತ್ತದೆ.  ಭೀಮ ದ್ರೌಪದಿಯರಾಗಬಹುದು, ಅಗಾಮೆಮ್ನನ್ ನ (Agamemnon) ಪತ್ನಿ ಕ್ಲೈತಮ್ನೆಸ್ತ್ರಾ (Clytemnestra)...
ಅಂದು ರಾತ್ರಿ ದ್ರೌಪದಿ ಏನು ಮಾಡಬೇಕೆಂಬುದನ್ನು ಸೂಚಿಸಿ, ರಾತ್ರಿ ಕೀಚಕನ ಬಳಿಗೆ ಸೈರಂಧ್ರಿಯ ವೇಷತೊಟ್ಟು ವೈಯಾರವಾಗಿ ಬರುವ ಭೀಮನ ರೂಪು ಹೀಗಿತ್ತಂತೆ ಉರಿವ ಮಾರಿಯ ಬೇಟದಾತನು ತುರುಗಿದನು ಮಲ್ಲಿಗೆಯ ಮೊಗ್ಗೆಯ ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ | ಮೆರೆವ ಗಂಡುಡಿಗೆಯ ರಚಿಸಿದ ಸೆರಗಿನೊಯ್ಯರದಲಿ ಸುರಗಿಯ ತಿರುಹುತಿರುಳೊಬ್ಬನೆ ನಿಜಾಲಯ ದಿಂದ ಹೊರವಂಟ || (ವಿರಾಟ ಪರ್ವ 3.81)  ಕೀಚಕನೊಡನೆ ಯುದ್ಧ ಮಾಡಲು ಭೀಮನ ಬಳಿ ತನ್ನ ದೇಹ ತನ್ನ ಬಾಹುಗಳೂ ಮುಷ್ಠಿಗಳಲ್ಲದೆ ಬೇರಾವ ಆಯುಧಗಳೂ ಇಲ್ಲ.  ಅವನ ದೇಹವೇ ಒಂದು ಅಸಾಧಾರಣಶಕ್ತಿಕೇಂದ್ರಿತ...
‘ಸಭಾಪರ್ವ’ದಲ್ಲಿ ಕುಮಾರವ್ಯಾಸ ಎರಡು ಸಭಾಭವನಗಳನ್ನು ಪರಿಚಯಿಸುತ್ತಾನೆ.  ಎರಡೂ ಭವನಗಳು ನಿರ್ದಿಷ್ಟ ಕಾಲಘಟ್ಟವೊಂದರಲ್ಲಿ, ಭಾರತದಲ್ಲಿ ವಾಸ್ತು ಕಲೆಯು ಸಾಧಿಸಿದ್ದ ಔನ್ನತ್ಯದ ಪ್ರತೀಕಗಳೆನ್ನಬಹುದು.  ಮೊದಲನೆಯ ಸಭಾಭವನ, ಧರ್ಮರಾಯನ ಇಂದ್ರಪ್ರಸ್ಥದಲ್ಲಿ ದೇವಶಿಲ್ಪಿ ಮಯನಿಂದ ನಿರ್ಮಿತವಾದದ್ದು.  ಈ ಸಭಾಭವನನಿರ್ಮಾಣದ ಉದ್ದೇಶ ರಾಜಸೂಯಯಾಗವನ್ನಾಚರಿಸುವ ಧಾರ್ಮಿಕ, ಸಾತ್ತ್ವಿಕ ಉದ್ದೇಶ.  ಸಹಸ್ರಾರು ರಾಜರು, ಋಷಿಗಳು, ಬ್ರಾಹ್ಮಣರು ಮತ್ತು ಸಮಾಜದ ಉಳಿದ ಎಲ್ಲರೂ ಸೇರಿ, ವೇದಗೋಷ್ಠಿ, ವಿದ್ವತ್‍ಗೋಷ್ಠಿ ಮುಂತಾದ ಅನೇಕ ಸಾಂಸ್ಕೃತಿಕ ಆಧ್ಯಾತ್ಮಿಕ...