ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 9)

‘ಸಭಾಪರ್ವ’ದಲ್ಲಿ ಕುಮಾರವ್ಯಾಸ ಎರಡು ಸಭಾಭವನಗಳನ್ನು ಪರಿಚಯಿಸುತ್ತಾನೆ.  ಎರಡೂ ಭವನಗಳು ನಿರ್ದಿಷ್ಟ ಕಾಲಘಟ್ಟವೊಂದರಲ್ಲಿ, ಭಾರತದಲ್ಲಿ ವಾಸ್ತು ಕಲೆಯು ಸಾಧಿಸಿದ್ದ ಔನ್ನತ್ಯದ ಪ್ರತೀಕಗಳೆನ್ನಬಹುದು.  ಮೊದಲನೆಯ ಸಭಾಭವನ, ಧರ್ಮರಾಯನ ಇಂದ್ರಪ್ರಸ್ಥದಲ್ಲಿ ದೇವಶಿಲ್ಪಿ ಮಯನಿಂದ ನಿರ್ಮಿತವಾದದ್ದು.  ಈ ಸಭಾಭವನನಿರ್ಮಾಣದ ಉದ್ದೇಶ ರಾಜಸೂಯಯಾಗವನ್ನಾಚರಿಸುವ ಧಾರ್ಮಿಕ, ಸಾತ್ತ್ವಿಕ ಉದ್ದೇಶ.  ಸಹಸ್ರಾರು ರಾಜರು, ಋಷಿಗಳು, ಬ್ರಾಹ್ಮಣರು ಮತ್ತು ಸಮಾಜದ ಉಳಿದ ಎಲ್ಲರೂ ಸೇರಿ, ವೇದಗೋಷ್ಠಿ, ವಿದ್ವತ್‍ಗೋಷ್ಠಿ ಮುಂತಾದ ಅನೇಕ ಸಾಂಸ್ಕೃತಿಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು, ಆದರೂ ಇದೇ ಸಭಾಭವನದಲ್ಲಿ, ಧರ್ಮಸಂಸ್ಥಾಪನೆಗೆಂದು ಕೃಷ್ಣನಿಂದ ಶಿಶುಪಾಲವಧೆಯೂ ನಡೆಯುತ್ತದೆ.  ಹಾಗೂ ಈ ಸಭೆಯ ವಾಸ್ತುವಿನ್ಯಾಸದ ಗೊಂದಲಗೊಳಿಸುವ ಚಾತುರ್ಯದಿಂದಾಗಿ, ದುರ್ಯೋಧನ ದ್ರೌಪದಿ ಮತ್ತವಳ ಸಖಿಯರಿಂದ ಪರಿಹಾಸ್ಯಕ್ಕೂ ಈಡಾಗುತ್ತಾನೆ.  ಈ ಸಭೆಯಲ್ಲಿನ ದ್ರೌಪದಿಯ ಕಿಲಕಿಲನಗು, ಇಂತಹುದೇ ಮತ್ತೊಂದು ಸಭೆಯ ನಿರ್ಮಾಣಕ್ಕೆ, ಮತ್ತಲ್ಲಿ ನಡೆಯುವ ಕೃತ್ಯಗಳಿಗೆ ನಾಂದಿಯಾಗುವುದು ವಿಪರ್ಯಾಸವೆನಿಸುತ್ತದೆ.

ಎರಡನೆಯ ಸಭಾಭವನ ಹಸ್ತಿನಾಪುರದಲ್ಲಿ, ದುರ್ಯೋಧನ ಕರೆಸಿದ ಶಿಲ್ಪಿಗಳಿಂದ ನಿರ್ಮಿತವಾದ ಅದ್ಭುತ ವಾಸ್ತು ವೈಭವದ ಭವನ.  ಇದು ನಿರ್ಮಾಣವಾಗಿರುವ ಉದ್ದೇಶ, ಪಾಂಡವರ ಸಂಪತ್ತನ್ನು ಮೀರಿಸುವ ಸಂಪತ್ತು ತನಗೂ ಇದೆಯೆಂದು ಪ್ರದರ್ಶಿಸಲು, ಹಾಗೂ ಪಾಂಡವರನ್ನು, ಈ ಸಭಾಭವನದಲ್ಲಿ ಕಪಟದ್ಯೂತದಿಂದ ವಂಚಿಸಿ, ಸೋಲಿಸಲು.  ಈ ಸಭಾಭವನದಲ್ಲಿ ನಡೆಯುವ ಕೃತ್ಯಗಳಾದರೂ ಯಾವುವು? ಕೃತ್ರಿಮ ಹಾಸಂಗಿಯಲ್ಲಿ ದ್ಯೂತ, ಶಕುನಿಯ ದಾಳಗಳ ಉರುಳಿನ ಮೋಸ, ದ್ರೌಪದಿಯಂತಹ ಅರಸಿಯ ವಸ್ತ್ರಾಪಹರಣ, ಎಲ್ಲರ ಮಾನ ಕಾಪಾಡಬೇಕಾದ ಅರಸನಿಂದಲೇ ಅಸಭ್ಯವರ್ತನೆ, ಶಾಪಗಳು, ಪ್ರತಿಜ್ಞೆಗಳು, ಉತ್ಪಾತಗಳು  ಹೀಗೆ ಎಲ್ಲವೂ ಮೊದಲ ಸಭಾಭವನದಲ್ಲಿ ನಡೆದ ಕ್ರಿಯೆಗಳಿಂದ ಸಂಪೂರ್ಣ ವಿಭಿನ್ನವಾದವು.  ನಿರ್ಜೀವ ಸಭಾಭವನಗಳು, ಪಾಂಡವರ ಉನ್ನತಿ ಅವನತಿಗಳಿಗೆ, ದ್ರೌಪದಿಯ ಅಳಲಿಗೆ, ದುರ್ಯೋಧನನ ಅಸೂಯೆ, ಪ್ರತೀಕಾರ, ಅಸಭ್ಯತೆಗಳಿಗೆ ಮೂಕಸಾಕ್ಷಿಯಾಗುತ್ತವೆ.  ಮೊದಲ ಸಭಾಭವನದಲ್ಲಿ ಕೃಷ್ಣ ದೈಹಿಕವಾಗಿ ಉಪಸ್ಥಿತನಿರುತ್ತಾನೆ, ಹಾಗೂ ಸಭೆಯಲ್ಲಿ ನಡೆದ ಗೊಂದಲವನ್ನು ನಿಯಂತ್ರಿಸುತ್ತಾನೆ.  ಎರಡನೆಯ ಸಭೆಯಲ್ಲಿ ಪರಿಸ್ಥಿತಿ ಪರಾಕಾಷ್ಠೆ ತಲುಪಿದಾಗ ಅದೃಶ್ಯನಾಗಿಯೇ, ತಾನಿರುವ ಕಡೆಯಿಂದಲೇ ಸನ್ನಿವೇಶವನ್ನು ನಿಯಂತ್ರಿಸುತ್ತಾನೆ.  ಎಷ್ಟಾದರೂ ಕೃಷ್ಣನೇ ಅಲ್ಲವೇ ನಮ್ಮ ಕುಮಾರವ್ಯಾಸನ ದೂರನಿಯಂತ್ರಕ?  ರೌದ್ರ, ಕರುಣೆ, ಅದ್ಭುತ, ಜುಗುಪ್ಸೆ ಮುಂತಾದ ರಸಗಳನ್ನುದ್ದೀಪಿಸುವ, ಸನ್ನಿವೇಶಗಳು, ನುಡಿಗಳು, ಕ್ರಿಯೆಗಳನ್ನೊಳಗೊಂಡು ‘ಸಭಾಪರ್ವ’ ಕಲಾತ್ಮಕವಾಗಿ ವಿಶಿಷ್ಟ ಯಶಸ್ಸು ಸಾಧಿಸುತ್ತದೆ (ಹದಿನಾರು ಸಂಧಿಗಳು ಅಡಕವಾಗಿವೆ ಈ ಪರ್ವದಲ್ಲಿ). 

ನಾಗರೀಕತೆಯನ್ನು, ನಗರ ಸಂಸ್ಕೃತಿಯಲ್ಲಿ ಬದುಕುವವರ ನಡೆನುಡಿಗಳನ್ನು ಚಿತ್ರಿಸುವ ಸಭಾಪರ್ವದ ಚೌಕಟ್ಟಿನಲ್ಲಿ ಕಂಡುಬರುವ ಭೀಮನ ವ್ಯಕ್ತಿತ್ವ “ಅರಣ್ಯ ಪರ್ವ”ದಲ್ಲಿ ಮತ್ತಷ್ಟು ಶಕ್ತವಾಗಿ ಅಭಿವ್ಯಕ್ತವಾಗುತ್ತದೆ.   ನಾಗರೀಕತೆಗಿಂತ, ಈ ಅರಣ್ಯ ಜೀವನವೇ ಅವನಿಗೆ ಹಚ್ಚು ಶೋಭಿಸುತ್ತದೇನೋ ಎನಿಸುತ್ತದೆ.  ಅರಣ್ಯಪರ್ವದಲ್ಲಿನ ಕಿಮ್ಮೀರವಧೆ, ಜಟಾಸುರವಧೆ, ಭೀಮನನ್ನು ಹಿಡಿದ ಮಹೋರಗ, ಸೌಗಂಧಿಕಾಪುಷ್ಪಪ್ರಕರಣಗಳು ಭೀಮನ ವ್ಯಕ್ತಿತ್ವವನ್ನು ರಂಜನೀಯವಾಗಿ, ಅತ್ಯಂತ ಸಮರ್ಥವಾಗಿ ನಿರೂಪಿಸುತ್ತವೆ.  ಅರಣ್ಯದಲ್ಲಿ ನಿಮಿಷಾರ್ಧದಲ್ಲಿ ಪರ್ಣಕುಟಿಗಳನ್ನು ನಿರ್ಮಿಸುವುದರಲ್ಲಿ ಭೀಮ ನಿಸ್ಸೀಮ.  ಕವಿಸಮಯಕ್ಕನುಸಾರವಾಗಿ ಕುಮಾರವ್ಯಾಸ ಬೇಟೆಯ ವೈಖರಿಯನ್ನು ವರ್ಣಿಸಿದರೂ, ಅರಣ್ಯವಾಸಿಗಳಾಗಿರುವುದರಿಂದಾಗಿ ಭೀಮ ಬೇಟೆಯಾಡುವುದು ಅಸಹಜವೆನಿಸುವುದಿಲ್ಲ.  ಕಾಡಿನ ಕಿರಾತರುಗಳೊಡನೆ ಭೀಮ ಕಾಡನ್ನು ಹೊಕ್ಕರೆ, ಕಾಡಿನ ಪ್ರಾಣಿಗಳು ದೆಸೆದೆಸೆಗೆ ಓಡುತ್ತವಂತೆ.  ಇನ್ನು ಇವನ ಬೇಟೆಯ ವೈಖರಿಯಾದರೂ ಹೇಗೆ?

ಕೊಡಹಿ ಬಿಸುಟನು ಕೇಸರಿಯ, ಕಾ-

ಲ್ವಿಡಿದು ಸೀಳಿದ ಕರಿಗಳನು ಬೆಂ-

ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ |

ಅಡಗೆಡಹಿ ಪೇರ್ಮರಿ ವರಾಹನ

ಮಡದಲುರೆ ಘಟ್ಟಿಸಿ ವಿನೋದದಿ

ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ || (ಅರಣ್ಯ ಪರ್ವ 3.10)

ಇಂತಹ ಮಹಾಪರಾಕ್ರಮಿ ಭೀಮ ಒಂದು ಮಹೋರಗನ ಹಿಡಿತಕ್ಕೆ ಸಿಕ್ಕಾಗ “ಆ ಘೋರ ಬಂಧದ ಗಾಢದಲಿ ನುಡಿ” (ಅರಣ್ಯ ಪರ್ವ 13.41) ನೆಗ್ಗಿತಂತೆ ಭೀಮನಿಗೆ.  ಆ ಮಹೋರಗ ನಹುಷನೆಂದರಿತೂ ಭೀಮನ ಮನಸ್ಸಿನಲ್ಲಿ, ಆ ಮಹೋರಗನ ಬಂಧನದಲ್ಲಿ ಸಿಲುಕಿ, ಉಸಿರಾಡಲಾಗದಂತಹ ಭಂಗ ಪಟ್ಟುದ್ದು ಬಹಳ ನೋವು, ಕೋಪ ಕೀಳರಿಮೆಗಳನ್ನುಂಟು ಮಾಡಿರುತ್ತದೆ.

ಭೀಮನ ಅಪ್ರತಿಮ ಬಲಸಾಹಸಗಳಿಗೆ, ದ್ರೌಪದಿಯ ಬಗೆಗೆ ಆತನಿಗಿರುವ ಆಳವಾದ ಸುಕುಮಾರ ಪ್ರೀತಿ ಮತ್ತು ಕೋಮಲ ಶೃಂಗಾರ ಭಾವಕ್ಕೆ, ಹಿರಿಯರ ಬಗೆಗೆ ಆತನಿಗಿರುವ ಗೌರವ, ವಿನಯ, ಬಂಧುಭಾವಕ್ಕೆ “ಸೌಗಂಧಿಕಾ ಪುಷ್ಪ ಪ್ರಕರಣ” ಸಾಕ್ಷಿಯಾಗಿದೆ.  ಘಮ್ಮೆಂದು ಅರಳಿದ್ದ ಸೌಗಂಧಿಕಾ ಪುಷ್ಪದ ಪರಿಮಳದಿಂದ ಮೋಹಗೊಂಡ ದ್ರೌಪದಿಗೆ ಹೇಗಾದರೂ ಮಾಡಿ ಆ ಹೂವನ್ನು ಪಡೆಯಬೇಕೆಂಬ ಮಹದಾಸೆ ಮೂಡುತ್ತದೆ.  ಆ ಕಾಡಿನಲ್ಲಿ ಹನ್ನೆರಡು ವರ್ಷ ವನವಾಸ ಮಾಡಬೇಕಾಗಿ ಬಂದ ಅರಸಿಗೆ ಮನರಂಜನೆಯಾದರೂ ಏನಿದೆ?  ಈ ಸುಗಂಧವೇ ಇಷ್ಟೊಂದು ಮನಸ್ಸನ್ನಪಹರಿಸುತ್ತಿದೆ, ಇನ್ನು ಆ ಪುಷ್ಪದ ಸೌಂದರ್ಯ ಅದೆಷ್ಟು ಮನಮೋಹಕವೋ ಎನಿಸುತ್ತದೆ ದ್ರೌಪದಿಗೆ.  ತನ್ನ ಈ ಕುತೂಹಲ ಆಸೆಗಳನ್ನು ಯಾರಲ್ಲಿ ಹೇಳಿಕೊಳ್ಳುವುದು?  ಧರ್ಮಜ ಹಿರಿಯ, ಒಂದು ರೀತಿಯ ಸಂಸಾರಿ ಸನ್ಯಾಸಿ.  ನಕುಲ ಸಹದೇವರು ಚಿಕ್ಕವರೆನಿಸುತ್ತಾರೆ. ಅರ್ಜುನ ಪಾಶುಪತಾಸ್ತ್ರ ಸಂಪಾದಿಸಲು ತಪಸ್ಸಿಗೆ ಹೋಗಿದ್ದಾನೆ.  ಉಳಿದವನು ಈ ಒರಟ, ಅರಿಭಯಂಕರ ಭೀಮ.  ದ್ರೌಪದಿ ಅವನನ್ನು ಸಮೀಪಿಸಿ . . .  ಮಧುರವಾದ ಮಾತಿನಲ್ಲಿ ಆ ಸರಸಿಜವ ತಂದಿತ್ತು ತನ್ನ ಮನೋರಥ ವ್ಯಥೆಯ ಪರಿಹರಿಸುವಂತೆ ಕೇಳಿದಾಗ, ನಾವು ನಿರೀಕ್ಷಿಸಿದಂತೆ, ಭೀಮ ಗುಡುಗುವುದಿಲ್ಲ, ದ್ರೌಪದಿಯನ್ನು ಪರಿಹಾಸ್ಯ ಮಾಡುವುದಿಲ್ಲ, ಬದಲಿಗೆ “ಅಂಬುಜ ವದನೆಯ ಕುರುಳನುಗುರಲಿ ತಿದ್ದಿದ” (ಅರಣ್ಯ ಪರ್ವ 10.06) ನಂತೆ ! ಒರಟ, ಅರಸಿಕನೆಂದುಕೊಂಡಿದ್ದ ಭೀಮಕಾಯದಲ್ಲಿ ಸುಕುಮಾರ ಶೃಂಗಾರದ ಸೊಗಡು ಘಮ್ಮೆನ್ನುತ್ತದೆ. ಇಂಥ ಸುಕುಮಾರ ಶೃಂಗಾರದಲ್ಲಿ ತೊಡಗಿದ್ದ ಭೀಮ ಸೌಗಂಧಿಕಾ ಪುಷ್ಪತರಲು ಹೊರಟಾಗ ಅವನ ನಡಿಗೆ ಹೇಗಿದ್ದಿರಬಹುದು?  “. . . ವಿಗಡ ಭೀಮನ ಕಾಲುದುಳಿ ಕಂಪಿಸಿತು ಕಾನನವ” (ಅರಣ್ಯ ಪರ್ವ 10.07).  ಭೀಮ ಗರ್ಜನೆಯ ಅವನ ನಡೆದಾಟದ ಪರಿಣಾಮವೇನೆಂಬುದನ್ನು ಕುಮಾರವ್ಯಾಸ ವಿವರಿಸುತ್ತಾನೆ.

ಒದರಿದರೆ ಪರ್ವತದ ಶಿಖರದ-

ಲುದುರಿದವು ಹೆಬ್ಬಂಡೆಗಳು ಮುರಿ-

ದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು |

ಗದೆಯ ಹೊಯ್ಲಿನ ಗಂಡ ಶೈಲವೊ

ಕದಳಿಗಳೋ ತಾವರಿಯೆವುಬ್ಬಿದ

ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ || (ಅರಣ್ಯ ಪರ್ವ 10.07)

 ಭೀಮನ ಹೂಂಕಾರಕ್ಕೆ ಹುಲಿ ಕರಡಿ ಸಿಂಹಗಳು ಯೋಜನ ದೂರಕ್ಕೆ ಹಾಯ್ದೋಡಿದವಂತೆ.  ಇವನ ಬೊಬ್ಬರಿತಕೆ ಇಳೆ ಒಡೆಯಿತಂತೆ, ತೊಡೆಯ ಗಾಳಿಗೆ ಕಿರುಗಿಡ ಮರಗಳು ಹಾರಿದವು, ಇವನುಬ್ಬರದ ಬೊಬ್ಬೆಗೆ ಅದ್ರಿಗಳು ಬಿರಿದವು.  ಹೀಗೆ ಆರ್ಭಟಿಸುತ್ತ ಬರುತ್ತಿದ್ದ ಭೀಮ (ರಾಮನಾಮ ಜಪಿಸುತ್ತಿದ್ದ) ಮಹಾವಾನರನನ್ನು ಕಾಣುತ್ತಾನೆ.  ಆ ವಾನರನೋ ಮಹಾವೃದ್ಧ.  ವಾನರನ ಪ್ರಶ್ನೆಗೆ ತಾವು ಮರ್ತ್ಯರೆಂದೂ, ಪತ್ನಿಯ ಪುಷ್ಪದಾಸೆ ತೀರಿಸಲೆಂದು ಬಂದಿರುವುದಾಗಿಯೂ ತಿಳಿಸುತ್ತಾನೆ.  ಆ ಮುದಿ ವಾನರನ ಬಾಲವನ್ನು ಸರಿಸದೆ ತಾನು ಮುಂದುವರಿಯುವಂತಿಲ್ಲ.  ಆದರೆ ಆ ಬಾಲ ಭೀಮನ ವಿಗಡ ಪರಾಕ್ರಮಕ್ಕೆ ಸವಾಲಾಗುತ್ತದೆ.  ಕೇವಲ ಒಂದು ಮುದಿವಾನರನಿಂದ ತನಗಾದ ಭಂಗಕ್ಕೆ ನೊಂದ ಭೀಮ ಇಂಥ ದುರ್ಬಲನೊಡನೆ ಭಂಗವಾಯಿತೇ, ತನ್ನನ್ನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗುತ್ತಾನೆ.  ಆ ವಾನರ ನಿಮ್ಮದಾವ ಕುಲವೆಂದು ಕೇಳಿದಾಗ ತಮ್ಮ ಕಥೆಯನ್ನು ಹೇಳಿದ್ದಲ್ಲದೇ, ತನ್ನ ಸೋಲನ್ನೂ ಮರೆತು ಭಕ್ತಿ, ವಿನಯಗಳಿಂದ ಕೈಮುಗಿದು ನೀನಾರು ಹೇಳು ಮಹಾತ್ಮ ಎನ್ನುತ್ತಾನೆ.  ಆ ವಾನರ ತಾನೇ ತ್ರೇತಾಯುಗದ ಹನುಮನೆಂದಾಗ ಭೀಮನ ಮನಸ್ಸು ಸಂತಸದಿಂದ ಹೂವಾಗಿ ಅರಳುತ್ತದೆ.  ಇಂತಹ ಯೋಗಾಯೋಗಕ್ಕೆ ಅಚ್ಚರಿಪಟ್ಟು, ಹನುಮನನ್ನು ತಂದೆ ಎಂದು ಸಂಬೋಧಿಸುತ್ತಾನೆ. 

ಭೀಮ ಮಹಾಪರಾಕ್ರಮಿಯಾದರೂ ಅವನದು ಮುಗ್ಧ ಕುತೂಹಲ ಬಾಲಕನ ಮನಸ್ಸು.  ಆ ಮಹಾಮಹಿಮನಾದ ಆಂಜನೇಯನು ಸಾಗರವನ್ನು ಲಂಘಿಸಿದಾಗ ತಾಳಿದ ಅದ್ಭುತ ರೂಪವನ್ನು ತನಗೆ ತೋರಿಸಬೇಕೆಂದು ಪ್ರಾರ್ಥಿಸುತ್ತಾನೆ.  ಆ ಭವ್ಯ, ದಿಗ್ಬ್ರಮೆಗೊಳಿಸುವ ರೂಪವನ್ನು ಕಂಡು ತಾನಂಜುವುದಿಲ್ಲವೆಂದೂ ಹೇಳುತ್ತಾನೆ.  ಆಗ ಹನುಮ ತನ್ನ ಆ ಅದ್ಭುತ, ದಿವ್ಯ ಮಂಗಳ ರೂಪವನ್ನು ತನ್ನನುಜನಿಗೆ ತೋರಿಸುತ್ತಾನೆ.  ಹನುಮನ ಹೂಂಕಾರಕ್ಕೆ ನೆಲಬಿರಿದು ಬಾಲದ ತುದಿ ನಕ್ಷತ್ರ ಮಂಡಲವನ್ನು ಮುಟ್ಟುವಷ್ಟು ಬೃಹತ್ತಾಗಿ ಬೆಳೆದು ನಿಂತ ಆ ದಿವ್ಯಾದ್ಭುತರೂಪವನ್ನು ಕಂಡು ಭೀಮ ನಡುಗಿದನಂತೆ, ಕಂಗಳಲ್ಲಿ ಕೋಡಿ ಹರಿದು, ಮೋರೆಯನೆತ್ತಿ, ಕೈಗಳ ನೀಡಿ, “ಕಂಗಳ ಮುಚ್ಚಿ ಮರಳಿದು ನೋಡಿ ಶಿವಾಶಿವಾಯೆನುತ ಬೆಚ್ಚಿದನಡಿಗಡಿಗೆ ಭೀಮ” (ಅರಣ್ಯ ಪರ್ವ 10.38). ಭೀಮನ ಮನಸ್ಸು ಪೂರ್ವಗ್ರಹಗಳಿಂದ ಮುಕ್ತವಾಗಿ, ನಿಮಿಷಾರ್ಧದಲ್ಲಿ, ಹೇಗೆ ವಿಭಿನ್ನ ಭಾವನೆಗಳಿಗೆ ತೀವ್ರವಾಗಿ ಸ್ಪಂದಿಸುತ್ತದೆಂಬುದಕ್ಕೆ ಇದೊಂದು ಸೂಕ್ತ ಉದಾಹರಣೆ.  ಕರುಣೆ, ಪ್ರೇಮ, ವಾತ್ಸಲ್ಯ, ಭಕ್ತಿ, ಕೋಪ, ರೌದ್ರ ಎಲ್ಲವೂ ಅತಿ ಶೀಘ್ರವಾಗಿ ಪರಿಣಾಮ ಬೀರುವಂತಹ ಮನಸ್ಸಿನ ಸಂವೇದನಾ ಶೀಲ ಭೀಮ.  ಹನುಮನಿಗೆ ನಮಸ್ಕರಿಸಿ, ಕುಬೇರನ ಒಡೆತನದ ತಾವರೆ ಕೊಳದ ಕಾವಲಿಗಿದ್ದ ಭಟರನ್ನೀಡಾಡಿ, ತೋಳುಗಳ ತುಂಬ ತಾವರೆಯ ವನವನ್ನೇ ತುಂಬಿಕೊಂಡು ಬಂದು, ಸರಸಿಯ ಆಚೆ  ನಿಂತು, ಭಟರಿಗೆ “ನಿಮ್ಮ ಕೊಳ ಇಲ್ಲಿಯೇ ಇದೆ ನೋಡಿ” (ಅರಣ್ಯ ಪರ್ವ 10.58) ಎಂದು ಹೇಳುವ ಹಾಸ್ಯ ಪ್ರಜ್ಞೆಯೂ ಇದೆ ಭೀಮನಿಗೆ.  ಭೀಮನನ್ನು ಹುಡುಕಿಕೊಂಡು ಬಂದವರೆದುರು “ಅಂಬುಜವನವಿದುರು ಬಂದಂತೆ” (ಅರಣ್ಯ ಪರ್ವ 11.04) ಬಂದನಂತೆ ಭೀಮ, ಭೀಮ ತತ್ವಕ್ಕೂ, ಅಂಬುಜ ತತ್ವಕ್ಕೂ ಎಲ್ಲಿಂದೆಲ್ಲಿಗೆ?  ಕುಮಾರವ್ಯಾಸ ಎರಡನ್ನೂ ಜೋಡಿಸಿಬಿಟ್ಟಿದ್ದಾನೆ.  ಪತ್ನಿಗೆ ತಾವರೆ ವನವನ್ನು ತಂದು ಕೊಟ್ಟು ಸಂತೋಷ ಪಡಿಸಿದ ಭೀಮ ಮತ್ತಾಗಲೇ ಜಟಾಸುರನನ್ನು ವಧಿಸುತ್ತಾನೆ.

ಅಜ್ಞಾತ ವಾಸಕ್ಕೆಂದು ವಿರಾಟನಗರಿಯನ್ನು ಆಯ್ಕೆಮಾಡಿಕೊಂಡ ಪಾಂಡವರ ಜೀವನದಲ್ಲಿ ಆ ಹತ್ತು ತಿಂಗಳೂ ಯಾವುದೇ ಮುಖ್ಯ ಘಟನೆಗಳು ನಡೆಯುವಂತಿಲ್ಲ.  ಭೀಮನ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದಿಂದಾಗಿ, ಧರ್ಮರಾಜ ಸುರೇಂದ್ರ, ಯಮ ವರುಣಾದಿಗಳಿಗೆ ನಮಸ್ಕರಿಸಿ ಬೇಡಿಕೊಳ್ಳುತ್ತಾನೆ.  ತಾವು ಹೆಣದಾಕಾರದಲ್ಲಿ ಕಟ್ಟಿ ಮರದ ಮೇಲಿಟ್ಟಿರುವ ಕೈದುಗಳನ್ನು ಭೀಮನಿಗೆ ಮಾತ್ರ ಕೊಡಬೇಡಿ ಎಂದು. ಪಾರ್ಥನಿಗೆ ಬೇಕಾದರೆ ಕೊಡಿ, ಆದರೆ ಈ ಅಜ್ಞಾತ ವಾಸದಲ್ಲಿ ವಿಗಡ ಭೀಮನಿಗೆ ಮಾತ್ರ ಕೊಡದಿರಿ ಎಂದಾಗ ಭೀಮ ಔಡೊತ್ತಿ ಗರ್ಜಿಸುತ್ತಾನೆ.  ಧರ್ಮರಾಯ ತಮ್ಮನನ್ನಪ್ಪಿ ಸಮಾಧಾನ ಪಡಿಸುತ್ತಾನೆ.  ಒಂದು ವರುಷದ ಅಜ್ಞಾತವಾಸದ ಅವಧಿಯನ್ನು ಸೈರಣೆಯಿಂದ ಕಳೆಯಬೇಕಾಗಿದೆಯೆಂದು ತಿಳಿ ಹೇಳುತ್ತಾನೆ.  ಆದರೂ ಕೀಚಕ ವಧೆ ನಡೆದು, ಪಾಂಡವರ ಇರವು ಪ್ರಪಂಚಕ್ಕೆ ತಿಳಿಯುತ್ತದೆ.  ಭೀಮನನ್ನು ಬಿಟ್ಟು ಕೀಚಕನನ್ನು ಕೊಲ್ಲುವಂತಹ ಪರಾಕ್ರಮಿ ಬೇರೆ ಇಲ್ಲ.  (ಬಲರಾಮ, ದುರ್ಯೋಧನ ಇವರುಗಳನ್ನು ಹೊರತು ಪಡಿಸಿ) ಕೀಚಕನನ್ನು ಕೊಲ್ಲುವ ಮೊದಲು ಧರ್ಮಜನ ಅನುಮತಿಗಾಗಲೀ, ಕೃಷ್ಣನ ಆಶೀರ್ವಾದಕ್ಕಾಗಲೀ ಕಾಯುವುದಿಲ್ಲ ಭೀಮ. 

ಸೈರಂಧ್ರಿಯಾಗಿದ್ದ ದ್ರೌಪದಿಯ ರೂಪಕ್ಕೆ ಮೋಹಿತನಾದ ಕೀಚಕ ಅವಳನ್ನು ಕಾಡುವಾಗ, ಅಜ್ಞಾತವಾಸದಲ್ಲಿರುವ ದ್ರೌಪದಿ ಈ ಅಳಲನ್ನು ಯಾರ ಬಳಿಯಲ್ಲಿ ಹೇಳಿಕೊಳ್ಳಬೇಕು?  ಅದೂ ಕೀಚಕನಂತಹ ಪರಾಕ್ರಮಿಯನ್ನು ಎದುರಿಸಬಲ್ಲವರಾರು? ಧರ್ಮರಾಜ ಕಂಕಭಟ್ಟನಾಗಿದ್ದಾನೆ.  ಅರ್ಜುನ ಬೃಹನ್ನಳೆಯಾಗಿದ್ದಾನೆ.  ನಕುಲ ಸಹದೇವರಿದ್ದರೂ ಯಾರ ಬಳಿಯೂ ಆಯುಧಗಳಿಲ್ಲ.  ಪಂಚಪತಿಗಳು ಅರಮನೆಯಲ್ಲಿದ್ದರೂ ಪಾಂಚಾಲಿ ಅಸಹಾಯೆ.  ಅವಳ ಮಾತುಗಳಲ್ಲಿ ಈ ಐವರ ಗುಣಗಳ ಮೌಲ್ಯ ನಿರ್ಧಾರ ಹೀಗಿದೆ. 

ಯಮ ಸುತಂಗರುಹುವೆನೆ ಧರ್ಮ-

ಕ್ಷಮೆಯ ಗರಹೊಡೆದಿಹುದು ಪಾರ್ಥನು

ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ |

ಭ್ರಮಿತನಾಗಿಹನುಳಿದರಿಬ್ಬರು

 ರಮಣರಿವರೀ ನಾಯ ಕೊಲಲ-

ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ || (ವಿರಾಟ ಪರ್ವ 3.33)

 ಭೀಮನೇ ಶ್ರೇಷ್ಠನೆಂದು ನಿರ್ಧರಿಸುತ್ತಾಳೆ

ಎಲ್ಲರೊಳು ಕಲಿಭೀಮನೇ ಮಿಡು-

ಕುಳ್ಳ ಗಂಡಸು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು|

ಖುಲ್ಲನಿವನುಪಟಳವನಾತಂ-

ಗೆಲ್ಲವನು ಹೇಳುವೆನು ಬಳಿಕವ-

ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ || (ವಿರಾಟ ಪರ್ವ 3.34)

 ಎಂದು ನಿಶ್ಚಯಿಸುತ್ತಾಳೆ ದ್ರೌಪದಿ.  ಭೀಮನೊಂದಿಗೆ ಮುಕ್ತವಾಗಿ ಮಾತನಾಡುವ ದ್ರೌಪದಿ ಅಂದು ಕೌರವನ ಸಭೆಯಲ್ಲಿ ತನಗಾದ ಅಪಮಾನವನ್ನು ನೆನಪು ಮಾಡುತ್ತಾಳೆ ಭೀಮನಿಗೆ.  ಇಂದು ಕೀಚಕನಿಂದಾಗುತ್ತಿರುವ ಅಪಮಾನವನ್ನು ತಿಳಿಸುತ್ತಾಳೆ.  ಕಟಕಿಯಾಡುತ್ತಾಳೆ.  ದ್ರೌಪದಿಯ ಮಾತುಗಳಿಂದ ಭೀಮ ಬೇಸರಿಸುವುದಿಲ್ಲ.  ತಾನು ಈ ನಪುಂಸಕರೊಡನೆ ಹುಟ್ಟಿದೆನಲ್ಲ ಎಂದು ನೊಂದುಕೊಳ್ಳುತ್ತಾನೆ.  ಧರ್ಮ-ಗಿರ್ಮ ತನಗರಿಯದೆನ್ನುತ್ತಾನೆ, ಅರ್ಜುನ, ಧರ್ಮಜ, ನಕುಲ, ಸಹದೇವರನ್ನು ಪ್ರಾರ್ಥಿಸಿ ತನ್ನ ಕಷ್ಟ ಬಗೆಹರಿಸಿಕೊಳ್ಳುವಂತೆ ಹೇಳುತ್ತಾನೆ. ದ್ರೌಪದಿ ಭೀಮನನ್ನು ಕೆರಳಿಸಿ ಕೆರಳಿಸಿ ಕೀಚಕನ ವಧೆಗೆ ಅಣಿಮಾಡುವ ರೀತಿ ಸೊಗಸಾಗಿ ಮೂಡಿ ಬಂದಿದೆ.  ಭೀಮ ಕೀಚಕನ ವಧೆಗೆ ನಿಶ್ಚಯಿಸದಿದ್ದಾಗ “ಭೀಮ ಕೊಟ್ಟೈ ತನಗೆ ಸಾವಿನಾಜ್ಞೆಯ” (ವಿರಾಟ ಪರ್ವ 3.65) ಎಂದು ದ್ರೌಪದಿ ಅವನ ಚರಣಕ್ಕೆರಗಿದಾಗ ಭೀಮನ ಪ್ರೀತಿಯ ಕಟ್ಟೆ ಒಡೆಯುತ್ತದೆ.  ಅವನ ಪ್ರತಿಕ್ರಿಯೆಯಲ್ಲಿ ಪ್ರೀತಿಯ ಮಹಾಪೂರ ಹರಿಯುತ್ತದೆ. 

ಎನಲು ಕಂಬನಿದುಂಬಿದನು ಕಡು-

ನೆನೆದುದಂತಃಕರಣ ರೋಷದ

ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ |

ತನು ಪುಳಕವುಬ್ಬರಿಸಿ ಮೆಲ್ಲನೆ

ವನಿತೆಯನು ತೆಗೆದಪ್ಪಿದನು ಕಂ-

ಬನಿಯನೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ || (ವಿರಾಟ ಪರ್ವ 3.66)

 ಕುರುಳ ನೇವರಿಸಿದನು ಗಲ್ಲವ

ನೊರಸಿ ಮುಂಡಾಡಿದನು ಮಂಚದ

ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ |

ಅರಸಿ ಬಿಡುಬಿಡು ಖಾತಿಯನು ವಿ-

ಸ್ತರಿಸಲೇಕೆಮ್ಮಣ್ಣನಾಜ್ಞೆಯ

ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ || (ವಿರಾಟ ಪರ್ವ 3.67)

 ಅಣ್ಣ ಧರ್ಮಜ ಮುನಿದರೆ ಅಣ್ಣತನವಿಂದು ಹರಿಯಲಿ, ಉಳಿದ ಸೋದರರು ಕನಲಿದರೆ ಕೈದೋರುವೆನು, ಕೃಷ್ಣ ಅಡ್ಡಬಂದರೆ, ಘನ ಮುರಾರಿಯ ಮೀರುವೆನು” (ವಿರಾಟ ಪರ್ವ 3.69), ಕೀಚಕನನ್ನು ತರಿವೆನು ಎಂದು ದ್ರೌಪದಿಗೆ ಆಶ್ವಾಸನೆ ಕೊಡುತ್ತಾನೆ.

This is the ninth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.

Author(s)

About:

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.

Prekshaa Publications

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhāni Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...