ಲವನು ಹುಟ್ಟಿದ ವಾರ್ತೆಯನ್ನರಿತ ರಾಮ ತಾನೇ ಗುಟ್ಟಾಗಿ ವಾಲ್ಮೀಕಿಮುನಿಗಳ ಆಶ್ರಮಕ್ಕೆ ಹೋಗಿ ಮಗುವಿಗೆ ಜಾತಕರ್ಮಾದಿಗಳನ್ನು ಮಾಡುತ್ತಾನೆ. ಲವ ಆ ಬಳಿಕ ದರ್ಭೆಯ ಕೂರ್ಚದಿಂದ ನಿರ್ಮಿತವಾದ ಮಗುವಾಗಿ ಜನಿಸುತ್ತಾನೆ. ಇತ್ತ ರಾಮನು ನೂರು ಅಶ್ವಮೇಧಗಳನ್ನು ಮಾಡುತ್ತಾನೆ. ಇಲ್ಲೇ ಒಂದೆಡೆ ಪ್ರಸಿದ್ಧವಾದ “ರಾಮರಕ್ಷಾ ಸ್ತೋತ್ರ” ದಾಖಲೆಗೊಂಡಿದೆ. ಈ ಸ್ತುತಿಯು ಬಲಿದ್ವೀಪದಲ್ಲಿ ಕೂಡ ಪ್ರಚಾರದಲ್ಲಿದ್ದುದು ಗಮನಾರ್ಹ. ವಾಲ್ಮೀಕಿಯ ಮಾತಿನಂತೆ ಸೀತೆ ಶತಪತ್ರಕಮಲಗಳಿಂದ ಪೂಜಿಸುವ ವ್ರತವೊಂದನ್ನು ಕೈಗೊಂಡಿರುತ್ತಾಳೆ. ಅದಕ್ಕೆ ಬೇಕಿರುವ ಹೂಗಳನ್ನು ಲವನು ಅಯೋಧ್ಯೆಯ ಅರಮನೆಯ...
Himalaya
“ಅಧ್ಯಾತ್ಮರಾಮಾಯಣ”ದಂತೆಯೇ ಈ ಕೃತಿಯಲ್ಲಿ ಕೂಡ ಮಂಥರೆ, ಕೈಕೇಯಿ ಮೊದಲಾದವರಿಗೆ ನಿರ್ದೋಷತೆಯ ಪರವಾನಗಿ ಸಿಗುತ್ತದೆ. ಇಲ್ಲಿಯೂ ಅದು ಸರಸ್ವತಿಯ ಲೀಲೆ. ರಾಮನು ವನವಾಸದಲ್ಲಿರುವಾಗ ಶಿವಾಲಯವೊಂದರಲ್ಲಿ ಶಿವಪೂಜೆ ಮಾಡುತ್ತಿರುತ್ತಾನೆ. ಈ ಮಟ್ಟಕ್ಕೆ ಶಿವ-ಕೇಶವಸಾಮರಸ್ಯ ಸಂದಿರುವುದು ನಿಜಕ್ಕೂ ಸ್ತವನೀಯ. ಸೀತಾಪಹರಣವಂತೂ ಎಲ್ಲ ರೀತಿಯಿಂದಲೂ ಒಂದು ಲೀಲೆ; ಅಪಹೃತೆಯಾಗುವುದು ಮಾಯಾಸೀತೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂತಿದ್ದರೂ ಲಕ್ಷ್ಮಣರೇಖೆ ಇದ್ದೇ ಇರುತ್ತದೆ. ರಾವಣನಿಂದ ಮೊದಲ್ಗೊಂಡು ಇಲ್ಲಿ ಬರುವ ಸಂನ್ಯಾಸಿಗಳೆಲ್ಲ ಅದ್ವೈತಸಂಪ್ರದಾಯಾನುಸಾರವಾಗಿ ಶಿಖಾ-...