ಗೆಳತಿಯರಿಂದ ಬಾವಿಗೆ ತಳ್ಳಲ್ಪಟ್ಟ ದೇವಯಾನಿಯನ್ನು ಯಯಾತಿ ಕೈಹಿಡಿದು ಎತ್ತಿದ ಬಳಿಕ ಅವಳು ಅವನನ್ನೇ ಮದುವೆಯಾಗಲು ಬಯಸುತ್ತಾಳೆ. ಅವನು “ಬ್ರಾಹ್ಮಣಕನ್ಯೆಯನ್ನು ಕ್ಷತ್ರಿಯ ಪರಿಣಯಿಸುವುದು ವರ್ಣಧರ್ಮಕ್ಕೆ ವಿರುದ್ಧ” ಎಂದರೆ ಇವಳು, “ಪಾಣಿಧರ್ಮದ ಪ್ರಕಾರ ಸರಿಯಾಗುತ್ತದೆ” ಎಂದು ಪ್ರತಿವಾದಿಸುತ್ತಾಳೆ. “ಪಾಣಿಧರ್ಮ”ವೆಂದರೆ ಕೈಹಿಡಿದೊಡನೆಯೇ ವಿವಾಹವಾಯಿತೆಂದು ಒಪ್ಪುವುದು ಹಾಗೂ ಕೈಹಿಡಿದವಳನ್ನು ಕಡೆಯ ತನಕ ಉಳಿಸಿಕೊಳ್ಳುವುದು. ಪಾಣಿಧರ್ಮಃ (೧.೭೬.೨೦) ನಾವು ಸಾಮಾನ್ಯವಾಗಿ ಯಾವುದನ್ನಾದರೂ ನಿರ್ದುಷ್ಟವೆಂದು ಹೇಳಬೇಕಾದರೆ “ಬೆರಳಿಟ್ಟು ತೋರಿಸೋಕೆ ಕೂಡ ಯಾವುದೇ...
 
0
ಋಷಿಕುಮಾರ ಋಷ್ಯಶೃಂಗ ಹೆಣ್ಣನ್ನೇ ಕಾಣದೆ ಬೆಳೆದವನು. ಅವನು ಮೊದಲ ಬಾರಿಗೆ ಬೈತಲೆ ತೆಗೆದುಕೊಂಡು ಹೆರಳು ಹಾಕಿಕೊಂಡ ಹೆಂಗಸರನ್ನು ಕಂಡಾಗ ಅವರ ಹಣೆಯೇ ಎರಡು ಪಾಲಾದಂತೆ ಭ್ರಮಿಸುತ್ತಾನೆ. ಅದನ್ನು ತುಂಬ ಚಮತ್ಕಾರಕವಾಗಿ ಮಹಾಭಾರತ ಹೇಳುವ ಪರಿ ಹೀಗಿದೆ: ದ್ವೈಧೀಕೃತಾ ಭಾಂತಿ ಸಮಾ ಲಲಾಟೇ (೩.೧೧೨.೯) ತೀರ್ಥಯಾತ್ರೆಗೆಂದು ಪ್ರಭಾಸಕ್ಕೆ ಬಂದ ಪಾಂಡವರನ್ನು ಬಲರಾಮ ಮಾತನಾಡಿಸುತ್ತ “ದುರ್ಯೋಧನನಿಗೆ ಭೂಮಿಯು ಎಡೆಯನ್ನು ಕೊಡುವುದಿಲ್ಲ” ಎಂದು ಹೇಳಿ ಸಮಾಧಾನ ಪಡಿಸುತ್ತಾನೆ. ಲೋಕರೂಢಿಯಲ್ಲಿ ಯಾರನ್ನಾದರೂ ಆಕ್ಷೇಪಿಸುವಾಗ ನಾವು “ಅವರಿಗೆ ಇಲ್ಲಿ ಬದುಕೋಕೆ ಜಾಗ ಇರೋಲ್ಲ”...
 
0
ಯದ್ವಿಜ್ಞಾನಮಹಾವ್ಯೋಮ್ನಿ ಕ್ರಿಯತೇ ತಚ್ಚರಾಚರಮ್ | ತಸ್ಮೈ ಜ್ಞೇಯದರಿದ್ರಾಯ ನಮೋ ಭಾರತವೇಧಸೇ || (ವರದವಿದ್ವಾಂಸನ “ಜ್ಞಾನಪಂಜರ”ವ್ಯಾಖ್ಯಾನ) (ಯಾರ ಅನುಭವಜನ್ಯಜ್ಞಾನವೆಂಬ ಮಹಾಕಾಶದಲ್ಲಿ ಸಕಲಚರಾಚರಗಳೂ ರೂಪಿತವಾಗುವುವೋ ಅಂಥ ಭಾರತಬ್ರಹ್ಮನಿಗೆ ನಮಸ್ಕಾರ. ಆ ಕೃತಿಯೂ ಅದರ ಕರ್ತೃವೂ ನಮ್ಮ ಪಾಲಿಗೆ ತಿಳಿಯಲು ಮತ್ತಾವುದನ್ನೂ ಉಳಿಸಿಲ್ಲ.) ಭಗವಾನ್ ವೇದವ್ಯಾಸರ ಮಹಾಭಾರತ ಸಕಲಾರ್ಥಗಳಲ್ಲಿ ವಿಶ್ವಕೋಶ; ಕುಮಾರವ್ಯಾಸನು ಹೇಳುವಂತೆ “ಕಾವ್ಯಕೆ ಗುರು.” ಇದು ಕಾಮಧೇನುವಿನಂತೆ ಎಲ್ಲರ ಬಯಕೆಗಳನ್ನು ತೀರಿಸಬಲ್ಲ ತವನಿಧಿ. ಇತಿಹಾಸ, ಕಾವ್ಯ, ಕಥೆ, ಶಾಸ್ತ್ರ, ಪುರಾಣ,...
 
0