ಇಂತಿದ್ದರೂ ಶಂಕರ-ಆನಂದವರ್ಧನರು ತಮ್ಮ ಕಾಲವನ್ನಷ್ಟೇ ಅಲ್ಲ, ಎಲ್ಲ ಕಾಲವನ್ನೂ ಮೀರಿ ನಿಲ್ಲಬಲ್ಲ ಸತ್ತ್ವವನ್ನು ಹೊಂದಿದ್ದಾರೆ. ಅವರ ವಿಚಾರಗಳನ್ನು ರೂಪಮಾತ್ರದಿಂದ ಅಳೆಯುವುದು ಅವರಿಗೆ ಮಾತ್ರವಲ್ಲ, ನಮಗೂ ಮಾಡಿಕೊಳ್ಳುವ ಅನ್ಯಾಯ; ಜ್ಞಾನಜಗತ್ತಿಗೇ ಮಾಡುವ ಅನ್ಯಾಯ. ಅಭಿವ್ಯಕ್ತಿಯ ಜಟಿಲತೆಯಿಂದ, ಉದಾಹರಣೆಗಳ ಅಸುಂದರತೆಯಿಂದ, ವಾದೋಪಯೋಗಿಯಾದ ನ್ಯಾಯ-ದೃಷ್ಟಾಂತಗಳ ಏಕದೇಶೀಯತೆಯಿಂದ ಅವರ ತತ್ತ್ವಕ್ಕೆ ಯಾವುದೇ ಕೊರತೆಯಾಗಿಲ್ಲ. ಈ ಅಂಶಗಳನ್ನು ನಾವು ಅವರಿಗಿಂತ ಚೆನ್ನಾಗಿ ಆ ಪರಂಪರೆಯಿಂದಲೋ ನಮ್ಮ ಪರಿಸರದಿಂದಲೋ ತುಂಬಿಕೊಳ್ಳಬಹುದು. ಇದು ಕಷ್ಟದ ಸಂಗತಿಯೇನಲ್ಲ....
ಅತೀಂದ್ರಿಯಸಿದ್ಧಿ-ಚಿತ್ರಕವಿತೆ ಶಂಕರ-ಆನಂದವರ್ಧನರು ಬ್ರಹ್ಮ ಮತ್ತು ರಸಗಳಲ್ಲಿಯೇ ತಾತ್ಪರ್ಯವುಳ್ಳವರಾದ ಕಾರಣ ಇವಕ್ಕೆ ಹೊರತಾಗಿ ನಿಲ್ಲಬಲ್ಲ ಯಾವ ಅಂಶವನ್ನೂ ಮಿಗಿಲಾಗಿ ಆದರಿಸುವುದಿಲ್ಲ. ಏಕೆಂದರೆ ಇಂಥ ಅಸ್ಥಾನದ ಆದರಣೆಯು ಪೂರ್ಣಾನುಭವಕ್ಕೆ ಚ್ಯುತಿಯನ್ನು ತರುತ್ತದೆ. ಇದೇ ಕಾರಣದಿಂದ ಸಿದ್ಧಪುರುಷರಲ್ಲಿಯೂ ಅವರ ಸಿದ್ಧಿಗಳಲ್ಲಿಯೂ ಗೌರವಭಾವವನ್ನು ತಳೆದಿದ್ದರೂ ಬ್ರಹ್ಮದಲ್ಲಿ ಪರ್ಯವಸಿಸದ ಯೋಗಿಪ್ರತ್ಯಕ್ಷದಂಥ ಅಂಶಗಳನ್ನೂ ಬಗೆಬಗೆಯ ಸಿದ್ಧಿಗಳನ್ನೂ ಪರಮಾರ್ಥಕ್ಕೆ ಅನಪೇಕ್ಷಿತವೆಂದು ಶಂಕರರು ಬದಿಗಿಡುತ್ತಾರೆ.[1] ಹೀಗೆಯೇ ದೇವೀಶತಕದಂಥ ಅಪೂರ್ವವಾದ...
ಅನುಭವಪ್ರಮಾಣ ಶಂಕರರು ತಮ್ಮ ಸಿದ್ಧಾಂತದ ಪ್ರತಿಪಾದನೆಗೆ ಸರ್ವಜನಸಮ್ಮತವಾದ, ವಿದ್ವಲ್ಲೋಕದಲ್ಲಿ ಪ್ರಸಿದ್ಧವಾದ ಶ್ರುತಿ, ಸ್ಮೃತಿ, ಪುರಾಣ, ಇತಿಹಾಸಗಳನ್ನೇ ಪ್ರಮಾಣವಾಗಿ ಬಳಸಿಕೊಳ್ಳುತ್ತಾರೆ. ಅವರು ಎಂದಿಗೂ ಅಪ್ರಸಿದ್ಧವೂ ಏಕದೇಶೀಯವೂ ಆದ ವಿವಾದಾಸ್ಪದ ಗ್ರಂಥಗಳನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಇದೇ ರೀತಿ ಆನಂದವರ್ಧನ ಕೂಡ ಪಂಡಿತ-ಪಾಮರಭೇದವಿಲ್ಲದೆ ಸಮಸ್ತರಿಗೂ ಉಪಾದೇಯವಾಗಿರುವ ವ್ಯಾಸ-ವಾಲ್ಮೀಕಿ-ಕಾಳಿದಾಸರಂಥ ಮಹಾಕವಿಗಳ ಮಹಾಕೃತಿಗಳನ್ನೇ ತನ್ನ ಸಿದ್ಧಾಂತಕ್ಕೆ ಪ್ರಮಾಣವಾಗಿ ಬಳಸಿಕೊಳ್ಳುತ್ತಾನೆ. ಇದನ್ನವನು ಕಂಠೋಕ್ತವಾಗಿಯೂ ಹೇಳಿದ್ದಾನೆ.[1]...
ನಿರ್ಗುಣಬ್ರಹ್ಮ-ಸಗುಣಬ್ರಹ್ಮ, ಧ್ವನಿ-ಗುಣೀಭೂತವ್ಯಂಗ್ಯ ಶಂಕರ ಮತ್ತು ಆನಂದವರ್ಧನರ ಸಿದ್ಧಾಂತಗಳಿಗಿರುವ ಸರ್ವಸಮನ್ವಯದೃಷ್ಟಿ ಮತ್ತೂ ಒಂದು ಅಂಶದಲ್ಲಿದೆ. ಅದು ಬ್ರಹ್ಮಕ್ಕೆ ಸಗುಣತ್ವ ಮತ್ತು ನಿರ್ಗುಣತ್ವಗಳೆಂಬ ಎರಡು ಸ್ತರಗಳ ಕಲ್ಪಿಸುವಿಕೆ ಹಾಗೂ ವ್ಯಂಜನಾವ್ಯಾಪಾರದ ಪ್ರಾಧಾನ್ಯ ಮತ್ತು ಅಪ್ರಾಧಾನ್ಯಗಳಿಗೆ ಅನುಸಾರವಾಗಿ ವ್ಯಂಗ್ಯ ಮತ್ತು ಗುಣೀಭೂತವ್ಯಂಗ್ಯ ಎಂಬ ಎರಡು ಹಂತಗಳ ರೂಪಿಸುವಿಕೆಯನ್ನು ಕುರಿತಿದೆ.[1] ಈ ಮೂಲಕ ಶಂಕರರು ಕರ್ಮ, ಭಕ್ತಿ, ಧ್ಯಾನಗಳಂಥ ಎಲ್ಲ ಬಗೆಯ ಆರಾಧನೆ-ಉಪಾಸನೆಗಳನ್ನೂ ತಮ್ಮ ತತ್ತ್ವಕ್ಕೆ ಅವಿರೋಧವಾಗಿ ಹವಣಿಸಿದ್ದಾರೆ. ಹೀಗಾಗಿಯೇ...
ವಸ್ತುತಂತ್ರ-ಪುರುಷತಂತ್ರ ತಮ್ಮ ಶಾಸ್ತ್ರಗಳಲ್ಲಿ ಯಾವುದು “ವಸ್ತುತಂತ್ರ” ಮತ್ತಾವುದು “ಪುರುಷತಂತ್ರ” ಎಂದು ಸ್ಪಷ್ಟವಾಗಿ ವಿಂಗಡಿಸಿಕೊಡುವಲ್ಲಿಯೇ ಶಂಕರ ಮತ್ತು ಆನಂದವರ್ಧನರ ಕೊಡುಗೆ ಮುಖ್ಯವಾಗಿ ಸಲ್ಲುತ್ತದೆ. ಈ ಎರಡು ದಿಗ್ದರ್ಶಕವಾದ ಪರಿಭಾಷೆಗಳನ್ನು ನಮಗೆ ಹವಣಿಸಿಕೊಟ್ಟ ಶ್ರೇಯಸ್ಸು ಶಂಕರರಿಗೇ ಸಲ್ಲುತ್ತದೆನ್ನಬೇಕು.[1] ಆ ಪ್ರಕಾರ ಯಥಾವತ್ತಾದ ಜ್ಞಾನವೇ ವಸ್ತುತಂತ್ರ. ಹಾಗಲ್ಲದೆ ನಾವು ಮಾಡಿಕೊಂಡ ತಾತ್ಕಾಲಿಕವಾದ ತಿಳಿವು ಪುರುಷತಂತ್ರ. ಅಂದರೆ, ವ್ಯಕ್ತಿಗಳ ಇಷ್ಟಾನಿಷ್ಟಗಳಿಗೆ ಅನುಸಾರವಾಗಿ ಅಣಿಗೊಂಡ ಕಟ್ಟು-ಕಟ್ಟಲೆಗಳು ಪುರುಷತಂತ್ರ;...
Himalaya
ವೇದಾಂತಾರ್ಥತದಾಭಾಸಕ್ಷೀರನೀರವಿವೇಕಿನಮ್ | ನಮಾಮಿ ಭಗವತ್ಪಾದಂ ಪರಹಂಸಧುರಂಧರಮ್ || (ಅಮಲಾನಂದ) ಧ್ವನಿನಾತಿಗಭೀರೇಣ ಕಾವ್ಯತತ್ತ್ವನಿವೇಶಿನಾ | ಆನಂದವರ್ಧನಃ ಕಸ್ಯ ನಾಸೀದಾನಂದವರ್ಧನಃ || (ರಾಜಶೇಖರ) ಭಾರತೀಯಸಂಸ್ಕೃತಿಯು ಜ್ಞಾನಲೋಕಕ್ಕೆ ನೀಡಿದ ಕೊಡುಗೆಗಳ ಪೈಕಿ ಭಾಷೆಯ ಸ್ತರದಲ್ಲಿ ವ್ಯಾಕರಣದರ್ಶನ, ಜೀವನಕ್ರಮದಲ್ಲಿ ತ್ರಿವರ್ಗತತ್ತ್ವ ಮತ್ತು ಸ್ವಾಸ್ಥ್ಯಸಂಹಿತೆಯಲ್ಲಿ ಆಯುರ್ವೇದ ಎದ್ದುತೋರುವಂಥವು. ಈ ಸಾಲಿಗೆ ಸೇರುವ ಮತ್ತೆರಡು ಅಂಶಗಳೆಂದರೆ ಜೀವನಮೀಮಾಂಸೆಯಾದ ವೇದಾಂತ ಮತ್ತು ಸೌಂದರ್ಯಮೀಮಾಂಸೆಯಾದ ರಸಧ್ವನಿತತ್ತ್ವ. ಸದ್ಯದ ಲೇಖನವು ಈ ಎರಡು ಅಂಶಗಳನ್ನು...