Literature

ಸಾಕ್ಷಿ – ಇರುವು; ಅರಿವು; ಹರವು – 4

ಪ್ರತಿಮೆ, ಪ್ರಕರಣ ಮತ್ತು ತತ್ತ್ವಗಳು

ಅತಿ ಗಹನವೂ  ಕ್ಲಿಷ್ಟವೂ ಆದ ತತ್ತ್ವವನ್ನು ಪ್ರತಿನಿಧಿಸುವ ಈ ಕಥಾವಸ್ತುವನ್ನು ಚಿತ್ರಿಸುವಲ್ಲಿ ಪರಿಣಾಮಕಾರಿ ಮತ್ತು ತೀಕ್ಷ್ಣವಾದ ಕಾವ್ಯಮಯಪ್ರತಿಮೆಗಳು ಮತ್ತು ಸಂದರ್ಭಗಳನ್ನು ಲೇಖಕರು ಸಮುಚಿತವಾಗಿ ಬಳಸಿ ಸಾಕ್ಷಿಯನ್ನು ರಸಸಾಂದ್ರವನ್ನಗಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ನೋಡೋಣ.

ಸಾಕ್ಷಿ – ಇರುವು; ಅರಿವು; ಹರವು – 2

ಮಂಜಯ್ಯ:

ಹೆಣ್ಗಳ ಕಣ್ಣಿನಲ್ಲಿ ಮನ್ಮಥನು ಮನುಷ್ಯರೂಪವನ್ನು ತಾಳಲು ಯೋಚಿಸಿದರೆ ಯಾವ ರೂಪವನ್ನು ತಾಳಬಹುದೋ ಅದೇ ಮಂಜಯ್ಯ.  ಆದರೆ ಇವನದ್ದು ಶೃಂಗಾರದ ಮುಸುಕಿನಲ್ಲಿರುವ ವೀರ ಮತ್ತು ಅದರ ಮದ .  ಇವನಿಗೆ ಮುಪ್ಪಿಲ್ಲ. ಇವನಿಗೆ ಸೋಲದ  ಹೆಣ್ಣುಗಳಿಲ್ಲ. ಆದರೆ ಪ್ರತಿಯೊಂದು  ಹೆಣ್ಣಿನ ಸಂಗದಲ್ಲಿಯೂ ಇವನು ಬಯಸುತ್ತಿರುವುದು ದೇಹಪ್ರಕೃತಿಯ, ಕಾಮದ ಚೋದನೆಯ ಈಡೇರಿಕೆಯಲ್ಲ; ತನ್ನ ಅಹಂಕಾರದ ಮೆರವಣಿಗೆ. ಹೆಣ್ಣನ್ನು ಗೆದ್ದೆನೆಂಬ ಹೆಮ್ಮೆಯ ಅನುಭವ. ಇವನ ಹೆಣ್ಣುಬಾಕತನದ ಹಿಂದಿರುವುದು ತೀವ್ರವಾದ ಕಾಮವಲ್ಲ, ಅಹಂಕಾರ.   ಹಾಗಾಗಿಯೇ ಇವನ ಈ ದಾಹವು, ಅವನನ್ನು ವಿಕೃತಕಾಮಿಯನ್ನಾಗಿಸಿ, ಮೌಲ್ಯಭ್ರಷ್ಟನನ್ನಾಗಿಸಿ ಸಮಾಜದ ಸ್ಥಾಪಿತಮೌಲ್ಯಪ್ರತಿಮೆಗಳನ್ನು ಲೆಕ್ಕಕ್ಕಿಡದೆ ಒಡೆದುಹಾಕುವಂತೆ ಮಾಡುವುದು.

ಸಾಕ್ಷಿ – ಇರುವು; ಅರಿವು; ಹರವು - 1

ಭೈರಪ್ಪನವರ ಕಾದಂಬರಿ “ಸಾಕ್ಷಿ" ಯನ್ನು ಓದುವಾಗ, ಅದು ಚಿತ್ರಿಸುತ್ತಿರುವ ಕಥೆಯ ಬೆರಗು, ಮನುಷ್ಯನ ಧರ್ಮ, ಅರ್ಥ ಮತ್ತು ಕಾಮ, ಅಹಂಕಾರ ಮತ್ತು ಮೌಲ್ಯಗಳ  ತಳಹದಿಯ ಪಾತ್ರ-ಪ್ರಸಂಗಗಳ  ಚಿತ್ರಣದ ವಿವಿಧ ರೂಪಗಳ ಸೆಳೆತದಲ್ಲಿ, ಗ್ರಾಮೀಣ ಜನಜೀವನ ಮತ್ತು ಸಂಭಾಷಣೆಗಳಲ್ಲಿ ಓದುಗರ ಚಿತ್ತ ಕಳೆದುಹೋಗಿ, ಈ ಕಾದಂಬರಿಯು ಸೂಕ್ಷ್ಮವಾಗಿ, ಸೂಚಿಸುವ  - ಪ್ರತಿಯೊಬ್ಬ ಜೀವಿಯಲ್ಲಿ ನಡೆಯುವ/ನಡೆಯಬೇಕಾದ/ನಡೆಯದ -  ಮೌಲ್ಯವಿಶ್ಲೇಷಣೆಯನ್ನು, ಅದಕ್ಕೆ ಆಧಾರವಾದ ವಿವಿಧ ರೀತಿಯ ವ್ಯಕ್ತಿಗಳ ಅಹಂಕಾರ ಮತ್ತು ಆತ್ಮಸಾಕ್ಷಿಯ ಸ್ವರೂಪವನ್ನು ಗ್ರಹಿಸದೆ ಇದ್ದುಬಿಡುವ ಸಂಭವವಿದೆ. ಇದಕ್ಕೆ ಕಾರಣ ಕಾದಂಬರಿಯ ವಸ್ತುವಿನ ಆಕರ್ಷಣೆ ಒಂದೆಡೆಯಾದರೆ, ಅದನ್ನು ಅನನ್ಯ ರೀತಿಯಲ್ಲಿ ಪ್ರತಿನಿಧಿಸುವ ಪಾತ್ರಗಳು ಇನ್ನೊಂದೆಡೆ.

A story for a verse - Rāmabhadrāmba

कलारत्नं गीतं गगनतलरत्नं दिनमणिः

सभारत्नं विद्वान् श्रवणपुटरत्नं हरिकथा |

निशारत्नं चन्द्रः शयनतलरत्नं शशिमुखी

महीरत्नं श्रीमान् जयति रघुनाथो नृपवरः ||

 

A story for a verse- Mangalamba

वेणीभूतेषु केशेष्वतसिफणिधिया द्रष्टुमागत्य केकी

पश्चादारभ्य योद्धुं प्रतिशिखिमनसा तेषु विस्रंसितेषु |

भूयो धमिल्लितेषु प्रकटघनधिया नर्तनायोज्जजृम्भे

तन्नृत्तालोकनान्मे प्रियसख मम भून्मण्डनश्रीविलंबः ||

 

ಧೀರರಸ

“ಧೀರೋ ವಿಶಿಷ್ಟೋ ರಸಃ” ಎಂಬ ತಮ್ಮ ಶೋಧಪ್ರಬಂಧದಲ್ಲಿ ಶತಾವಧಾನಿ ಡಾ|| ಆರ್. ಗಣೇಶರು ’ಧೀರ’ಎಂಬ ನೂತನರಸದ ಬಗೆಗೆ ಚರ್ಚಿಸಿ ಸಾಂಪ್ರದಾಯಿಕವಾಗಿ ಸ್ವೀಕೃತವಾಗಿರುವ ರಸಗಳ ಪಟ್ಟಿಯಲ್ಲಿ ಧೀರರಸಕ್ಕೂ ಅನನ್ಯವಾದ ಸ್ಥಾನವಿದೆಯೆಂದು ಪ್ರತಿಪಾದಿಸಿದ್ದಾರೆ. ಶಾಸ್ತ್ರೀಯಶೈಲಿಯಲ್ಲಿ ರಚಿತವಾಗಿರುವ ಮೂಲಪ್ರಬಂಧವು ಕಾರಿಕೆ-ವೃತ್ತಿಗಳ ರೂಪದಲ್ಲಿ ಸಾಗಿದೆ. ಪ್ರಕೃತಲೇಖನವು ಸಂಸ್ಕೃತಭಾಷೆಯಲ್ಲಿರುವ ಗಣೇಶರ ಲೇಖನದ ಸಂಗ್ರಹಾನುವಾದ.

~

-೧-

ಅನಂತರಸವಿಸ್ತೀರ್ಣಾಮಖಂಡರಸಮಂಡನಾಮ್ |

A story for a verse - Acchamma

विपश्चितामपश्चिमे विवादकेलिनिश्चले

सपत्नजित्ययत्नतस्तु रत्नखेटदीक्षिते |

बृहस्पतिः क्व जल्पति क्व सर्पतीह सर्पराट्

असंमुखस्तु षण्मुखश्चतुर्मुखोsपि दुर्मुखः ||