“ಲೋಚನ”ದ ಕೆಲವೊಂದು ಮಹತ್ತ್ವಪೂರ್ಣಸಂಗತಿಗಳು ಆನಂದವರ್ಧನನು ತಾನು ಪ್ರತಿಪಾದಿಸಿದ ಧ್ವನಿತತ್ತ್ವದ ಮೂರು ಸ್ತರಗಳಾದ ವಸ್ತು, ಅಲಂಕಾರ ಮತ್ತು ರಸಧ್ವನಿಗಳ ನಡುವೆ ಪ್ರಸ್ಫುಟವಾದ ತರ-ತಮವಿವೇಕವನ್ನು ಗ್ರಹಿಸಿದ್ದರೂ ಅದನ್ನು ಕಂಠೋಕ್ತವಾಗಿ ಸಾರಿರಲಿಲ್ಲ. ಈ ಕೆಲಸವನ್ನು ಅಭಿನವಗುಪ್ತನು ಧ್ವನಿಕಾರನ ಹೃದಯಜ್ಞನಾಗಿ ನಡಸಿರುವುದು ನಿಜಕ್ಕೂ ಮುದಾವಹ. ಈ ಮೂಲಕ ಸಾಮಾನ್ಯತಃ ಕಾವ್ಯಾತ್ಮವು ಧ್ವನಿಯೆಂದು ಧ್ವನ್ಯಾಲೋಕದ ಮೊದಲಿಗೆ ಒಕ್ಕಣೆಗೊಂಡಿದ್ದರೂ ವಸ್ತುತಃ ರಸವೇ ಕಾವ್ಯದ ಆತ್ಮವೆಂಬ ಪರಮಾರ್ಥವು ಉನ್ಮೀಲಿತವಾಯಿತು. ಅಲ್ಲದೆ ವಸ್ತ್ವಲಂಕಾರಧ್ವನಿಗಳು ಬಲುಮಟ್ಟಿಗೆ...
ಸಕಲಶಾಸ್ತ್ರಸಮನ್ವಯಸೌರಭಂ ನಿಖಿಲಚಾರುಕಲಾರುಚಿರಂ ಚಿರಮ್ | ಅಭಿನವಾರ್ಥನಿಬೋಧನವಿಭ್ರಮಂ ತ್ವಭಿನವಂ ಪ್ರಣತೋऽಸ್ಮಿ ಸುಮೋಪಮಮ್ || ಪ್ರವೇಶಿಕೆ ಮಹಾಮಾಹೇಶ್ವರ ಅಭಿನಗುಪ್ತನು ಭಾರತೀಯಸೌಂದರ್ಯಶಾಸ್ತ್ರ ಹಾಗೂ ಕಾವ್ಯಮೀಮಾಂಸೆಗಳಿಗೆ ಕೊಟ್ಟ ಕೊಡುಗೆ ಲೋಕವಿಖ್ಯಾತ, ಸರ್ವದಾ ವಿದ್ವನ್ಮಾನಿತ ಮತ್ತು ಸಹೃದಯಶಿರೋಧಾರ್ಯ. ಮುಖ್ಯವಾಗಿ, ಇಂದು ಉಪಲಬ್ಧವಿರುವ ಆತನ “ಅಭಿನವಭಾರತೀ” ಹಾಗೂ “ಧ್ವನ್ಯಾಲೋಕಲೋಚನ”ಗಳು ಯಾವುದೇ ದೇಶ-ಕಾಲಗಳ ಕಲಾಸೌಂದರ್ಯಜಿಜ್ಞಾಸುಗಳಿಗೆ ಅನಿವಾರ್ಯಾಲಂಬನಗಳು. ಈತನು ಕಲಾಮೀಮಾಂಸೆಯನ್ನು ಕುರಿತು ಯಾವುದೇ ಸ್ವತಂತ್ರಗ್ರಂಥವನ್ನು ರಚಿಸದಿದ್ದರೂ ಭರತ...