ಇನ್ನು ಮುಂದೆ ಸುಭಾಷಿತಚಮತ್ಕಾರದ ಕೆಲವೊಂದು ಅನುವಾದಗಳನ್ನು ಪರಿಶೀಲಿಸೋಣ. ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಷ್ಚಿಕದಂಶನಮ್ | ತನ್ಮಧ್ಯೇ ಭೂತಸಂಚಾರೋ ಯದ್ವಾ ತದ್ವಾ ಭವಿಷ್ಯತಿ || ಮಂಗ ಸೆರೆಯ ಕುಡಿಯಿತು, ಮೇಲೆ ಚೇಳು ಕಡಿಯುತು, ಮತ್ತೆ ಭೂತ ಬಡಿಯಿತು, ಏನಕೇನೊ ಆಯಿತು (ಸು.ಚ., ಪುಟ ೯೮) ಉತ್ಸಾಹಗತಿಯಲ್ಲಿ ಸಾಗಿದ ಅನುವಾದ ತನ್ನ ಮೂರು-ಮೂರು ಮಾತ್ರೆಗಳ ಸಂಕ್ಷಿಪ್ತಗಣಗಳ ಚುರುಕುನಡೆಯ ಮೂಲಕ ಮಂಗನ ಚೇಷ್ಟೆಯನ್ನು ಸೊಗಸಾಗಿ ಧ್ವನಿಸಿದೆ. ಅಲ್ಲದೆ, ಪ್ರತಿಪಾದದ ಕಡೆಯಲ್ಲಿ ಲಘುವೊಂದು ಕರ್ಷಣದ ಮೂಲಕ ಗುರುವಾಗಿ ನಿಲ್ಲುವ ಕ್ರಮದಿಂದ ಪದ್ಯಕ್ಕೆ ಎಲ್ಲಿಲ್ಲದ...
ಇನ್ನು ಮುಂದೆ ಇವರಿಬ್ಬರ ಕೆಲವೊಂದು ಅನುವಾದಗಳನ್ನು ಸ್ವತಂತ್ರವಾಗಿ ಪರಿಶೀಲಿಸೋಣ. ಮೊದಲಿಗೆ ಬಿಡಿಮುತ್ತನ್ನು ಗಮನಿಸಬಹುದು. ಚತುರ್ಮುಖಮುಖಾಂಭೋಜವನಹಂಸವಧೂರ್ಮಮ | ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ || ನಾಲ್ಮೊಗನ ಸಾಲ್ಮೊಗದ ತಾವರೆಯ ಬನದೊಳಗೆ ರಾಜಿಸುವ ಹಂಸರಮಣಿ ಚಿರಕಾಲ ವಿಹರಿಸಲಿ ನನ್ನ ಮಾನಸದೊಳಗೆ ಸರ್ವಾಂಗಧವಳೆ ವಾಣಿ (ಬಿ.ಮು., ಪುಟ ೬) ಮೂಲದ ಅನುಪ್ರಾಸಪರಿಪ್ಲುತವಾದ ಪೂರ್ವಾರ್ಧವು ಅಷ್ಟೇ ಸುಂದರವಾಗಿ ಅನುವಾದದ ಪೂರ್ವಾರ್ಧದಲ್ಲಿ ಬಂದಿರುವುದು ಗಮನಾರ್ಹ. ವಿಶೇಷತಃ “ನಾಲ್ಮೊಗನ ಸಾಲ್ಮೊಗದ ತಾವರೆಯ” ಎಂಬ ಸಮಾನಮಾತ್ರಾವಿನ್ಯಾಸದ ಪದಗಳು...
ಇನ್ನು ಮುಂದೆ ಈ ಎರಡು ಕೃತಿಗಳ ಹಲಕೆಲವು ಪದ್ಯಗಳನ್ನು ತೌಲನಿಕವಾಗಿ ಸಮೀಕ್ಷಿಸಬಹುದು. ಮೊದಲಿಗೆ ಇಬ್ಬರೂ ಅನುವಾದಕ್ಕೆ ತೆಗೆದುಕೊಂಡಿರುವ ಸಮಾನಪದ್ಯಗಳನ್ನು ಪರಿಶೀಲಿಸೋಣ. ಕರಾರವಿಂದೇನ ಪದಾರವಿಂದಂ       ಮುಖಾರವಿಂದೇ ವಿನಿವೇಶಯಂತಮ್ | ವಟಸ್ಯ ಪತ್ರಸ್ಯ ಪುಟೇ ಶಯಾನಂ       ಬಾಲಂ ಮುಕುಂದಂ ಮನಸಾ ಸ್ಮರಾಮಿ || ಹಸ್ತಕಮಲದಿಂದ ತನ್ನ ಚರಣಕಮಲವ ತೆಗೆದು ವದನಕಮಲದೊಳಗೆ ಹೊಗಿಸುತಿರುವನ ಆಲದೆಲೆಯೆ ತೊಟ್ಟಿಲೊಳಗೆ ಪವಡಿಸಿರುವನ ನೆನೆವೆನೆನ್ನ ಚಿತ್ತದೊಳಗೆ - ಮಗು ಮುಕುಂದನ (ಬಿ.ಮು., ಪುಟ ೩) ಅಡಿಯ ತಾವರೆಯನ್ನು ಕೈಯ ತಾವರೆಯಿಂದ ಬಾಯ ತಾವರೆಯಲ್ಲಿ ಹೊಗಿಸುವವನ...
ಸಂಸ್ಕೃತಸಾಹಿತ್ಯದ ಚಿರಸುಂದರವಾದ ರಸಮಯಭಾಗಗಳಲ್ಲಿ ಸುಭಾಷಿತಗಳಿಗೆ ಮಿಗಿಲಾದ ಸ್ಥಾನವಿದೆ. ಇವನ್ನು ಭಾವಕವಿತೆಯ ಅತ್ಯುತ್ತಮಪ್ರತಿನಿಧಿಗಳೆಂದು ಕೂಡ ಕರೆಯಬಹುದು. ಜೀವನದ ಎಲ್ಲ ಮುಖಗಳನ್ನೂ ಪ್ರಕೃತಿಯ ಎಲ್ಲ ಪರಿಯ ಸೊಗಸುಗಳನ್ನೂ ಶಾಸ್ತ್ರ-ಕಲೆಗಳ ಅಸಂಖ್ಯಸ್ವಾರಸ್ಯಗಳನ್ನೂ ಸುಭಾಷಿತಗಳು ಸಮರ್ಥವಾಗಿ ಬಿಂಬಿಸಿಕೊಂಡು ಬಂದಿವೆ. ಭಾರತೀಯಸಾಹಿತ್ಯಪರಂಪರೆಯ ಕಥನೇತರಧಾರೆಯ ಸರ್ವೋಚ್ಚಸಾಧನೆಯೇ ಸುಭಾಷಿತವೆಂದರೆ ತಪ್ಪಲ್ಲ. ಇವುಗಳ ಹೂರಣವೆಷ್ಟು ಸವಿಯೋ ತೋರಣವೂ ಅಷ್ಟೇ ಸೊಗಸು. ಇಲ್ಲಿ ಬಗೆಬಗೆಯ ಛಂದಸ್ಸುಗಳ, ಪರಿಪರಿಯ ಅಲಂಕಾರಗಳ, ಕಿವಿಗಳನ್ನು ಜಕ್ಕುಲಿಸುವ ಪದಪುಂಜಗಳ...