ಅಭಿನವಭಾರತಿಯಲ್ಲಿ ಉಲ್ಲೇಖಗೊಂಡ ಲೇಖಕರು ಮತ್ತು ಕೃತಿಗಳು ಅಭಿನವಭಾರತಿ ತನ್ನ ಗುಣ-ಗಾತ್ರಗಳಿಂದ ಮಿಗಿಲಾದ ಗಣ್ಯತೆಯನ್ನು ಪಡೆದ ಗ್ರಂಥವಷ್ಟೆ. ಇಂಥ ಆಚಾರ್ಯಕೃತಿಗೆ ಅಧಿಕೃತತೆಯನ್ನೂ ಅರ್ಥಪೂರ್ಣತೆಯನ್ನೂ ತರಲು ಅಭಿನವಗುಪ್ತನು ಅನೇಕಪೂರ್ವಸೂರಿಗಳ ವಿಚಾರಗಳನ್ನೂ ಕೃತಿಗಳನ್ನೂ ಉದ್ಧರಿಸಿದ್ದಾನೆ. ಇದು ಅವನ ವಿದ್ವನ್ಮತ್ತೇಭವಿಕ್ರೀಡಿತಕ್ಕೆ ಸಾಕ್ಷಿಯೂ ಹೌದು. ಈಗಿನಂತೆ ಸಂಶೋಧನೆಗೆ ಯಾವುದೇ ಸುಲಭಮಾರ್ಗಗಳಿಲ್ಲದಿದ್ದಾಗ ಪ್ರತಿಯೊಂದು ಆಕರಗ್ರಂಥವನ್ನೂ ಮೂಲದಲ್ಲಿಯೇ ಓದಿ ಅಥವಾ ಗುರೂಪಾಸನೆಯ ಮೂಲಕ ಕಲಿತು ಅವುಗಳ ವಿಚಾರಸಾರವನ್ನು ಜೀರ್ಣಿಸಿಕೊಂಡ ಬಳಿಕವಷ್ಟೇ...
ಉಪರೂಪಕಗಳು “ತಾಂಡವಲಕ್ಷಣಾಧ್ಯಾಯ”ದಲ್ಲಿ ಭರತನು ದಿಙ್ಮಾತ್ರವಾಗಿಯೂ ಸೂಚಿಸದಿರುವ ಎಷ್ಟೋ ಅಂಶಗಳನ್ನು ಅಭಿನವಗುಪ್ತನು ಪ್ರಪಂಚಿಸುತ್ತಾನೆ. ಅಂಥ ಅಂಶಗಳಲ್ಲಿ  ಒಂದು—ನೃತ್ತವು  ಏಕಹಾರ್ಯವೂ ಬಹುಹಾರ್ಯವೂ ಆಗಿ ವಿಸ್ತರಿಸಿಕೊಳ್ಳುವ ಸಂಗತಿಯ ಚರ್ಚೆ. ಇಲ್ಲಿಯೇ ನೃತ್ಯಪ್ರಧಾನವಾಗಿ ಅನಂತರಕಾಲದಲ್ಲಿ ರೂಪುಗೊಂಡ ಉಪರೂಪಕಗಳ ಅದೆಷ್ಟೋ ವಿವರಗಳು ಸ್ವತಂತ್ರಗ್ರಂಥರೂಪದಲ್ಲೆಂಬಂತೆ ಆವಿಷ್ಕೃತವಾಗಿವೆ. ಪ್ರತಿಯೊಂದು ರೂಪಕಪ್ರಭೇದದಲ್ಲಿಯೂ ಮಿಕ್ಕ ರೂಪಕಗಳ ಅಂಶಗಳ ಅಸ್ತಿತ್ವ, ಲಾಸ್ಯಾಂಗಗಳ ಪೂರ್ಣಾನ್ವಯದ ಮೂಲಕ ವಿಕಸಿತವಾದ ಉಪರೂಪಕಗಳ ಆವಿಷ್ಕಾರ, ಏಕಹಾರ್ಯದ ಮೂಲಕ...
ಅಭಿನವಗುಪ್ತನು ಅಭಿನಯಹಸ್ತಗಳ ವಿನಿಯೋಗವನ್ನು ಕುರಿತಂತೆ ತುಂಬ ವಿಶದವಾಗಿ ವ್ಯಾಖ್ಯಾನವನ್ನು ರಚಿಸಿದ್ದಾನೆ. ಇಲ್ಲಿಯ ವಿವರಗಳು ಯಾರಿಗಾದರೂ ಬೆರಗನ್ನು ತಾರದಿರವು. ಅವನು ಇಷ್ಟಕ್ಕೇ ಸೀಮಿತನಾಗದೆ ಈ ಬಗೆಯ ಹಸ್ತಗಳ ವಿನಿಯೋಗಕ್ಕೆ ಮತ್ತೆಷ್ಟೋ ಎಡೆಗಳನ್ನು ಕಾಣುತ್ತಾನೆ. ಅಂಥ ಒಂದು ಸಂದರ್ಭವು ಚಾರಿಗಳನ್ನು ನಿರ್ವಹಿಸುವಾಗ ಯಾವ ಬಗೆಯಲ್ಲಿ ಹಸ್ತಗಳನ್ನು ಹಿಡಿಯುವುದು ಸಮುಚಿತವೆಂದು ವಿವೇಚಿಸುವುದರಲ್ಲಿದೆ. ಆ ಪ್ರಕಾರ ಅಭಿನವಗುಪ್ತನು ನಾಟ್ಯದಲ್ಲಿ ಅರ್ಧಚಂದ್ರಹಸ್ತವನ್ನೂ ನೃತ್ತದಲ್ಲಿ “ಪಕ್ಷಪ್ರದ್ಯೋತ” ಮತ್ತು “ಪಕ್ಷವಂಚಿತ”ಗಳನ್ನೂ ಒಳಿತೆಂದು ಸೂಚಿಸುತ್ತಾನೆ...
Angika
ಆಂಗಿಕಾಭಿನಯ ನಾಟ್ಯಶಾಸ್ತ್ರವು ಲೋಕಪ್ರಸಿದ್ಧವಾಗಿರುವುದೇ ತನ್ನ ಆಂಗಿಕಾಭಿನಯಪ್ರತಿಷ್ಠೆಯಿಂದ. ಇಂದಿಗೂ ಲೋಕಸಾಮಾನ್ಯದಲ್ಲಿ ನಾಟ್ಯವೆಂದರೆ ಆಂಗಿಕಪ್ರಧಾನವಾದ ನರ್ತನವೆಂದೇ ತಾತ್ಪರ್ಯ. ಮೂಲತಃ ಭರತನೇ ನರ್ತನಕಲೆಯನ್ನು ಕುರಿತು ಅದ್ಭುತವಾದ ಗುಣ-ಗಾತ್ರಗಳುಳ್ಳ ಬೋಧಪ್ರದವಿಚಾರವನ್ನು ನೀಡಿದ್ದಾನೆ. ಇಂಥ ಮಹಾವಿಷಯವನ್ನು ಅಭಿನವಗುಪ್ತನು ಮತ್ತಷ್ಟು ಮೌಲಿಕವಾಗಿಸಿರುವುದು ಆತನ ವ್ಯಾಖ್ಯಾನವೈಶಿಷ್ಟ್ಯ. ಭಾರತೀಯಸೌಂದರ್ಯಮೀಮಾಂಸಕರ ಹರಹು ಅದೆಷ್ಟೆಂಬುದನ್ನು ಮನಗಾಣಲು ಇದೊಂದೇ ಪರ್ಯಾಪ್ತನಿದರ್ಶನವಾದೀತು. ಆಧುನಿಕರಲ್ಲಿ ಒಬ್ಬ ವಿ. ರಾಘವನ್ ಅವರನ್ನುಳಿದು...
AbhinavaBharati
ಛಂದಸ್ಸು ನಾಟ್ಯಶಾಸ್ತ್ರವು ಛಂದೋವಿಚಿತಿಯನ್ನು ಕುರಿತು ಬೆಲೆಯುಳ್ಳ ಎಷ್ಟೋ ವಿಚಾರಗಳನ್ನು ಹೇಳಿದ್ದರೂ ಅಭಿನವಗುಪ್ತನು ತಕ್ಕ ರೀತಿಯಲ್ಲಿ ನ್ಯಾಯ ಸಲ್ಲಿಸಿದಂತೆ ತೋರದು. ಆದರೂ ಅವನ ಛಂದಸ್ಸೂಕ್ಷ್ಮಗಳ ಅರಿವು ಹಿರಿದಾದುದೆಂಬುದರಲ್ಲಿ ಸಂದೇಹವಿಲ್ಲ. ಅದಕ್ಕೆ ಕೇವಲ ಒಂದೇ ಒಂದು ನಿದರ್ಶನವನ್ನು ನಾವಿಲ್ಲಿ ಗಮನಿಸಬಹುದು. ಅದು ವಿವಿಧಚ್ಛಂದಸ್ಸುಗಳ ಪಾಠ್ಯತ್ವ ಮತ್ತು ಗೇಯತ್ವಗಳಿಗೆ ಸಂಬಂಧಿಸಿದ ವಿವೇಕ. ಛಂದಶ್ಶಾಸ್ತ್ರವು ಹಲವು ಕೋಟಿ ಛಂದಸ್ಸುಗಳ ಸಾಧ್ಯತೆಯನ್ನು ಲೆಕ್ಕವಿಟ್ಟಿದ್ದರೂ ಸಂಸ್ಕೃತರೂಪಕಪ್ರಪಂಚದಲ್ಲಿ  ಸಾಮಾನ್ಯವಾಗಿ ಬಳಕೆಯಾಗುವ ಛಂದಸ್ಸುಗಳ ಸಂಖ್ಯೆ...
ABhinava Bharati
ದಶರೂಪಕ ನಾಟ್ಯಶಾಸ್ತ್ರದ ಮುಖ್ಯಾಧಿಕರಣಗಳಲ್ಲೊಂದು ದಶರೂಪಕಾಧ್ಯಾಯ. ದೃಶ್ಯಕಾವ್ಯವನ್ನು ವಿವಿಧರೀತಿಯ ನಾಟ್ಯರಸಿಕರ ರುಚಿಭೇದಗಳನ್ನು ಗಮನಿಸಿಕೊಂಡು ಹತ್ತು ಹನ್ನೊಂದು ಬಗೆಯ (ಹನ್ನೊಂದನೆಯದು “ನಾಟಿಕಾ” ಎಂಬ ಪ್ರಕಾರ. ಇದು ಮುಂದೆ “ಉಪರೂಪಕ”ಗಳ ವರ್ಗಕ್ಕೆ ಸೇರಿತು) ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಬಗೆಗೆ ವಿ. ರಾಘವನ್ ವ್ಯಾಪಕವಾದ ಅಧ್ಯಯನವನ್ನೇ ನಡಸಿದ್ದಾರೆ[1]. ಇಲ್ಲಿ ದಶರೂಪಕದ ಪರಿಕಲ್ಪನೆಯು ಭಾರತೀಯರಂಗಸಾಹಿತ್ಯದಲ್ಲಿ ಹೇಗೆ ಬೆಳೆದುಬಂದಿತೆಂಬ ದಿಕ್ಸೂಚಿಯಿದೆ. ನಾವಿಲ್ಲಿ ಕೇವಲ ಅಭಿನವಗುಪ್ತನ ಮತವನ್ನು ಮಾತ್ರ ಕೇಂದ್ರೀಕರಿಸೋಣ. ಅಭಿನವಗುಪ್ತನು “...
ಇತಿವೃತ್ತ “ಇತಿವೃತ್ತ”ವೆಂದರೆ ಕಥಾವಿಸ್ತರವೆಂದು ಸ್ಥೂಲವಾಗಿ ಹೇಳಬಹುದು. ಯಾವುದೇ ತೆರನಾದ (ದೃಶ್ಯ ಅಥವಾ ಶ್ರವ್ಯ) ಕಾವ್ಯದಲ್ಲಿ ಕಥಾತಂತುವೊಂದಿರಬೇಕಷ್ಟೆ. ಅದು ಇತಿವೃತ್ತವೇ ಆಗಿದೆ. ಈ ಸುದೀರ್ಘತಂತುವನ್ನು ಕೃತಿಕಾರನು ತನ್ನ ಭಾವ-ಬುದ್ಧಿಗಳ ಮಗ್ಗದಲ್ಲಿ ಅಳವಡಿಸಿ ಕಾವ್ಯವಸ್ತ್ರವನ್ನು ನೇಯುತ್ತಾನೆ. ಭರತನು ನಾಟ್ಯದ ಶರೀರವೇ ಇತಿವೃತ್ತವೆಂದು ಒಕ್ಕಣಿಸಿದ್ದಾನೆ (೧೯.೧). ಅಭಿನವಗುಪ್ತನು ಇದನ್ನು ವಿವರಿಸುತ್ತ, ಇತಿವೃತ್ತರೂಪಿಯಾದ ಕಥೆಯು ಶರೀರವಾದರೆ ರಸವೇ ಆತ್ಮವೆಂದು ನಮ್ಮ ಆಲಂಕಾರಿಕಲೋಕಕ್ಕೆ ಪ್ರಿಯವಾದ ಆತ್ಮ-ಶರೀರಗಳ ರೂಪಕವನ್ನು ವಿಸ್ತರಿಸುತ್ತಾನೆ....
ಇಂಥ ಎಷ್ಟೋ ಸಂಗತಿಗಳನ್ನು ಧ್ವನಿಸುವಂಥ ಬೆಲೆಯುಳ್ಳ ವಿವರಣೆಯನ್ನು ಅಭಿನವಗುಪ್ತ ನೀಡಿದ್ದಾನೆ. ಅವನ ಪ್ರಕಾರ ಉಭಯಧರ್ಮಿಗಳೂ ಲೋಕಸ್ವಭಾವದಲ್ಲಿಯೇ ಪರಮಾರ್ಥತಃ ನೆಲೆಗೊಂಡಿವೆ. ಲೋಕವೆಂದರೆ ನಮ್ಮ ಸುತ್ತಣ ಜಗತ್ತು. ಇದು ಅಲ್ಲಿಯ ಜನಜೀವನದ ಸಕಲಾಂಶಗಳನ್ನೂ ಒಳಗೊಂಡಿದೆ. ಹೀಗಾಗಿ “ಪ್ರವೃತ್ತಿ”ಯಲ್ಲಿ ಸಾಮಾನ್ಯವಾಗಿ ತೋರಿಕೊಳ್ಳುವ ಎಲ್ಲ ಸಂಗತಿಗಳೂ ಇಲ್ಲಿಗೆ ಅನ್ವಯಿಸುತ್ತವೆ. ಆದುದರಿಂದ “ಲೋಕಧರ್ಮಿ”ಯು ಕೆಲವೊಂದಂಶಗಳಲ್ಲಿ “ಪ್ರವೃತ್ತಿ”ಗೆ ನಿಕಟಬಂಧು. ನಾಟ್ಯವು ಬಲುಮಟ್ಟಿಗೆ ಲೋಕಾಶ್ರಿತವಾದ ಕಾರಣ “ಲೋಕಧರ್ಮಿ”ಯೊಂದೇ ಪಾರಮ್ಯವನ್ನು ತಾಳುವುದೆಂದು ಹೇಳಬಹುದಾದರೂ...
ಪ್ರವೃತ್ತಿಗಳು ಪ್ರವೃತ್ತಿಗಳೆಂದರೆ ಕಲಾನಿರ್ಮಾಣಕಾಲದಲ್ಲಿ ರಸೋಚಿತವಾಗಿ ಒದಗಿಬರಬಲ್ಲ ಪ್ರಾದೇಶಿಕವೈಶಿಷ್ಟ್ಯಗಳೆಂದು ಸ್ಥೂಲವಾಗಿ ಹೇಳಬಹುದು. ಇವನ್ನು ವೃತ್ತಿಗಳೊಡನೆ ಜೊತೆಗೂಡಿಸಿದಾಗ ದೇಶೀ ಮತ್ತು ಮಾರ್ಗಗಳ ಸಂವಾದವನ್ನೇ ಕಾಣಬಹುದು. ವೃತ್ತಿಗಳು ಮುಖ್ಯವಾಗಿ ವೇಷ-ಭಾಷೆಗಳಿಗೂ ನಯ-ವಿನಯಗಳಿಗೂ ಸಂಬಂಧಿಸಿವೆ. ಈ ಕಾರಣದಿಂದ ಇವು ಕಲೆಯ ಕೇಂದ್ರಭೂತವಾದ ಸಾತ್ತ್ವಿಕಾಭಿನಯ ಅಥವಾ ಸಾತ್ತ್ವತೀವೃತ್ತಿಯಿಂದ ಸ್ವಲ್ಪ ದೂರವಿದ್ದರೂ ಔಚಿತ್ಯಪೂರ್ಣವಾಗಿ ಬಳಕೆಗೊಂಡಾಗ ಅವು ಸತ್ತ್ವವನ್ನೇ ಪೋಷಿಸುತ್ತವೆಂಬುದು ಗಮನಾರ್ಹ. ಕಾವ್ಯದಲ್ಲಿ ಶಬ್ದಾರ್ಥಾಲಂಕಾರಗಳ ಸ್ಥಾನ ಹೇಗೋ...
ಕಲೆಗಿರುವ ಪ್ರಮಾಣಗಳು ನಮ್ಮ ಶಾಸ್ತ್ರಪ್ರಪಂಚದಲ್ಲಿ ಮೊದಲು ಆರಂಭವಾಗುವ ಚರ್ಚೆಯೇ ಸಂಜ್ಞೆ, ಪರಿಭಾಷೆ ಮತ್ತು ಪ್ರಮಾಣ-ಪ್ರಮೇಯಗಳನ್ನು ಕುರಿತದ್ದು. ಕಲಾಮೀಮಾಂಸೆಯೂ ಒಂದು ಶಾಸ್ತ್ರವಾದ ಕಾರಣ ಅಲ್ಲಿ ಈ ಚರ್ಚೆಗಳು ಅನಿವಾರ್ಯ. ಈಗಾಗಲೇ ನಾವು ಸಂಜ್ಞೆ ಮತ್ತು ಪರಿಭಾಷೆಗಳ (ಸ್ಥಾಯಿಭಾವ, ವಿಭಾವ, ಅನುಭಾವ, ವ್ಯಭಿಚಾರಿಭಾವ, ಶಬ್ದ, ಅರ್ಥ, ಧ್ವನಿ, ವಕ್ರತೆ, ಔಚಿತ್ಯ, ರಸ ಇತ್ಯಾದಿ) ಪರಿಚಯವನ್ನು ಅವುಗಳ ಬಳಕೆಯಿಂದಲೇ ಮಾಡಿಕೊಂಡಿದ್ದೇವೆ. ಇನ್ನು ಪ್ರಮೇಯವಂತೂ ಕಲೆಯೇ ಆಗಿದೆ. ಇಲ್ಲಿ ಕಲೆಯನ್ನು ಅಳೆಯುವುದೆಂದರೆ ಅದರ ಆಸ್ವಾದವಲ್ಲದೆ ಬೇರಲ್ಲ. ಇನ್ನುಳಿದಿರುವುದು...