ಲಕ್ಷಣವಿವೇಚನೆ
ಭರತಮುನಿಯು ನಾಟ್ಯಶಾಸ್ತ್ರದ ಹದಿನಾರನೆಯ ಅಧ್ಯಾಯದಲ್ಲಿ ಯಾವುದೇ ರೂಪಕದ ಪಾಠ್ಯರಚನೆಗೆ ಅನುಕೂಲಿಸುವ ಸಾಹಿತ್ಯವಿದ್ಯಾಪ್ರಧಾನವಾದ ಕೆಲವೊಂದು ಅಂಶಗಳ ಚರ್ಚೆಗೆ ತೊಡಗುತ್ತಾನೆ. ಇವುಗಳ ಪೈಕಿ ತುಂಬ ಮುಖ್ಯವಾದದ್ದು ಮೂವತ್ತಾರು ಲಕ್ಷಣಗಳ ನಿರೂಪಣೆ. ಇವನ್ನು ವಿದ್ವಾಂಸರು ಅಲಂಕಾರ, ಗುಣ, ವಕ್ರತೆ ಮತ್ತು ಧ್ವನಿಪ್ರಕಾರಗಳಿಗೂ ಬೀಜಭೂತವಾದ ಕಾವ್ಯತತ್ತ್ವಗಳೆಂದು ಗುರುತಿಸಿದ್ದಾರೆ. ಯದ್ಯಪಿ ಇವುಗಳ ಸಂಯೋಜನೆಯಲ್ಲಿ ವ್ಯವಸ್ಥಿತವಾದ ಕ್ರಮವಾಗಲಿ, ಪರಿಷ್ಕಾರವಾಗಲಿ ಇಲ್ಲದಿದ್ದರೂ ಇವುಗಳಲ್ಲಿ ಅಡಗಿರುವ ತತ್ತ್ವ ಮತ್ತು ಅಲಂಕಾರಶಾಸ್ತ್ರದ ಮುಂದಿನ...
ವಿವಿಧರಸಗಳನ್ನು ಕುರಿತು
ಅಭಿನವಭಾರತಿಯ “ರಸಾಧ್ಯಾಯ”ಕ್ಕಿರುವ ಮಹತ್ತ್ವದಲ್ಲಿ ಹೆಚ್ಚಿನದು ರಸಸೂತ್ರವಿವರಣೆ ಮತ್ತು ಈ ನಿಟ್ಟಿನಲ್ಲಿ ಪೂರ್ವಸೂರಿಗಳಾದ ಲೊಲ್ಲಟ, ಶಂಕುಕ, ಭಟ್ಟನಾಯಕ, ಭಟ್ಟತೌತಾದಿಗಳ ಅಭಿಪ್ರಾಯ ಮತ್ತು ಅಭಿನವಗುಪ್ತನ ಸಮಗ್ರಚಿಂತನೆಗಳನ್ನು ಒಳಗೊಳ್ಳುತ್ತದೆ. ಉಳಿದಂತೆ ಶೃಂಗಾರಾದಿರಸಗಳನ್ನು ಪ್ರತ್ಯೇಕವಾಗಿ ಚರ್ಚಿಸುವಾಗ ವಿವರಗಳೆಷ್ಟೇ ಇದ್ದರೂ ಹೊಸಹೊಳಹುಗಳು ಕಡಮೆ; ಭರತನ ಪ್ರತಿಪಾದನೆಯೇ ಮುನ್ನೆಲೆಯಲ್ಲಿರುತ್ತದೆ. ಇಂತಿದ್ದರೂ ಅಲ್ಲಲ್ಲಿ ಮಿಂಚುವ ಹಲಕೆಲವು ಮಾತುಗಳನ್ನು ಗಮನಿಸಬಹುದು. ರಸಾಭಾಸವನ್ನು ಚರ್ಚಿಸುವಾಗ ಅನೌಚಿತ್ಯವೇ ಹಾಸ್ಯದ...
ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ: ಒಂದು ಜಿಜ್ಞಾಸೆ
ಭರತನು “ರಸಾಧ್ಯಾಯ”ದಲ್ಲೊಂದೆಡೆ:
“ನ ಭಾವಹೀನೋऽಸ್ತಿ ರಸೋ ನ ಭಾವೋ ರಸವರ್ಜಿತಃ | ಪರಸ್ಪರಕೃತಾ ಸಿದ್ಧಿರನಯೋರಭಿನಯೇ ಭವೇತ್ ||” (೬.೩೬)
ಎಂದು ಒಕ್ಕಣಿಸಿದ್ದಾನೆ. ಇದನ್ನು ವಿವರಿಸುತ್ತ ಅಭಿನವಗುಪ್ತನು ಲೋಕದಲ್ಲೆಲ್ಲಿಯೂ ವಿಭಾವಾದಿವ್ಯವಹಾರಗಳಿರುವುದಿಲ್ಲ, ಅಲ್ಲಿರುವುದೆಲ್ಲ ಕಾರ್ಯ-ಕಾರಣಸಂಬಂಧವೇ; ಹೀಗಾಗಿ ಕಲೆಯಲ್ಲಿ ಮಾತ್ರ ಭಾವಗಳ ಮತ್ತು ರಸಗಳ ಪ್ರಸ್ತಾವವಿರುತ್ತದೆಂದು ಹೇಳುತ್ತಾನೆ. ಮತ್ತೆ ಹಲವೆಡೆ ಭಾವ ಮತ್ತು ಭಾವನೆಗಳನ್ನು ವ್ಯಾಪ್ತ್ಯರ್ಥದಲ್ಲಿಯೂ ಆಸ್ವಾದಾರ್ಥದಲ್ಲಿಯೂ ಸ್ವೀಕರಿಸಿ ರಸ-...
ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ
ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶೇಷತಃ “ರಸಾಧ್ಯಾಯ”ದಲ್ಲಿ ಈ ಸಂಗತಿಯನ್ನು ಮತ್ತೆ ಪ್ರಸ್ತಾವಿಸುತ್ತಾನೆ. ಅಲ್ಲದೆ ಈ ಬಗೆಯಲ್ಲಿ ದೃಶ್ಯಕಾವ್ಯದಲ್ಲಿರುವ ರಸಪಾರಮ್ಯಕ್ಕೆ ಕಾರಣವನ್ನೂ ಹೇಳುತ್ತಾನೆ. ಮುಖ್ಯವಾಗಿ ಇಲ್ಲಿ ಚತುರ್ವಿಧಾಭಿನಯಗಳೂ ಸಮುಚಿತವಾದ ವೃತ್ತಿ-ಪ್ರವೃತ್ತಿಗಳೂ ಸೇರಿರುತ್ತವೆ; ಸಹೃದಯರಿಗೆ ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವ ಶ್ರಮವಿಲ್ಲದೆಯೇ ವಿಭಾವಾನುಭಾವಸಾಮಗ್ರಿಯು...
ಭಾವವನ್ನು ಕುರಿತ ಒಳನೋಟಗಳು
ಅಭಿನವಗುಪ್ತನು ಚಿತ್ತವೃತ್ತಿಸ್ವರೂಪಗಳೇ ಭಾವಗಳೆಂದು ಹೇಳುತ್ತ ಜಗತ್ತೆಲ್ಲವೂ ಭಾವಾತ್ಮಕವೆಂಬ ತಾತ್ತ್ವಿಕದೃಷ್ಟಿಯನ್ನೂ ಬೀರುತ್ತಾನೆ. ನಾಟ್ಯಶಾಸ್ತ್ರವು ಚರ್ಚಿಸುವ “ಭವಂತೀತಿ ಭಾವಾಃ ಕಿಂ ವಾ ಭಾವಯಂತೀತಿ ಭಾವಾಃ” (ಸಪ್ತಮಾಧ್ಯಾಯದ ಉಪಕ್ರಮ) ಎಂಬ ಅಭಿಪ್ರಾಯವು ಕಡೆಗೆ “ಭಾವಯಂತೀತಿ ಭಾವಾಃ” (ಅಲ್ಲಿಯೇ) ಎನ್ನುವ ನಿಲುಗಡೆಗೆ ಬರುವ ಕ್ರಮವನ್ನು ಚೆನ್ನಾಗಿ ಗ್ರಹಿಸಿ “ಭಾವಯಂತಿ” ಎಂಬುದು ವಸ್ತುತಃ ನಮ್ಮಲ್ಲಿ ಆಸ್ವಾದನವನ್ನುಂಟುಮಾಡುತ್ತವೆ ಹಾಗೂ ನಮ್ಮ ಹೃದಯವನ್ನು ವ್ಯಾಪಿಸುತ್ತವೆಂಬ ಅರ್ಥದಲ್ಲಿಯೇ ಗ್ರಾಹ್ಯವೆಂದು...
ರಸವಿಘ್ನಗಳು
ಅಭಿನವಗುಪ್ತನು ಅದೆಷ್ಟೋ ಮೌಲಿಕಸಂಗತಿಗಳನ್ನು ಇದಂ ಪ್ರಥಮವೆಂಬಂತೆ ಅಭಿನವಭಾರತಿಯಲ್ಲಿ ಕ್ರೋಡೀಕರಿಸಿದ್ದಾನೆ. ಹಲವು ಕಡೆ ಇಂಥ ಹೊಸಹೊಳಹುಗಳು ಯಾವೆಲ್ಲ ಪೂರ್ವಾಚಾರ್ಯರಿಂದ ಪರಂಪರಾಪ್ರಾಪ್ತವಾಗಿವೆಯೆಂಬುದನ್ನು ಹೆಸರಿಸುವುದುಂಟಾದರೂ ಮತ್ತೆ ಹಲವು ಕಡೆ ಇಂಥ ಆನೃಣ್ಯದ ಸೂಚನೆ ಕಾಣದು. ಇವನ್ನೆಲ್ಲ ನಾವು ಬಲುಮಟ್ಟಿಗೆ ಅವನದೇ ಉಪಜ್ಞೆಯೆಂದು ತಿಳಿಯುವುದರಲ್ಲಿ ತಪ್ಪಿಲ್ಲ. ದಿಟವೇ, ಆತನ ನಾಟ್ಯಶಾಸ್ತ್ರಾಚಾರ್ಯ ಭಟ್ಟತೌತನ ಯೋಗದಾನವೂ ಪ್ರತ್ಯಕ್ಷ-ಪರೋಕ್ಷರೀತಿಗಳಲ್ಲಿ ಅನೇಕತ್ರ ಆವರಿಸಿಕೊಂಡಿದೆ. ಆದರೆ ಯಾವುದಕ್ಕೂ ಅಭಿನವಗುಪ್ತನಲ್ಲಿ ಕೃತಘ್ನತೆಯನ್ನು...
ಅಭಿನವಗುಪ್ತನು ಮತ್ತೊಂದು ಕಡೆಯೂ (ಸಂ.೧, ಪು.೨೮೦) ರಸ ಮತ್ತು ಪುರುಷಾರ್ಥಗಳ ಸಂಬಂಧವನ್ನು ಚರ್ಚಿಸುತ್ತಾನೆ. ಅವನ ಪ್ರಕಾರ ರತಿಭಾವದಿಂದ ಉದ್ಭವಿಸುವ ಶೃಂಗಾರರಸವು ಕಾಮವೆಂಬ ಪುರುಷಾರ್ಥಕ್ಕೆ ಸಂವಾದಿ. ಅಂತೆಯೇ ಕ್ರೋಧಭಾವದಿಂದ ಹೊಮ್ಮುವ ರೌದ್ರರಸವು ಅರ್ಥಕ್ಕೆ ಸಂವಾದಿ. ಇದೇ ರೀತಿ ಧರ್ಮಕ್ಕೆ ಉತ್ಸಾಹಮೂಲದ ವೀರರಸವು ಸಂವಾದಿ. ಮೋಕ್ಷಕ್ಕಂತೂ ತತ್ತ್ವಜ್ಞಾನದಿಂದ ಹೊಮ್ಮುವ ನಿರ್ವೇದವೆಂಬ ಭಾವಮೂಲವಾದ ಶಾಂತರಸವೇ ಸಂವಾದಿ. “ದಶರೂಪಕಾಧ್ಯಾಯ”ದಲ್ಲಿಯೂ ಒಂದು ಕಡೆ ನಾಟಕ ಮತ್ತು ಪ್ರಕರಣಗಳ ಪುರುಷಾರ್ಥಪಾರಮ್ಯವನ್ನು ಚರ್ಚಿಸುತ್ತ ವಿವಿಧರಸಗಳಿಗೆ ಪುರುಷಾರ್ಥಗಳು...
ರಸಪಾರಮ್ಯ
ರಸವನ್ನು ಕುರಿತು ಅಭಿನವಗುಪ್ತನ ಒಳನೋಟಗಳು ಅಪಾರ, ಅಮೋಘ. ಈ ಬಗೆಗೆ ಸುವಿಪುಲವಾದ ಚರ್ಚೆ-ಸಂಶೋಧನೆಗಳೂ ಕಳೆದ ನೂರು ವರ್ಷಗಳಲ್ಲಿ ಜಗತ್ತಿನಾದ್ಯಂತ ಸಾಗಿವೆ. ಹೀಗಾಗಿ ನಾವಿಲ್ಲಿ ಹೆಚ್ಚಿನ ವಿಸ್ತರವನ್ನು ಮಾಡಬೇಕಿಲ್ಲ. ಆದರೆ, ರಸದ ಮಹತ್ತ್ವವನ್ನು ಅದೆಷ್ಟೆಲ್ಲ ಬಗೆಯಲ್ಲಿ ಅಭಿನವಗುಪ್ತನು ವಿಸ್ತರಿಸಿದ್ದಾನೆಂಬುದನ್ನು ಸ್ವಲ್ಪವಾದರೂ ಮನಗಾಣದಿದ್ದಲ್ಲಿ ಪ್ರಸ್ತುತಲೇಖನವೇ ಅಪ್ರಸ್ತುತವಾದೀತೆಂಬ ಅಂಜಿಕೆಯಿಂದ ಸ್ವಲ್ಪ ಚರ್ಚಿಸಬೇಕಾಗಿದೆ. ಕೇವಲ “ರಸಾಧ್ಯಾಯ”ದಲ್ಲಿ ಮಾತ್ರವಲ್ಲದೆ ಅಭಿನವಭಾರತಿಯ ಆದ್ಯಂತ ಅಲ್ಲಲ್ಲಿ ರಸಮಾಹಾತ್ಮ್ಯವನ್ನು ಅಭಿನವಗುಪ್ತನು...
ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ ||
—ಗುರುನಾಥಪರಾಮರ್ಶಃ
ಈ ಮುನ್ನವೇ ನಾವು “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳನ್ನು ಗಮನಿಸುವಾಗ “ಅಭಿನವಭಾರತಿ” ಅಥವಾ “ನಾಟ್ಯವೇದವಿವೃತಿ”ಯ ಕೇಂದ್ರಭೂತಮಹತ್ತ್ವವನ್ನೂ ಪರಾಮರ್ಶಿಸಿದ ಕಾರಣ ವಿಷಯಕ್ಕೆ ನೇರವಾಗಿ ಪ್ರವೇಶಿಸಬಹುದು. ಭರತಮುನಿಯ “ನಾಟ್ಯಶಾಸ್ತ್ರ”ಕ್ಕೆ ಅವೆಷ್ಟೋ ವ್ಯಾಖ್ಯಾನಗಳು ಇದ್ದುವಾದರೂ ಸದ್ಯಕ್ಕೆ ಉಳಿದಿರುವುದು ಅಭಿನವಗುಪ್ತನ ವಿವೃತಿಯೊಂದೇ. ಇದು ಮೂಲಗ್ರಂಥದ...