“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ದಶರೂಪಕ

This article is part 14 of 19 in the series Abhinavabharati

ದಶರೂಪಕ

ನಾಟ್ಯಶಾಸ್ತ್ರದ ಮುಖ್ಯಾಧಿಕರಣಗಳಲ್ಲೊಂದು ದಶರೂಪಕಾಧ್ಯಾಯ. ದೃಶ್ಯಕಾವ್ಯವನ್ನು ವಿವಿಧರೀತಿಯ ನಾಟ್ಯರಸಿಕರ ರುಚಿಭೇದಗಳನ್ನು ಗಮನಿಸಿಕೊಂಡು ಹತ್ತು ಹನ್ನೊಂದು ಬಗೆಯ (ಹನ್ನೊಂದನೆಯದು “ನಾಟಿಕಾ” ಎಂಬ ಪ್ರಕಾರ. ಇದು ಮುಂದೆ “ಉಪರೂಪಕ”ಗಳ ವರ್ಗಕ್ಕೆ ಸೇರಿತು) ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಬಗೆಗೆ ವಿ. ರಾಘವನ್ ವ್ಯಾಪಕವಾದ ಅಧ್ಯಯನವನ್ನೇ ನಡಸಿದ್ದಾರೆ[1]. ಇಲ್ಲಿ ದಶರೂಪಕದ ಪರಿಕಲ್ಪನೆಯು ಭಾರತೀಯರಂಗಸಾಹಿತ್ಯದಲ್ಲಿ ಹೇಗೆ ಬೆಳೆದುಬಂದಿತೆಂಬ ದಿಕ್ಸೂಚಿಯಿದೆ. ನಾವಿಲ್ಲಿ ಕೇವಲ ಅಭಿನವಗುಪ್ತನ ಮತವನ್ನು ಮಾತ್ರ ಕೇಂದ್ರೀಕರಿಸೋಣ.

ಅಭಿನವಗುಪ್ತನು “ದಶರೂಪಕ”ಶಬ್ದವನ್ನು ವ್ಯಾಕರಣಶಾಸ್ತ್ರಾನುಸಾರವಾಗಿ ಬೇರೆ ಬೇರೆ ಸಮಾಸಗಳ ಮೂಲಕ ಗ್ರಹಿಸುವ ಕ್ರಮವನ್ನು ವಿಶ್ಲೇಷಿಸುವುದಲ್ಲದೆ ಶಬ್ದನಿರ್ವಚನವನ್ನೂ ಗಹನವಾಗಿ ಮಾಡಿದ್ದಾನೆ. ಅವನ ಪ್ರಕಾರ ಘಟನೆಗಳ ಪ್ರತ್ಯಕ್ಷೀಕರಣವೇ “ರೂಪಕ”ಶಬ್ದದ ಪರಮಾರ್ಥ. ಅಲ್ಲದೆ, ಹತ್ತೆಂಬ ಸಂಖ್ಯೆಯು ಬರಿಯ ಉಪಲಕ್ಷಣ(ಸಾಂಕೇತಿಕ)ವಲ್ಲದೆ ಪಾರಮಾರ್ಥಿಕವಲ್ಲ. ಪ್ರತಿಯೊಂದು ರೂಪಕಪ್ರಕಾರದಲ್ಲಿಯೂ ಇರುವ ವೈಶಿಷ್ಟ್ಯಗಳು ಅಷ್ಟೋ ಇಷ್ಟೋ ಪ್ರಮಾಣದಲ್ಲಿ ಮಿಕ್ಕ ರೂಪಕಪ್ರಭೇದಗಳಲ್ಲಿಯೂ ತೋರಿಕೊಳ್ಳುತ್ತಿರುತ್ತವೆ. ಆದರೆ ಪ್ರಧಾನವ್ಯಪದೇಶದಿಂದ ಗಮನಿಸಿ ಯಾವ ಪ್ರಕಾರದಲ್ಲಿ ನಿರ್ದಿಷ್ಟವಾದ ವೈಶಿಷ್ಟ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆಯೋ ಅಂಥವಕ್ಕೆ ತದನುಸಾರವಾಗಿ ಹೆಸರನ್ನಿಟ್ಟು ಲಕ್ಷಣಸ್ಥಿರೀಕರಣವನ್ನೂ ಮಾಡಲಾಗುತ್ತದೆ. ಉದಾಹರಣೆಗೆ: “ಭಾಣ”ವೆಂಬ ಪ್ರಕಾರಕ್ಕೆ ವಿಶೇಷವಾದ “ಆಕಾಶಭಾಷಿತ”ವೆಂಬ ರಂಗಸಂಭಾಷಣತಂತ್ರವು ಮಿಕ್ಕೆಲ್ಲ ರೂಪಕಪ್ರಕಾರಗಳಲ್ಲಿಯೂ ಅಲ್ಪ-ಸ್ವಲ್ಪಪ್ರಮಾಣದಲ್ಲಿ ಕಾಣಸಿಗುತ್ತದೆ. ಇದೇ ಜಾಡು “ಲಾಸ್ಯಾಂಗ”[2]ಗಳದೂ ಆಗಿದೆ. ಆದರೂ “ಆಕಾಶಭಾಷಿತ” ಮತ್ತು “ಲಾಸ್ಯಾಂಗ”ಗಳ ಪ್ರಾಧಾನ್ಯ “ಭಾಣ”ಕ್ಕೇ ಸಂದ ವೈಶಿಷ್ಟ್ಯ. ಹೀಗೆಯೇ ವೀಥ್ಯಂಗಗಳು “ವೀಥಿ”ಗೇ ಸಲ್ಲುವ ಮುಖ್ಯಲಕ್ಷಣಗಳಾದರೂ ಉಳಿದೆಲ್ಲ ರೂಪಕಪ್ರಕಾರಗಳ ಪೂರ್ವರಂಗ-ಪ್ರಸ್ತಾವನಾದಿಗಳಲ್ಲಿ ತೋರಿಕೊಳ್ಳುವ ತ್ರಿಗತದಂಥ ಅಂಶಗಳಲ್ಲಿ ಕಾಣುತ್ತವೆಂದು ಅರಿಯಬಹುದು. ಮುಂದೆ ಇಂಥ ಹಲವು ಪರಿಕಲ್ಪನೆಗಳನ್ನು ಕೋಹಲಾದಿಗಳು (ಭರತನ ಪರವರ್ತಿನಾಟ್ಯಶಾಸ್ತ್ರಾಚಾರ್ಯರು) ಉಪರೂಪಕಗಳಲ್ಲಿಯೂ ಸಮೃದ್ಧವಾಗಿ ಅಳವಡಿಸಿಕೊಂಡಿದ್ದಾರೆ. ಮುಖ್ಯವಾಗಿ ಭಾರತೀ, ಸಾತ್ತ್ವತೀ ಮುಂತಾದ ವೃತ್ತಿಗಳ ವಿನಿಯೋಗಭೇದದಿಂದ ದಶರೂಪಕಗಳಲ್ಲಿ ವೈವಿಧ್ಯವುಂಟಾಗುತ್ತದೆ. ಉದಾಹರಣೆಗೆ, “ನಾಟಕ” ಮತ್ತು “ನಾಟಿಕೆ”ಗಳಲ್ಲಿ ಕೈಶಿಕೀವೃತ್ತಿಯ ಪ್ರಾಚುರ್ಯವುಂಟು. “ಭಾಣ” ಮತ್ತು “ವೀಥಿ”ಗಳಲ್ಲಿ ಭಾರತೀವೃತ್ತಿಯ ಪಾರಮ್ಯ ದೃಷ್ಟಚರ. “ಡಿಮ”, “ವ್ಯಾಯೋಗ”, “ಸಮವಕಾರ”ಗಳಲ್ಲಿ ಆರಭಟೀವೃತ್ತಿಯದೇ ಪ್ರಾಗಲ್ಭ್ಯ. “ನಾಟಕ” ಮತ್ತು “ಪ್ರಕರಣ”ಗಳಲ್ಲಿ ಸಾತ್ತ್ವತೀವೃತ್ತಿಗೆ ಹೆಚ್ಚಿನ ಅವಕಾಶ. ಹೀಗೆಂದ ಮಾತ್ರಕ್ಕೆ ಎಲ್ಲ ಪ್ರಕಾರಗಳಲ್ಲಿಯೂ ಎಲ್ಲ ವೃತ್ತಿಗಳಿಗೆ ಅವಕಾಶವಿಲ್ಲವೆಂದಲ್ಲ. ಆದರೆ, ಅಳತೆಯಲ್ಲಿ ವ್ಯತ್ಯಾಸವುಂಟು. ತಾತ್ಪರ್ಯತಃ ಹೇಳುವುದಾದರೆ ದಶರೂಪಕವು ಹಲವು ಹತ್ತು ಬಗೆಯ ಸಾಧ್ಯತೆಗಳ ಮತ್ತು ಮನೋಧರ್ಮಗಳ ಪ್ರತಿಫಲನ. ಈ ಕಾರಣದಿಂದ ಇದನ್ನೊಂದು ಲೆಕ್ಕಾಚಾರದ ಒಣಕಟ್ಟಲೆಯಾಗಿ ಭಾವಿಸದೆ ತತ್ತ್ವವೊಂದರ ದಿಗ್ದರ್ಶನವೆಂದು ತಿಳಿದಲ್ಲಿ ಒಳಿತು. ಇನ್ನು “ಪ್ರಯೋಗ”ವೆಂದರೆ ಪ್ರಕೃಷ್ಟವೂ ಉಚಿತವೂ ಆದ ಯೋಗ; ಅರ್ಥಾತ್, ಇವೇ ದಶರೂಪಕಕುಟುಂಬದ  ವಿವಿಧಪ್ರಕಾರಗಳ  ಹಾಗೂ ಇವುಗಳಿಗೆಲ್ಲ ಮೂಲಧಾತುಗಳಾದ ವಿವಿಧವೃತ್ತಿಗಳ, ಧರ್ಮಿಗಳ, ಅಭಿನಯಗಳ ಸಮುಚಿತವೂ ಸಮೃದ್ಧವೂ ಆದ ಸಮಾಯೋಗ ಅಥವಾ ಸಂಯೋಜನೆಯೆಂದು ತಾತ್ಪರ್ಯ. ಹೀಗಾಗಿ ದಶರೂಪಕಗಳಾಗಲಿ, ಉಪರೂಪಕಗಳಾಗಲಿ ಇರುವ ಹತ್ತಾರು ಮೂಲಭೂತನಾಟ್ಯತತ್ತ್ವಗಳ ಹದವರಿತ ಸೇರ್ಪಡೆ-ಬೇರ್ಪಡೆಗಳೆಂದರೆ ತಪ್ಪಾಗದು. ಇಂಥ ಶಿಲ್ಪನಕ್ರಮವೇ ಪ್ರಯೋಗದ ಮೂಲಾರ್ಥ.

“ರೂಪ್ಯತೇ ಪ್ರತ್ಯಕ್ಷೀಕ್ರಿಯತೇ ಯೋऽರ್ಥಸ್ತದ್ವಾಚಕತ್ವಾತ್ಕಾವ್ಯಾನಿ ರೂಪಾಣಿ ದಶಾನಾಂ ರೂಪಾಣಾಂ ವಿಭಾಗಃ ಕಲ್ಪ್ಯತೇऽಸ್ಮಾದಿತಿ ದಶರೂಪವಿಕಲ್ಪನಮ್ ... ಪ್ರಕೃಷ್ಟ ಉಚಿತೋ ಯೋಗಃ ಪರಸ್ಪರಸಂಬಂಧೋ ಯಥಾ ಪ್ರಕರಣನಾಟಕಲಕ್ಷಣಯೋಗಾನ್ನಾಟಿಕೇತಿವೃತ್ತವಿಭಾಗಸ್ತು ಲಕ್ಷಣ ಏವಾನುಪ್ರವಿಷ್ಟ ಇತಿ | ನಾಸೌ ಪ್ರಯೋಗಃ | ತಥಾ ಚೇತಿ ತೇನೈವ ಪ್ರಯೋಗಪ್ರಕಾರೇಣಾನ್ಯೋऽಪಿ ಪರಸ್ಪರಸಂಬಂಧವೈಚಿತ್ರ್ಯಕೃತೋ ಭೇದ ಉತ್ಪ್ರೇಕ್ಷ್ಯ ಇತ್ಯರ್ಥಃ | ಪ್ರಯೋಗಾಯ ಪ್ರಯೋಗತ ಇತಿ ವ್ಯಾಖ್ಯಾನೇ ಪ್ರಯೋಗತ ಇತಿ ವಿಫಲಮೇವ | ಉಕ್ತವ್ಯಾಖ್ಯಾನೇ ತು ಕೋಹಲಾದಿಲಕ್ಷಿತತೋಟಕಸಟ್ಟಕರಾಸಕಾದಿಸಂಗ್ರಹಃ ಫಲಂ, ನಾಟಿಕಾಯಾ ಉದಾಹರಣತ್ವಾದಿತಿ” (ಸಂ ೨, ಪು. ೨೯೭).

“ಏಕೈಕಸ್ಯ ರೂಪಕಸ್ಯ ದಶ ದಶ ರೂಪಾಣಿ ಸಂಭವಂತಿ | ತಥಾ ಚ ವೀಥ್ಯಂಗಾನಾಂ ಸರ್ವತ್ರ ಸಂಭವಃ | ಪರಗತವಚನಾನುರೂಪಭಾಷಣರೂಪಭಾಣಯೋಗಶ್ಚ ಕಿಂ ಬ್ರವೀಷೀತ್ಯಾಕಾಶಭಾಷಿತೇ | ದಶ ರೂಪಾಣಿ ಯಸ್ಯ ತಾದೃಶರೂಪಂ ಕಾವ್ಯಮಿತ್ಯರ್ಥಃ | ಅತ ಏವ ನ ಸಕಲಃ ಪ್ರಬಂಧೋ ನಾಟಕಮ್ | ಅಪಿ ತು ಪ್ರಬಂಧಸ್ಯ ಕಿಂಚಿದ್ರೂಪಂ, ತಲ್ಲಕ್ಷಣಾಂಶಬಾಹುಲ್ಯಾತ್ತದ್ವ್ಯಪದೇಶಯೋಗಃ | ಅತ ಏವ ನ ದಶಸಂಖ್ಯಾವಿಭಾಗಾರ್ಥೋ ಯೇನ ಸಟ್ಟಕಾದೀನಾಂ ತ್ಯಾಗಃ ಸ್ಯಾತ್ | ತತ್ರಾಪಿ ಹಿ ದಶರೂಪಲಕ್ಷಣಯೋಗೋऽಸ್ತ್ಯೇವ” (ಸಂ ೨, ಪು. ೨೯೮-೨೯೯).

“ಯದ್ಯಪಿ ಸರ್ವೇಷಾಮಭಿನೇಯಾನಭಿನೇಯಾನಾಂ ಚ ಕಾವ್ಯಾನಾಂ ವೃತ್ತಯ ಇಷ್ಟಾ ಮಾತರ ಏವ ತಾಭ್ಯೋऽಪಿ ವಾಚ್ಯರೂಪತ್ವೇನ ಕವಿಹೃದಯೇ ವ್ಯವಸ್ಥಿತಾಭ್ಯಃ ಕಾವ್ಯಮುತ್ಪದ್ಯತೇ | ತಥಾಪಿ ಪ್ರಯೋಗಂ ಪ್ರಯುಜ್ಯಮಾನತ್ವಾತ್ ಪ್ರಯೋಗಯೋಗ್ಯತ್ವಮಭಿಸಂಧಾಯ ವೃತ್ತಯೋ ವಿನಿಸ್ಸೃತಮಭಿನೇಯಕಾವ್ಯಂ ಪ್ರತ್ಯಕ್ಷಭಾವನಾಯೋಗ್ಯವೃತ್ತಿಚತುಷ್ಟಯಾಭಿಧಾಯಕತ್ವಂ ದಶರೂಪಸಾಮಾನ್ಯಲಕ್ಷಣಮಿತ್ಯರ್ಥಃ” (ಸಂ ೨, ಪು. ೨೯೮).

“ತೇನ ವೃತ್ತೀನಾಂ ವಿನಿಯೋಗವಿಕಲ್ಪನಸಮುಚ್ಚಯೈರ್ವೃತ್ತ್ಯಂಗಾನಾಂ ಚ ಬಹವೋ ರೂಪಕಭೇದಾ ಭವಂತಿ | ತೇಷಾಂ ಪರಂ ಕೋಹಲಾದಿಭಿರ್ನಾಮಮಾತ್ರಂ ಪ್ರಣೀತಮ್ ... ತತ್ರ ನಾಟಕಪ್ರಕರಣೇ ಏವ ಸರ್ವವೃತ್ತಿಪೂರ್ಣೇ ಇತಿ ನಿಯಮಃ | ನ ತು ವಿಪರ್ಯಯಃ | ಮುದ್ರಾರಾಕ್ಷಸಸ್ಯ ಕೈಶಿಕೀಹೀನಸ್ಯ ಕೃತ್ಯಾರಾವಣಸ್ಯ ಚ ನಾಟಕಸ್ಯ ದರ್ಶನಾತ್, ವೇಣೀಸಂಹಾರೇ ಚ ಸಾತ್ತ್ವತ್ಯಾರಭಟೀಮಾತ್ರಂ ದೃಶ್ಯತ ಇತಿ ಕೇಚಿತ್” (ಸಂ ೨, ಪು. ೩೦೦).

ಅಭಿನವಗುಪ್ತನ ಕಾಲಕ್ಕಾಗಲೇ ದಶರೂಪಕಗಳಿಗಿಂತ ಬೇರೆಯವಾದ ಅನೇಕರಂಗಪ್ರಕಾರಗಳ ಆವಿರ್ಭಾವವಾಗಿತ್ತು. ಹದಿನೆಂಟರಿಂದ ಇಪ್ಪತ್ತೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇವನ್ನು ಪರವರ್ತಿಲಾಕ್ಷಣಿಕರು ಗುರುತಿಸಿ ಲಕ್ಷಣೀಕರಿಸಿದ್ದಾರೆ. ಇವೆಲ್ಲಕ್ಕೂ ಭರತನ ಸಂಮತಿಯನ್ನು ಕೊಡಿಸುವ ಬಾಧ್ಯತೆ ಅಭಿನವಗುಪ್ತನದಾಗಿತ್ತು. ಈ ಕಾರಣದಿಂದ ಅವನು ಸ್ವಲ್ಪ ಬಲಾದಾಕೃಷ್ಟವ್ಯಾಖ್ಯಾನವನ್ನು ಮಾಡಿದ್ದಾನೆಂದು ಭಾವಿಸಿದರೂ ತತ್ತ್ವದೃಷ್ಟಿಯಿಂದ ಹಿರಿದಾದ ಕೆಲಸವನ್ನೇ ಎಸಗಿದ್ದಾನೆ. ಏಕೆಂದರೆ, ಅವನ ವಿವರಣೆಯ ಮೂಲಕ ಮಧ್ಯಕಾಲೀನರಂಗಪ್ರಕಾರಗಳಾದ ಉಪರೂಪಕಗಳಲ್ಲದೆ ನಮ್ಮ ಕಾಲದ ದೃಶ್ಯಕಾವ್ಯಗಳೂ ಸೇರಿದಂತೆ ಜಗತ್ತಿನ ಯಾವುದೇ ಕಾಲದ, ಯಾವುದೇ ದೇಶದ ರಂಗಪ್ರಕಾರಗಳಿಗೂ ಭರತನ ತಾತ್ತ್ವಿಕಸಂಮತಿ ದೊರೆಯುತ್ತದೆ. ಮಾತ್ರವಲ್ಲ, ನಾಟ್ಯಸಂಗ್ರಹಕಾರಿಕೆಯಲ್ಲಿ ಒಕ್ಕಣೆಗೊಂಡ ಅಂಶಗಳು ವಿಶ್ವರಂಗಕಲೆಯ ಸಾರ್ವಜನೀನತತ್ತ್ವಗಳಾಗಿಯೂ ನೆಲೆ-ಬೆಲೆಗಳನ್ನು ಕಾಣುತ್ತವೆ. ಹೀಗೆ ಭರತನ ಪ್ರಸ್ತುತತೆಯನ್ನು ಕಾಯ್ದುಕೊಟ್ಟ ಶ್ರೇಯಸ್ಸು ಅಭಿನವನದು. ಜೊತೆಗೆ, ಧರ್ಮಿ-ವೃತ್ತಿ-ಅಭಿನಯಾದಿಗಳ ಬೇರೆ ಬೇರೆ ಪ್ರಮಾಣಗಳ ಮಿಶ್ರಣದಿಂದ ಅವವೇ ರಸಗಳಿಗೆ ಬಗೆ ಬಗೆಯಾದ ಛಾಯಾಂತರಗಳು ದಕ್ಕುತ್ತವೆಂಬ ಅನುಭವವೇದ್ಯಸತ್ಯದ ಹಿನ್ನೆಲೆಯಲ್ಲಿ ಪರಿಭಾವಿಸಿದಾಗ ನಾವು ಮತ್ತೂ ಹೊಸತಾದ ದೃಶ್ಯಕಾವ್ಯಪ್ರಕಾರಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೆಂಬ ತಥ್ಯ ಹೊಳೆಯುತ್ತದೆ. ಕಾವ್ಯಪ್ರಕಾರವೈವಿಧ್ಯಸಾಧನೆಗೆ ಇದು ಹಿರಿದಾದ ಕೊಡುಗೆ.

ಇದೇ ದಶರೂಪಕಾಧ್ಯಾಯದಲ್ಲಿ ಒಂದೆಡೆ ಅಭಿನವಗುಪ್ತನು ರೂಪಕಪ್ರಕಾರಗಳಲ್ಲೊಂದಾದ ನಾಟಕಕ್ಕೆ ವಿಶೇಷವಾದ ರಂಗಪ್ರಕಾರವೊಂದೆಂಬ ಅರ್ಥವಲ್ಲದೆ ಯಾವುದೇ ರಂಗಪ್ರಕಾರಸಾಮಾನ್ಯವೆಂಬ ಅರ್ಥವೂ ಉಂಟೆಂದು ಹೇಳುವುದು ಗಮನಾರ್ಹ. ಮುಂದೆ ಈ ಪರಿಭಾಷೆಯೇ ವಾಡಿಕೆಯಾದದ್ದನ್ನು ನಾವು ಕಾಣುತ್ತೇವೆ. (ಸಂ ೨, ಪು. ೩೦೩).

ಇಲ್ಲಿಯೇ ಮತ್ತೊಂದು ಕಡೆ ದಶರೂಪಕಗಳ ವೈವಿಧ್ಯಸಾಧನೆಯನ್ನು ವಿವರಿಸುತ್ತ, ರಾಗವೊಂದರ ಸ್ವರಗಳ ಕ್ರಮವರಿತ ವ್ಯತ್ಯಯೀಕರಣದಿಂದ (ಷಡ್ಜಸ್ಥಾನಾಂತರದಿಂದ ಉಂಟಾಗುವ “ಗ್ರಹಭೇದ”ವನ್ನೂ ಇಲ್ಲಿ ಕಟಾಕ್ಷಿಸಬಹುದು) ಬೇರೆ ಬೇರೆ ರಾಗಗಳ ಅಥವಾ ರಾಗಚ್ಛಾಯೆಗಳ ಸ್ವಾರಸ್ಯವು ಸಮುನ್ಮೀಲಿಸುವುದನ್ನು ದೃಷ್ಟಾಂತವಾಗಿ ನೀಡುವಲ್ಲಿ ಅಭಿನವಗುಪ್ತನಿಗಿದ್ದ ಸಂಗೀತಜ್ಞಾನವು ವಿಸ್ಮಯಾವಹವೆನಿಸದಿರದು.

“ಯಥಾ ಚತುಶ್ಶ್ರುತಿಃ ಪಂಚಮಸ್ತ್ರಿಶ್ರುತಿಶ್ಚ ಭವನ್ ಗ್ರಾಮಾನ್ಯತ್ವಂ ಕರೋತಿ ತಥಾ ಸೈವ ವೃತ್ತಿಃ ಶ್ರುತಿಸ್ಥಾನೀಯೈರಂಗೈಃ ಕ್ವಚಿತ್ಸಂಪೂರ್ಣಾ ಕ್ವಚಿನ್ನ್ಯೂನೇತ್ಯೇವಮಪಿ ರೂಪಕವಿಭಾಗ ಇತ್ಯೇತಜ್ಜಾತಿಭಿಃ ಶ್ರುತಿಭಿರಿತಿ ದ್ವಯೇನ ದರ್ಶಿತಮ್” (ಸಂ ೨, ಪು. ೨೯೯).

ಟಿಪ್ಪಣಿಗಳು

[1] Raghavan, V. Sanskrit Drama: Its Aesthetics and Production. Madras: 1993. pp. 146-162.

ಈ ಲೇಖನದಲ್ಲೊಂದೆಡೆ ಅವರು ದಶರೂಪಕಗಳ ಸ್ವೋಪಜ್ಞತಾತ್ತ್ವಿಕವಿಭಾಗವನ್ನು ನಡಸಿದ ಪರಿ ಗಮನಾರ್ಹ:  ಆ ಪ್ರಕಾರ ದೃಶ್ಯಕಾವ್ಯವು ಆದರ್ಶಪ್ರಧಾನ ಹಾಗೂ ವಾಸ್ತವಪ್ರಧಾನಗಳೆಂಬ ಎರಡು ಪ್ರಕಾರಗಳಾಗಿ ವಿಭಕ್ತವಾಗಿದೆ. ಸುಪ್ರಸಿದ್ಧವೂ (ಸಂಧಿ-ಅವಸ್ಥಾ-ಅರ್ಥಪ್ರಕೃತಿ-ವೃತ್ತಿ-ಧರ್ಮಿ-ರಸನಿರ್ವಾಹಾದಿಗುಣಗಳಿಂದ) ಪರಿಪೂರ್ಣವೂ ಆದ ನಾಟಕ ಮತ್ತು ಪ್ರಕರಣಗಳೆಂಬ ಪ್ರಭೇದಗಳೆರಡೂ ಇಲ್ಲಿ ಕ್ರಮವಾಗಿ ಸಲ್ಲುತ್ತವೆ. ಇವೆರಡು ಪ್ರಕಾರಗಳೂ ಉದಾತ್ತ ಮತ್ತು ಗಂಭೀರ. ಆದರೆ ಇವುಗಳಲ್ಲಿ ತುಸುಮಟ್ಟಿಗೆ ಮಾತ್ರ ಕಾಣಿಸಿಕೊಳ್ಳುವ  ಲಘುವೈನೋದಿಕಭಾವಗಳು ಮುಂದೆ ಭಾಣ, ವೀಥೀ ಮತ್ತು ಪ್ರಹಸನಗಳೆಂಬ ಪ್ರಭೇದಗಳಲ್ಲಿ ತಮ್ಮ ಪೂರ್ಣಪ್ರಮಾಣದ ವಿಕಾಸವನ್ನು ಗಳಿಸುತ್ತವೆ. ಆದರೆ ನಾಟಕ ಮತ್ತು ಪ್ರಕರಣಗಳಲ್ಲಿರುವ ರೌದ್ರ-ಅದ್ಭುತ-ವೀರ-ಕರುಣಗಳಂಥ ಗಂಭೀರಾಂಶಗಳು ಕ್ರಮವಾಗಿ ಡಿಮ, ಸಮವಕಾರ, ವ್ಯಾಯೋಗ, ಈಹಾಮೃಗ, ಅಂಕಗಳಂಥ ಪ್ರಭೇದಗಳಲ್ಲಿ ಬೆಳೆದು ತಮ್ಮ ಸಮಗ್ರಸಾರ್ಥಕ್ಯವನ್ನು ಕಾಣುತ್ತವೆ (ಪು. ೧೫೭).

[2]  ಲಾಸ್ಯಾಂಗಗಳೆಂದರೆ ಕೈಶಿಕೀವೃತ್ತಿಪ್ರಧಾನವಾದ ನರ್ತನದ ಅಂಶಗಳೆಂದು ತಾತ್ಪರ್ಯ. ಇವನ್ನು ಯಥೋಚಿತವಾಗಿ ಯಾವುದೇ ರೂಪಕಪ್ರಕಾರಗಳಲ್ಲಿಯೂ ಅಳವಡಿಸಿಕೊಳ್ಳಬಹುದು. ಮಾತ್ರವಲ್ಲ, ಇವುಗಳೇ ಮುಂದೆ ಬೆಳೆದುಬಂದ ಉಪರೂಪಕಗಳಲ್ಲಿಯೂ ಮುಖ್ಯಪಾತ್ರವನ್ನು ವಹಿಸಿದುವು. ಇದು ಸಹಜವೇ ಆಗಿದೆ. ಏಕೆಂದರೆ ಉಪರೂಪಕಗಳು ನೃತ್ಯ/ನೃತ್ತ/ನರ್ತನಪ್ರಧಾನವಾಗಿವೆ. ಆದರೆ ಲಾಸ್ಯಾಂಗಗಳನ್ನು  “ಭಾಣ”ವೆಂಬ ಏಕಹಾರ್ಯರೂಪಕಪ್ರಕಾರವೊಂದರ ಅಂಗಗಳೆಂದೇ ಹಲವರು ಭ್ರಮಿಸಿದ್ದಾರೆ. ಇವುಗಳ ಸಂಖ್ಯೆ ಹತ್ತೆಂದೂ ಹನ್ನೊಂದೆಂದೂ ಹನ್ನೆರಡೆಂದೂ ಮತ್ತೂ ಹೆಚ್ಚೆಂದೂ ಹಲವು ಬಗೆಯ ಮತಭೇದಗಳಿವೆ (ಇವುಗಳ ಸಂಖ್ಯೆ ಎಷ್ಟೇ ಇರಲಿ; ಕಟ್ಟಕಡೆಗೆ ಇವೆಲ್ಲವೂ “ಚಿತ್ತವೃತ್ತ್ಯಂಶಗತ”, “ವಿಭಾವಾದ್ಯಂಶಗತ” ಮತ್ತು “ಉಪರಂಜಕಭಾವಗತ” ಎಂಬ ಮೂರು ಪ್ರಮುಖವಿಭಾಗಗಳಲ್ಲಿ ಅಡಕವಾಗುತ್ತವೆಂದು ಅಭಿನವಭಾರತಿಯ ನಿಲವು. ಈ ಪ್ರಕಾರ ಲಾಸ್ಯಾಂಗಗಳೆಲ್ಲ ಬಗೆಬಗೆಯ ಸಾತ್ತ್ವಿಕಾಂಶಗಳನ್ನು ಆಂಗಿಕದ ಮೂಲಕ ಹೊರತರುವ ಯತ್ನಗಳೆನ್ನಬಹುದು). ಅಭಿನವಗುಪ್ತನು ಇವು ಒಟ್ಟು ಹತ್ತಷ್ಟೇ ಎಂದು ಹೇಳಿದ್ದಾನೆ. ಆದರೆ ಕಾಲಾಂತರದಲ್ಲಿ ಲಾಸ್ಯಾಂಗಗಳು ಸಂಖ್ಯೆಯನ್ನು ಹೆಚ್ಚಿಸಿಕೊಂಡಂತೆ ತೋರುತ್ತದೆ. ಈ ಪರಿಣಾಮವು  ನೃತ್ಯಕಲೆಯ (ಉಪರೂಪಕಪರಂಪರೆಯ) ಬೆಳೆವಣಿಗೆಗೆ ಹೊಂದಿಕೊಂಡಿರುವುದು ಸಹಜವೇ ಆಗಿದೆ. ಭರತನು ನಿರೂಪಿಸಿರುವ   ಲಾಸ್ಯಾಂಗಗಳೇ ಭಾರತೀಯನೃತ್ಯಪದ್ಧತಿಯ ಮೂಲಮಾತೃಕೆಗಳೆಂದು ಅನೇಕಸಂಶೋಧಕರ ಅಭಿಪ್ರಾಯ. ಅಭಿನವಗುಪ್ತನು ಲಾಸ್ಯಾಂಗಗಳು ಪಾರ್ವತೀದೇವಿಯಿಂದ ಪ್ರವರ್ತಿತವಾದ ಸ್ವತಂತ್ರನೃತ್ಯಪದ್ಧತಿಯೆಂದು ಒಕ್ಕಣಿಸುವುದಲ್ಲದೆ ಇವು ಕೈಶಿಕೀಪ್ರಧಾನವಾದ ರೂಪಕಗಳ ಪೂರ್ವರಂಗವಿಧಿಯಲ್ಲಿ ಮಿಗಿಲಾಗಿ ಬಳಕೆಯಾಗುತ್ತವೆಂದು ಹೇಳುತ್ತಾನೆ. ಲಲಿತವಾದ ನೃತ್ಯಪ್ರಾಧಾನ್ಯವುಳ್ಳ “ಚಿತ್ರ”ವೆಂಬ ಒಂದು ಬಗೆಯ ಪೂರ್ವರಂಗಪ್ರಕಾರದಲ್ಲಿ ಲಾಸ್ಯಾಂಗಗಳ ಅನ್ವಯವಿದ್ದಿತೆಂದು ನಾವು ಸುಲಭವಾಗಿ ಊಹಿಸಬಹುದು. ಜೊತೆಗೆ ತಾಳಾಧ್ಯಾಯವನ್ನು ವಿವರಿಸುವಾಗ ಅಲ್ಲಿ ಮತ್ತೆ ಲಾಸ್ಯಾಂಗಗಳ ಪ್ರಸ್ತಾವವನ್ನು ತಂದು ಪೂರ್ವರಂಗದಲ್ಲಿ ಅವುಗಳ ವಿನಿಯೋಗವು ಹೇಗಿದ್ದಿತೆಂಬುದನ್ನು ತಿಳಿಸುವುದಲ್ಲದೆ ಪೂರ್ವರಂಗಾಧ್ಯಾಯಕ್ಕೆ ಕೊಂಡಿಯನ್ನು ಕಲ್ಪಿಸುತ್ತಾನೆ. ಇಂತಾದರೂ ಅವನು ಮತ್ತೊಂದು ಸಂದರ್ಭದಲ್ಲಿ ಲಾಸ್ಯಾಂಗಗಳು “ನಾಟಕ”ಕ್ಕೆ ಅನಿವಾರ್ಯವೆಂದೂ ನಾಟಕವೆಂಬುದು ಕೇವಲ ದಶರೂಪಕಗಳಲ್ಲಿ ಒಂದಲ್ಲದೆ ಸಕಲವಿಧದ ರೂಪಕಗಳಿಗೆ ಕೂಡ ಉಪಲಕ್ಷಣವೆಂದೂ ಹೇಳುತ್ತಾನೆ. ಇದರಿಂದಲೇ ಆತನು ಭಾಣಗಳಿಗಷ್ಟೇ ಲಾಸ್ಯಾಂಗಗಳು ಸೀಮಿತವೆಂಬ ನಿಲವನ್ನು ತಳೆಯದೆ ಅವುಗಳ ನೃತ್ಯಪ್ರಾಧಾನ್ಯ ಮತ್ತು ತನ್ಮೂಲಕ ಒದಗಿಬಂದ ಸಕಲರೂಪಕ(ಉಪರೂಪಕ)ಪ್ರಕಾರವ್ಯಾಪ್ತಿಯನ್ನು ಸಹ  ಮನಗಂಡಿದ್ದನೆಂದು ತಿಳಿಯುತ್ತದೆ (ಸಂ. ೩, ಪು. ೬೫-೭೪; ಸಂ. ೪. ಪು. ೩೬೭-೩೬೮). ಆದುದರಿಂದ ಅಭಿನವಗುಪ್ತನು ಲಾಸ್ಯಾಂಗಗಳ ಬಗೆಗೆ ಹೇಳುವಾಗ ಅಲ್ಪ-ಸ್ವಲ್ಪಪ್ರಮಾಣದ ಗೊಂದಲವನ್ನುಂಟುಮಾಡಿದ್ದರೂ ಅವುಗಳ ಪರಮಾರ್ಥವನ್ನು ಸರಿಯಾಗಿ ಮನಗಂಡಿದ್ದನೆಂಬುದು ನಿಜಕ್ಕೂ ಮಹತ್ತ್ವದ ಸಂಗತಿ. ಈ ಬಗೆಗೆ ಹೆಚ್ಚಿನ ಮಾಹಿತಿಗಾಗಿ ವಿ. ರಾಘವನ್ ಅವರ ಮತ್ತೊಂದು ಲೇಖನವನ್ನು (The Bhāṇas and The Lāsyāṅgas, Raghavan, V. Sanskrit Drama: Its Aesthetics and Production. Madras: 1993. pp. 163-175) ಆಸಕ್ತರು ಗಮನಿಸಬಹುದು.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the fifth volume, episodes from the lives of traditional savants responsible for upholding the Vedic culture. These memorable characters lived a life of opulence amidst poverty— theirs  was the wealth of the soul, far beyond money and gold. These vidvāns hailed from different corners of the erstwhile Mysore Kingdom and lived in...

Padma Bhushan Dr. Padma Subrahmanyam represents the quintessence of Sage Bharata’s art and Bhārata, the country that gave birth to the peerless seer of the Nāṭya-veda. Padma’s erudition in various streams of Indic knowledge, mastery over many classical arts, deep understanding of the nuances of Indian culture, creative genius, and sublime vision bolstered by the vedāntic and nationalistic...

Bhārata has been a land of plenty in many ways. We have had a timeless tradition of the twofold principle of Brāhma (spirit of wisdom) and Kṣāttra (spirit of valour) nourishing and protecting this sacred land. The Hindu civilisation, rooted in Sanātana-dharma, has constantly been enriched by brāhma and safeguarded by kṣāttra.
The renowned Sanskrit poet and scholar, Śatāvadhānī Dr. R...

ಛಂದೋವಿವೇಕವು ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿ ಎಂದು ವಿಭಕ್ತವಾದ ಎಲ್ಲ ಬಗೆಯ ಛಂದಸ್ಸುಗಳನ್ನೂ ವಿವೇಚಿಸುವ ಪ್ರಬಂಧಗಳ ಸಂಕಲನ. ಲೇಖಕರ ದೀರ್ಘಕಾಲಿಕ ಆಲೋಚನೆಯ ಸಾರವನ್ನು ಒಳಗೊಂಡ ಈ ಹೊತ್ತಗೆ ಪ್ರಧಾನವಾಗಿ ಛಂದಸ್ಸಿನ ಸೌಂದರ್ಯವನ್ನು ಲಕ್ಷಿಸುತ್ತದೆ. ತೌಲನಿಕ ವಿಶ್ಲೇಷಣೆ ಮತ್ತು ಅಂತಃಶಾಸ್ತ್ರೀಯ ಅಧ್ಯಯನಗಳ ತೆಕ್ಕೆಗೆ ಬರುವ ಬರೆಹಗಳೂ ಇಲ್ಲಿವೆ. ಶಾಸ್ತ್ರಕಾರನಿಗಲ್ಲದೆ ಸಿದ್ಧಹಸ್ತನಾದ ಕವಿಗೆ ಮಾತ್ರ ಸ್ಫುರಿಸಬಲ್ಲ ಎಷ್ಟೋ ಹೊಳಹುಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಈ...

Karnataka’s celebrated polymath, D V Gundappa brings together in the fourth volume, some character sketches of the Dewans of Mysore preceded by an account of the political framework of the State before Independence and followed by a review of the political conditions of the State after 1940. These remarkable leaders of Mysore lived in a period that spans from the mid-nineteenth century to the...

Bharatiya Kavya-mimamseya Hinnele is a monograph on Indian Aesthetics by Mahamahopadhyaya N. Ranganatha Sharma. The book discusses the history and significance of concepts pivotal to Indian literary theory. It is equally useful to the learned and the laity.

Sahitya-samhite is a collection of literary essays in Kannada. The book discusses aestheticians such as Ananda-vardhana and Rajashekhara; Sanskrit scholars such as Mena Ramakrishna Bhat, Sridhar Bhaskar Varnekar and K S Arjunwadkar; and Kannada litterateurs such as DVG, S L Bhyrappa and S R Ramaswamy. It has a foreword by Shatavadhani Dr. R Ganesh.

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhānī Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective to every discussion. These essays deal with the philosophy, history, aesthetics, and practice of...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...