ಭಾರತದ ಪ್ರಾಚೀನತೆಯನ್ನು ಸಾರುವ ಪದ್ಯ ಹೀಗಿದೆ:   ಯದಾ ಸರ್ವಂ ಮಾತರ್ಭುವನಮಿದಮಾಸೀಚ್ಛಿಶುನಿಭಂ ವಚೋಹೀನಂ ದೀನಂ ಪಿಹಿತದೃಗಿವಾಜ್ಞಾನತಮಸಾ | ತದಾ ಗಂಗಾತೀರೇ ಸ್ಫುರಿತವಿಮಲಪ್ರಾತಿಭದೃಶ- ಶ್ಚತುರ್ವೇದೋದ್ಗಾನಂ ಜನನಿ ನಿಗಿರಂತಿ ಸ್ಮ ಮುನಯಃ || (೨೨) ತಾಯೇ! ಯಾವಾಗ ಇಡಿಯ ವಿಶ್ವವೇ ಮುಗ್ಧವಾದ ಮಗುವಿನಂತೆ ಮಾತಿಲ್ಲದೆ ಅಜ್ಞಾನದಿಂದ ಕಣ್ಣು ಮುಚ್ಚಿಕೊಂಡಿದ್ದಿತೋ, ಆಗ ದಿವ್ಯದರ್ಶಿಗಳಾದ ಋಷಿ-ಮುನಿಗಳು ಗಂಗೆಯ ತೀರದಲ್ಲಿ ವೇದಗಳನ್ನು ಕಂಡುಕೊಂಡು ಹಾಡುತ್ತಿದ್ದರು! ಇಂದು ಇಡಿಯ ಜಗತ್ತಿನಲ್ಲಿ ಲಭ್ಯವಿರುವ ಪ್ರಾಚೀನತಮ ವಾಙ್ಮಯ ವೇದಗಳೇ ಎಂಬುದು...
“ಪ್ರಜ್ಞಾಭಾರತಿ” ಶ್ರೀಧರ ಭಾಸ್ಕರ ವರ್ಣೇಕರ್ (೩೧.೦೭.೧೯೧೮—೧೦.೪.೨೦೦೦) ಅವರು ಆಧುನಿಕ ಸಂಸ್ಕೃತಸಾಹಿತ್ಯದ ಧ್ರುವತಾರೆ ಎಂದೇ ಕೀರ್ತಿತರು. ಅವರ ಕೃತಿಗಳು ರಾಷ್ಟ್ರಭಕ್ತಿ ಮತ್ತು ಉದಾತ್ತ ಕಲ್ಪಕತೆಗಳ ಬಿರುಕಿಲ್ಲದ ಬೆಸುಗೆಯ ಅಪೂರ್ವ ನಿದರ್ಶನಗಳು. ಅವರು ತಮ್ಮ ಸೃಷ್ಟಿಶೀಲ ರಚನೆಗಳಿಂದ ಸಂಸ್ಕೃತ ಮತ್ತು ಮರಾಠಿ ಭಾಷೆಗಳನ್ನು ಶ್ರೀಮಂತಗೊಳಿಸಿದ್ದಷ್ಟೇ ಅಲ್ಲದೆ ಆ ನುಡಿಗಳ ಪ್ರಕರ್ಷ-ಪ್ರಸಾರಗಳಿಗೆ ಕೂಡ ಅವಿಶ್ರಾಂತವಾಗಿ ದುಡಿದರು. ಕಾವ್ಯರಚನೆ, ಪತ್ರಿಕೋದ್ಯಮ, ವಿಶ್ವಕೋಶನಿರ್ಮಾಣ, ಸಂಸ್ಕೃತಿಪ್ರಚಾರ, ಸಾಂಸ್ಥಿಕ ಕಾರ್ಯನಿರ್ವಾಹ, ಸಮಾಜೋನ್ಮುಖ ಕಲಾಪಗಳೇ...