ಹಣಹಿಡುಕರ ವಿಡಂಬನೆ ‘ಹಣವಿಲ್ಲದೆ ಹೆಣ ಸುಡುವುದೂ ಕಷ್ಟ’ ಎಂದು ನಮಗೆ ಹರಿಶ್ಚಂದ್ರನ ಕಾಲದಿಂದ ತಿಳಿದಿದೆ. ಈಗಂತೂ ನಮ್ಮ ಸಮಾಜ ನಿಂತಿರುವುದೇ ಹಣದ ಮೇಲೆ. ಹೀಗಿರಲು ಜೀವನದ ಎಲ್ಲ ಆಯಾಮಗಳಲ್ಲಿಯೂ ಹಣದ ಪ್ರಭಾವ ಕಂಡುಬರುವುದು ಅಚ್ಚರಿಯಲ್ಲ. ಮುಂದಿನ ಪದ್ಯದಲ್ಲಿ ಇಂಥ ಒಂದು ಸಂಗತಿಯತ್ತ ಕವಿ ನಮ್ಮ ಗಮನವನ್ನು ಸೆಳೆಯುತ್ತಾರೆ: ಅಕ್ಷ್ಣೈಕೇನ ವಿಲೋಕನೇ ದಶ ತಥಾ ದ್ವಾಭ್ಯಾಂ ಕೃತೇ ವಿಂಶತಿಃ ಷಷ್ಟಿರ್ಗಂಧವಿಮರ್ದನೇ ಸ್ರಜ ಉರಸ್ಯಾಧಾಪನೇ ದ್ವೇ ಶತೇ | ಶುಲ್ಕಂ ರೂಪ್ಯಸಹಸ್ರಮರ್ಧಘಟಿಕಾಭೋಗಾರ್ಥಮಿತ್ಯಾದಿಭಿ- ರ್ಧೂರ್ತೈಃ ಸಂಪ್ರತಿ ಕುಟ್ಟನೀವ್ಯವಸಿತೈರ್ದೇವೋऽಪಿ...
ಉಪಕ್ರಮ ದೇವವಾಣಿ ಸಂಸ್ಕೃತದಲ್ಲಿ ಗಂಭೀರವಾದ ಭಾವಗಳನ್ನೂ ವಿಷಯಗಳನ್ನೂ ಕುರಿತ ಕೃತಿಗಳು ಅಪಾರಸಂಖ್ಯೆಯಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಸಂಸ್ಕೃತಸರಸ್ವತಿಯು ಲಘುವಾಗಿ ವಿನೋದ ಮಾಡಿ, ಗೇಲಿಗೆರೆದು, ನಕ್ಕು-ನಗಿಸಬಲ್ಲಳು ಎಂದರೆ ಹುಬ್ಬೇರಿಸುವ ಮಂದಿಯೇ ಹೆಚ್ಚು. ಇದಕ್ಕೆ ಕಾರಣ ಸಂಸ್ಕೃತದಲ್ಲಿರುವ ಕಟಕಿ, ಕುಹಕ, ಹಾಸ್ಯಗಳ ಬಗೆಗಿನ ಅಜ್ಞಾನವೇ. ಆದಿಕಾವ್ಯ ರಾಮಾಯಣದಲ್ಲಿಯೇ ಹಲವಾರು ಹಾಸ್ಯಪ್ರಸಂಗಗಳಿವೆ. ಅನಂತರದ ಸಾಹಿತ್ಯದಲ್ಲಂತೂ ಇಂಥ ಸಂದರ್ಭಗಳು ಸಾವಿರಾರು. ಇದು ಕಾವ್ಯದ ಮಾತಾಯಿತು, ಶಾಸ್ತ್ರದಲ್ಲಿಯೂ ಹಾಸ್ಯದ ಪ್ರಸ್ತಾವವುಂಟೋ? ಎಂದರೆ,...