“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ
ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ: ಒಂದು ಜಿಜ್ಞಾಸೆ
ಭರತನು “ರಸಾಧ್ಯಾಯ”ದಲ್ಲೊಂದೆಡೆ:
“ನ ಭಾವಹೀನೋऽಸ್ತಿ ರಸೋ ನ ಭಾವೋ ರಸವರ್ಜಿತಃ | ಪರಸ್ಪರಕೃತಾ ಸಿದ್ಧಿರನಯೋರಭಿನಯೇ ಭವೇತ್ ||” (೬.೩೬)
ಭರತನು “ರಸಾಧ್ಯಾಯ”ದಲ್ಲೊಂದೆಡೆ:
“ನ ಭಾವಹೀನೋऽಸ್ತಿ ರಸೋ ನ ಭಾವೋ ರಸವರ್ಜಿತಃ | ಪರಸ್ಪರಕೃತಾ ಸಿದ್ಧಿರನಯೋರಭಿನಯೇ ಭವೇತ್ ||” (೬.೩೬)
ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶೇಷತಃ “ರಸಾಧ್ಯಾಯ”ದಲ್ಲಿ ಈ ಸಂಗತಿಯನ್ನು ಮತ್ತೆ ಪ್ರಸ್ತಾವಿಸುತ್ತಾನೆ. ಅಲ್ಲದೆ ಈ ಬಗೆಯಲ್ಲಿ ದೃಶ್ಯಕಾವ್ಯದಲ್ಲಿರುವ ರಸಪಾರಮ್ಯಕ್ಕೆ ಕಾರಣವನ್ನೂ ಹೇಳುತ್ತಾನೆ. ಮುಖ್ಯವಾಗಿ ಇಲ್ಲಿ ಚತುರ್ವಿಧಾಭಿನಯಗಳೂ ಸಮುಚಿತವಾದ ವೃತ್ತಿ-ಪ್ರವೃತ್ತಿಗಳೂ ಸೇರಿರುತ್ತವೆ; ಸಹೃದಯರಿಗೆ ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವ ಶ್ರಮವಿಲ್ಲದೆಯೇ ವಿಭಾವಾನುಭಾವಸಾಮಗ್ರಿಯು ಇಂದ್ರಿಯಗೋಚರವಾಗುತ್ತದೆ. ಇಲ್ಲೆಲ್ಲ ತನ್ನ ಗುರುವಾದ ಭಟ್ಟತೌತನ ಪಾಠದ ಫಲವಂತಿಕೆಯನ್ನು ಚೆನ್ನಾಗಿ ಕಾಣಿಸಿದ್ದಾನೆ:
ಅಭಿನವಗುಪ್ತನು ಚಿತ್ತವೃತ್ತಿಸ್ವರೂಪಗಳೇ ಭಾವಗಳೆಂದು ಹೇಳುತ್ತ ಜಗತ್ತೆಲ್ಲವೂ ಭಾವಾತ್ಮಕವೆಂಬ ತಾತ್ತ್ವಿಕದೃಷ್ಟಿಯನ್ನೂ ಬೀರುತ್ತಾನೆ. ನಾಟ್ಯಶಾಸ್ತ್ರವು ಚರ್ಚಿಸುವ “ಭವಂತೀತಿ ಭಾವಾಃ ಕಿಂ ವಾ ಭಾವಯಂತೀತಿ ಭಾವಾಃ” (ಸಪ್ತಮಾಧ್ಯಾಯದ ಉಪಕ್ರಮ) ಎಂಬ ಅಭಿಪ್ರಾಯವು ಕಡೆಗೆ “ಭಾವಯಂತೀತಿ ಭಾವಾಃ” (ಅಲ್ಲಿಯೇ) ಎನ್ನುವ ನಿಲುಗಡೆಗೆ ಬರುವ ಕ್ರಮವನ್ನು ಚೆನ್ನಾಗಿ ಗ್ರಹಿಸಿ “ಭಾವಯಂತಿ” ಎಂಬುದು ವಸ್ತುತಃ ನಮ್ಮಲ್ಲಿ ಆಸ್ವಾದನವನ್ನುಂಟುಮಾಡುತ್ತವೆ ಹಾಗೂ ನಮ್ಮ ಹೃದಯವನ್ನು ವ್ಯಾಪಿಸುತ್ತವೆಂಬ ಅರ್ಥದಲ್ಲಿಯೇ ಗ್ರಾಹ್ಯವೆಂದು ವಿವರಿಸುತ್ತಾನೆ ಕೂಡ:
ಅಭಿನವಗುಪ್ತನು ಮತ್ತೊಂದು ಕಡೆಯೂ (ಸಂ.೧, ಪು.೨೮೦) ರಸ ಮತ್ತು ಪುರುಷಾರ್ಥಗಳ ಸಂಬಂಧವನ್ನು ಚರ್ಚಿಸುತ್ತಾನೆ. ಅವನ ಪ್ರಕಾರ ರತಿಭಾವದಿಂದ ಉದ್ಭವಿಸುವ ಶೃಂಗಾರರಸವು ಕಾಮವೆಂಬ ಪುರುಷಾರ್ಥಕ್ಕೆ ಸಂವಾದಿ. ಅಂತೆಯೇ ಕ್ರೋಧಭಾವದಿಂದ ಹೊಮ್ಮುವ ರೌದ್ರರಸವು ಅರ್ಥಕ್ಕೆ ಸಂವಾದಿ. ಇದೇ ರೀತಿ ಧರ್ಮಕ್ಕೆ ಉತ್ಸಾಹಮೂಲದ ವೀರರಸವು ಸಂವಾದಿ. ಮೋಕ್ಷಕ್ಕಂತೂ ತತ್ತ್ವಜ್ಞಾನದಿಂದ ಹೊಮ್ಮುವ ನಿರ್ವೇದವೆಂಬ ಭಾವಮೂಲವಾದ ಶಾಂತರಸವೇ ಸಂವಾದಿ. “ದಶರೂಪಕಾಧ್ಯಾಯ”ದಲ್ಲಿಯೂ ಒಂದು ಕಡೆ ನಾಟಕ ಮತ್ತು ಪ್ರಕರಣಗಳ ಪುರುಷಾರ್ಥಪಾರಮ್ಯವನ್ನು ಚರ್ಚಿಸುತ್ತ ವಿವಿಧರಸಗಳಿಗೆ ಪುರುಷಾರ್ಥಗಳು ಹೇಗೆ ಹೊಂದಿಕೊಂಡು ಬರುತ್ತವೆಂಬುದನ್ನು ವಿಸ್ತರಿಸುತ್ತಾನೆ. ಇಲ್ಲಿಯೂ ರೌದ್ರರಸವನ್ನು ಅರ್ಥಕ್ಕೆ ಒಪ್ಪವಿಡುವುದು ಸುವೇದ್ಯ.
“प्रणयिषु वा दाक्षिण्यादथवा सद्वस्तुपुरुषबहुमानात्।
ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ ||
—ಗುರುನಾಥಪರಾಮರ್ಶಃ
रसाभासरूपेण नूनं किलैतान्प्रवच्मो वयं नान्यथा विद्यमानान्। यदा वाऽऽग्रहास्तादृशा लोकबाह्या भवेयुस्तदा ते जने नीरसास्स्युः॥३३॥
अतो ह्यवादीद्ध्वनिकृत्पुरैव रसास्तदाभासमुखास्समस्ताः। रसादिरुपेण कृतौ प्रतिष्ठा व्यङ्ग्याध्वनि स्वादपरा भवन्ति[1]॥३४॥
रावणव्यपदेशेन यल्लोचनकृदीरितम्। तत्कवेस्तु विवक्षाया अधीनमिति मन्मतम् [2]॥३५॥