ಈಗ ಕಾಂಡಾನುಸಾರವಾಗಿ ಪರಿಶೀಲಿಸೋಣ: ಬಾಲಕಾಂಡದಲ್ಲಿ ಮನಮುಟ್ಟುವ ಉಪಮೆಗಳೇ ವಿರಳ. ಅಷ್ಟೇಕೆ, ಉಳಿದ ಅಲಂಕಾರಗಳೂ ಕಡಮೆ. ಆದರೂ ಪ್ರಾತಿನಿಧಿಕವಾಗಿ ಅತ್ಯುತ್ತಮವೆನ್ನಬಹುದಾದ ಒಂದು ಉದಾಹರಣೆಯನ್ನು ಕಾಣಬಹುದು: ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ |  ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ || (೧.೨.೫) ಇಲ್ಲಿ ಆದಿಕವಿಗಳು ತಮ್ಮ ಶಿಷ್ಯ ಭರದ್ವಾಜನಿಗೆ ತಮಸಾನದಿಯ ತಿಳಿನೀರನ್ನು ಪರಿಚಯಿಸುತ್ತಾರೆ. ನಿರ್ಮಲವಾದ ನದೀಜಲವು ಸಜ್ಜನರ ಮನಸ್ಸಿನಂತೆ ಕಾಣುತ್ತದೆಂದು ಹೇಳುವ ಕವಿಯ ಪ್ರತಿಭೆ ನಿಜಕ್ಕೂ ಅಸಾಧಾರಣ. ಮೂರ್ತವನ್ನು ಅಮೂರ್ತಕ್ಕೆ ಹೋಲಿಸುವ ಪರಿ...
 
0
ವಿವಿಧಘನಾಲಂಕಾರಂ ವಿಚಿತ್ರವರ್ಣಾವಲೀಮಯಸ್ಫುರಣಮ್ | ಶಕ್ರಾಯುಧಮಿವ ವಕ್ರಂ ವಲ್ಮೀಕಭುವಂ ಕವಿಂ ನೌಮಿ || (ಆರ್ಯಾಸಪ್ತಶತೀ, ೧.೩೦) ೧ ಭಗವಾನ್ ವಾಲ್ಮೀಕಿಮಹರ್ಷಿಗಳ ಆದಿಕಾವ್ಯ ರಾಮಾಯಣವು ಕಾಳಿದಾಸನ ಮಾತಿನಲ್ಲಿ “ಕವಿಪ್ರಥಮಪದ್ಧತಿ” – ಕವಿಗಳ ಪಾಲಿಗೆ ಮೊದಲ ಹೆದ್ದಾರಿ. ಇದು ಬಹ್ವರ್ಥಗ್ರಾಸಿಯಾದ ಯಥಾರ್ಥವರ್ಣನೆ. ರಾಮಾಯಣವು ರಸಿಕರಂಜನೆಯಾಗಿ ಮಾತ್ರವಲ್ಲದೆ ಕವಿ-ಕಲಾವಿದರ ಪಾಲಿಗೂ ನಿರಂಜನಪ್ರೇರಕಸಾಮಗ್ರಿಯಾಗಿ ರಾಜಿಸಿದೆ. ಹೀಗೆ ಭಾವಯಿತ್ರೀ ಮತ್ತು ಕಾರಯಿತ್ರೀ ಪ್ರತಿಭೆಗಳೆರಡಕ್ಕೂ ವಾಲ್ಮೀಕಿಮುನಿಗಳ ಒತ್ತಾಸೆ ಮಿಗಿಲಾಗಿದೆ. ಪ್ರಸ್ತುತಲೇಖನವು ಕವಿಗಳ ಪಾಲಿಗೆ...
 
0