೯ ಅರ್ಥಾಲಂಕಾರಗಳು ವಾಕ್ಯವಿಶ್ರಾಂತವಾದರೆ ಶಬ್ದಾಲಂಕಾರಗಳು ಶಬ್ದವಿಶ್ರಾಂತ. ಅಂದರೆ, ಇವುಗಳಿಗೆ ಶಬ್ದರೂಪದಲ್ಲಿಯೇ ತಾತ್ಪರ್ಯ. ಅರ್ಥಾಲಂಕಾರಗಳು ಬುದ್ಧಿಗಮ್ಯವಾಗಿ ಭಾವವನ್ನು ಮೀಟಿದರೆ ಶಬ್ದಾಲಂಕಾರಗಳು ಶ್ರವಣಗಮ್ಯವಾಗಿ ಭಾವವನ್ನು ತಟ್ಟುತ್ತವೆ. ಈ ಕಾರಣದಿಂದಲೇ ಇವುಗಳಿಗೆ ಪರಿವೃತ್ತಿಸಹತ್ವವಿಲ್ಲ. ಅಂದರೆ ಕವಿತೆಯಲ್ಲಿ ಬಳಕೆಯಾದ ಶಬ್ದಗಳಿಗೆ ಪರ್ಯಾಯಪದಗಳನ್ನಿಟ್ಟರೆ ಶಬ್ದಾಲಂಕಾರವೇ ಮರೆಯಾಗುವ ಸಾಧ್ಯತೆಯುಂಟು. ಇವುಗಳ ನಿರ್ಮಾಣದಲ್ಲಿ ಕಲ್ಪನೆಗಿಂತ ವ್ಯುತ್ಪತ್ತಿಯ ಪ್ರಮಾಣ ಹೆಚ್ಚು. ವಿಶೇಷತಃ ಇವುಗಳು ಪದಮಾತ್ರವಿಶ್ರಾಂತವಾದ ಕಾರಣ ನಿಘಂಟುಮೂಲದ...
ಅನುಮಾನಾಲಂಕಾರವು “ಅನುಮಾನ”ವೆಂಬ ತಾರ್ಕಿಕಪ್ರಮಾಣವನ್ನೇ ಆಧರಿಸಿದೆ. ಇದನ್ನು ಕೆಲವರು ಅಲಂಕಾರವಾಗಿಯೇ ಅಂಗೀಕರಿಸರು. ಬಲುಮಟ್ಟಿಗೆ ಕಾವ್ಯಲಿಂಗದಲ್ಲಿಯೇ ಇದು ಅಡಕವಾದೀತು. ಆದರೆ ಇಂಥ ಅಲಂಕಾರದಲ್ಲಿಯೂ ಆದಿಕವಿಗಳ ಕೌಶಲ ಪ್ರಸ್ಫುಟ. ಮಳೆಗಾಲದಲ್ಲಿ ಮೋಡ ಕವಿದು ಸೂರ್ಯನ ಸುಳಿವೇ ಇಲ್ಲದಿದ್ದಾಗ ಸಂಜೆಯಾಗುವುದನ್ನು ತಾವರೆಗಳ ಮುದುಡುವಿಕೆಯಿಂದ, ಹಕ್ಕಿಗಳ ಗೂಡುಸೇರುವಿಕೆಯಿಂದ, ಜಾಜಿಹೂಗಳ ಅರಳುಗಳಿಂದ ಅನುಮಾನಿಸಬೇಕಿದೆ: ನಿಲೀಯಮಾನೈರ್ವಿಹಗೈರ್ನಿಮೀಲದ್ಭಿಶ್ಚ ಪಂಕಜೈಃ | ವಿಕಸಂತ್ಯಾ ಚ ಮಾಲತ್ಯಾ ಗತೋऽಸ್ತಂ ಜ್ಞಾಯತೇ ರವಿಃ || (೪.೨೮.೫೨) * * *...
೭ ಸಮಾಸೋಕ್ತಿಯು ಅಲಂಕಾರಪ್ರಪಂಚದ ಒಂದು ಸಾರ್ಥಕಸದಸ್ಯ. ಪ್ರಕೃತಾಪ್ರಕೃತವಸ್ತುಗಳಲ್ಲಿ ವಿಶೇಷಣೈಕ್ಯವನ್ನು ತರುವುದೇ ಇಲ್ಲಿಯ ಪ್ರಮುಖಸ್ವಾರಸ್ಯ. ಹೆಚ್ಚಿನ ಬಾರಿ ಇಂಥ ವಿಶೇಷಣೈಕ್ಯವು ಶ್ಲೇಷದಿಂದ ಸಿದ್ಧವಾಗುತ್ತದೆ. ಈ ಅಲಂಕಾರವು ಜಡವೂ ಅಚೇತನವೂ ಆದ ವಸ್ತು-ವಿಷಯಗಳ ವರ್ಣನಾವಸರದಲ್ಲಿ ಅವುಗಳ ಮೇಲೆ ಚೇತನತ್ವವನ್ನು ಆರೋಪಿಸುವ ಮೂಲಕ ಮತ್ತೂ ಆಕರ್ಷಕವಾಗುತ್ತದೆ. ಆದುದರಿಂದಲೇ ನಿಸರ್ಗವರ್ಣನೆಯಲ್ಲಿ ಈ ಅಲಂಕಾರದ ವಿನಿಯೋಗ ಮಿಗಿಲಾಗಿ ಸೊಗಯಿಸುತ್ತದೆ. ಈ ಬಗೆಯ ಸ್ವಾರಸ್ಯಕ್ಕೂ ಆದಿಕವಿಗಳೇ ಮಾರ್ಗದರ್ಶಿ. ಕಿಷ್ಕಿಂಧಾಕಾಂಡದ ವರ್ಷಾಕಾಲವರ್ಣನೆಯ ಸಂದರ್ಭದಲ್ಲಿ...
೫ ದೃಷ್ಟಾಂತವು ಔಪಮ್ಯಪ್ರಕಾರದ ಅಲಂಕಾರಗಳಲ್ಲೊಂದು. ಹೋಲಿಸುವ ಮತ್ತು ಹೋಲಿಸಲ್ಪಡುವ ವಸ್ತುಗಳ ನಡುವೆ ಬಿಂಬ-ಪ್ರತಿಬಿಂಬಭಾವವು ರೂಪುಗೊಂಡಲ್ಲಿ ಈ ಅಲಂಕಾರವು ಸಿದ್ಧ. ಇದು ಬಲುಮಟ್ಟಿಗೆ ಉಪಮೆಯಂತೆಯೇ ಹೌದು. ಆದರೆ ಪ್ರಸ್ಫುಟವಾದ ಎರಡು ಸದೃಶಚಿತ್ರಗಳನ್ನು ನಮ್ಮೆದುರು ನೀಡುವ ಕಾರಣ ಇದಕ್ಕೊಂದು ಬಗೆಯ ವ್ಯಕ್ತಿತ್ವವುಂಟು. ಆದರೆ ಇಂಥ ಪ್ರಸ್ಫುಟೀಕರಣಪ್ರಯತ್ನವು ಕೆಲಮಟ್ಟಿಗೆ ವಾಚ್ಯತೆಯನ್ನುಂಟುಮಾಡುವ ಕಾರಣ ಉಪಮೆಯಲ್ಲಿರುವ ಗಮ್ಯಾರ್ಥಗಳಿಗಿಲ್ಲಿ ಅವಕಾಶವಿಲ್ಲ. ಆದುದರಿಂದಲೇ ಈ ಅಲಂಕಾರವನ್ನು ನೀತಿ-ತತ್ತ್ವ-ಉಪದೇಶಾದಿಗಳಿಗೆ ಹೆಚ್ಚಾಗಿ ವಿನಿಯೋಗಿಸುವುದುಂಟು....
ಅತಿಶಯೋಕ್ತಿಯನ್ನು ಕಾವ್ಯಲೋಕದ ಜೀವಾಳವೆಂದೇ ಆನಂದವರ್ಧನನು ಆದರಿಸಿದ್ದಾನೆ. ಅಧ್ಯವಸಾಯ ಅಥವಾ ಮಿಗಿಲಾದ ಕಲ್ಪನೆಯೇ ಇದರ ಹೃದಯ. ಕವಿಪ್ರತಿಭೆಯು ಸಾದೃಶ್ಯ-ಸಂಭಾವ್ಯಗಳ ಗಡಿಗಳನ್ನೂ ಮೀರಿ ನಿರಂಕುಶವಾಗಿ ಅಪರಪ್ರಜಾಪತಿಯಂತೆ ಸೌಂದರ್ಯಮಹಾಕಾಶದಲ್ಲಿ ಅಗ್ನಿಹಂಸಗತಿಯಿಂದ ಹಾರುವುದು ಇಲ್ಲಿಯ ಸ್ವಾರಸ್ಯ. ಯಾವುದೇ ಅಲಂಕಾರದಲ್ಲಿ ಇಂಥ ಸೀಮೋಲ್ಲಂಘನಸತ್ತ್ವವಿಲ್ಲದಿದ್ದಲ್ಲಿ ಅದು ಹೊಳಪಿಲ್ಲದ ಒಡವೆಯಾಗಿ, ಅದನ್ನು ತೊಡಿಸಿಕೊಂಡ ಕಾವ್ಯವನಿತೆಗೆ ಬರಿಯ ಭಾರವಾಗಿ ತೋರದಿರದು. ಈ ಶಕ್ತಿಯನ್ನು “ಚಮತ್ಕಾರ”ವೆಂದೂ ಹೇಳಬಹುದು. ವಾಲ್ಮೀಕಿರಾಮಾಯಣದಲ್ಲಿ ಮೇಲೆ ಕಾಣಿಸಿದ...
ವಾಲ್ಮೀಕಿಮುನಿಗಳು ಉತ್ಪ್ರೇಕ್ಷೆಯನ್ನು ಕಥಾನಿರೂಪಣೆಯ ಕಾಲದಲ್ಲಿಯೂ ಬಳಸಿಕೊಳ್ಳುತ್ತಾರೆ. ಅಷ್ಟೇಕೆ, ಸಾಮಾನ್ಯವಾದ ಸಂವಾದಗಳಲ್ಲಿಯೂ ಇದು ತಲೆದೋರುತ್ತದೆ. ತನ್ನ ಭುವನಕೋಶಪ್ರಜ್ಞೆಗೆ ಬೆರಗಾದ ರಾಮನನ್ನು ಕುರಿತು ಸುಗ್ರೀವನು ಹೇಳುತ್ತಾನೆ—ವಾಲಿಯು ಬೆನ್ನಟ್ಟಿ ಬರುವಾಗ ತಾನು ಜಗವನ್ನೆಲ್ಲ ಸುತ್ತಿದ ಕಾರಣ ಇಡಿಯ ಭೂಮಿಯೇ ಕೈಗನ್ನಡಿಯಂತೆ ಕಾಣುತ್ತಿತ್ತು, ಇಡಿಯ ಭೂಗೋಳವೇ ಅಲಾತಚಕ್ರದಂತೆ (ಕೊಳ್ಳಿಯೊಂದನ್ನು ಗಿರಗಿರನೆ ತಿರುಗಿಸಿದಾಗ ಮೂಡುವ ಬೆಳಕಿನ ವರ್ತುಲದಂತೆ) ತೋರುತ್ತಿತ್ತು, ಸಮುದ್ರವು ಹಸುವಿನ ಗೊರಸಿನ ಗುರುತಿನಲ್ಲಿ ಹಿಡಿಸುವ ನೀರಿನಷ್ಟಾಗಿತ್ತು:...
೩ ಉತ್ಪ್ರೇಕ್ಷೆಯು ಪ್ರಾಥಮಿಕಾಲಂಕಾರಗಳ ಪೈಕಿ ತುಂಬ ಪರಿಣಾಮಕಾರಿ. ಇದು ಉಪಮೆಯಷ್ಟು ಸರಳವೂ ಅಲ್ಲ, ಅತಿಶಯೋಕ್ತಿಯಷ್ಟು ಅಬ್ಬರದ್ದೂ ಅಲ್ಲ. ಸಂಭವನೀಯತೆಯೇ ಈ ಅಲಂಕಾರದ ಜೀವಾಳ. ಅತಿಶಯೋಕ್ತಿಯಾದರೋ ಅಧ್ಯವಸಾಯಮೂಲದ್ದಾದ ಕಾರಣ ಸಂಭವನೀಯತೆಯನ್ನೂ ಮೀರಿ ಕಲ್ಪಿತವನ್ನು ಕೂಡ ವಾಸ್ತವವೆಂಬಂತೆ ಪ್ರತಿಪಾದಿಸುತ್ತದೆ. ಆದರೆ ಉತ್ಪ್ರೇಕ್ಷೆಯು ಕೆಲಮಟ್ಟಿಗೆ ಸಾದೃಶ್ಯವನ್ನೇ ನಚ್ಚುವ ಕಾರಣ ಇದೊಂದು ಬಗೆಯಲ್ಲಿ ಉಪಮೆ ಮತ್ತು ಅತಿಶಯಗಳ ನಡುವಣ ಸುವರ್ಣಸೇತುವೆಯಾಗಿ ವ್ಯವಹರಿಸುತ್ತದೆ. ವಾಲ್ಮೀಕಿಮುನಿಗಳಲ್ಲಿ ಉತ್ಪ್ರೇಕ್ಷೆಗಳಿಗೆ ಕೊರತೆಯಿಲ್ಲ. ಹೇಳಿ ಕೇಳಿ ಎತ್ತರದ ನೋಟವೇ “...
ಸುಂದರಕಾಂಡದ ಸಾರವತ್ತಾದ ಭಾಗಗಳಲ್ಲೊಂದು ಸೀತೆಯನ್ನು ಹನೂಮಂತನು ಕಂಡದ್ದು. ವಿಶೇಷತಃ ಆಕೆಯನ್ನು ಹತ್ತಾರು ಹೋಲಿಕೆಗಳ ಮೂಲಕ ಆದಿಕವಿಗಳು ವರ್ಣಿಸುವಲ್ಲಿ ಹೆಚ್ಚು-ಕಡಮೆ ಒಂದು ಸರ್ಗವನ್ನೇ ಮೀಸಲಿಟ್ಟಿದ್ದಾರೆ. ಅಲ್ಲಿಯ ಕೆಲವು ಸೂಕ್ತಿಗಳು ಸ್ಮರಣೀಯ: ತಾಂ ಸ್ಮೃತೀಮಿವ ಸಂದಿಗ್ಧಾಮೃದ್ಧಿಂ ನಿಪತಿತಾಮಿವ | ಸೋಪಸರ್ಗಾಂ ಯಥಾ ಸಿದ್ಧಿಂ ಬುದ್ಧಿಂ ಸಕಲುಷಾಮಿವ | ಅಭೂತೇನಾಪವಾದೇನ ಕೀರ್ತಿಂ ನಿಪತಿತಾಮಿವ || (೫.೧೫.೩೩,೩೪) ಆಮ್ನಾಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ | ಸನ್ನಾಮಿವ ಮಹಾಕೀರ್ತಿಂ ಶ್ರದ್ಧಾಮಿವ ವಿಮಾನಿತಾಮ್ | ಪ್ರಜ್ಞಾಮಿವ ಪರಿಕ್ಷೀಣಾಮಾಶಾಂ...
ಮರಣಾಸನ್ನನಾದ ವಾಲಿಯ ಪರಿಸ್ಥಿತಿಯನ್ನು ಮಹರ್ಷಿಗಳು ಮನಮುಟ್ಟುವಂತೆ ವರ್ಣಿಸುತ್ತ ಆತನು ಹೊಗರನ್ನು ಕಳೆದುಕೊಂಡ ಕಮಲಬಾಂಧವನಂತೆ, ನೀರೆಲ್ಲ ಸೋರಿಹೋದ ಬೆಳ್ಮೋಡದಂತೆ, ಆರಿಹೋಗುತ್ತಿರುವ ಅಗ್ನಿಯಂತೆ ತೋರುತ್ತಿದ್ದನೆಂದು ಚಿತ್ರಿಸುತ್ತಾರೆ. ಇಲ್ಲಿಯ ಒಂದೊಂದು ಉಪಮೆಗಳೂ ಸಹಜ, ಸಾರ್ಥಕ: ತಂ ನಿಷ್ಪ್ರಭಮಿವಾದಿತ್ಯಂ ಮುಕ್ತತೋಯಮಿವಾಂಬುದಮ್ |  ಉಕ್ತವಾಕ್ಯಂ ಹರಿಶ್ರೇಷ್ಠಮುಪಶಾಂತಮಿವಾನಲಮ್ || (೪.೧೮.೨) ಮುಮೂರ್ಷುವಾದ ವಾಲಿಯು ಮೊದಲಿಗೆ ಕಳೆಗುಂದಿದ್ದು ಕಾಂತಿಹೀನಸೂರ್ಯನ ಸದೃಶವಾದರೆ, ಆತನು ರಕ್ತವನ್ನೂ ಶಕ್ತಿಯನ್ನೂ ಬಸಿದುಕೊಂಡದ್ದು ನೀರಿಲ್ಲದ ಮುಗಿಲಿಗೆ...
ಅರಣ್ಯಕಾಂಡದ ಉಪಮಾಪ್ರಪಂಚ ಸಾಕಷ್ಟು ವಿಸ್ತಾರವಾದುದು. ವಿಶೇಷತಃ ಅಲ್ಲಿಯ ಹೇಮಂತವರ್ಣನೆಯಲ್ಲಿ ಉಪಮೆಯ ವಿಶ್ವರೂಪವನ್ನು ಕಾಣಬಹುದು. ಸೂರ್ಯನು ದಕ್ಷಿಣದಿಕ್ಕಿಗೆ ತಿರುಗಿದ ಕಾರಣ ಉತ್ತರದಿಕ್ಕಿನಲ್ಲಿ ಕಾಂತಿ ಕುಂದಿ ಅದು ತಿಲಕವಿಲ್ಲದ ಹೆಣ್ಣಿನಂತೆ ಹತಪ್ರಭೆಯಾಗಿದೆ. ಇದನ್ನು ಆದಿಕವಿಗಳ ಮಾತು ಅಡಕವಾಗಿ ತಿಳಿಸಿದೆ:  ವಿಹೀನತಿಲಕೇವ ಸ್ತ್ರೀ ನೋತ್ತರಾ ದಿಕ್ಪ್ರಕಾಶತೇ | (೩.೧೬.೮) ಚಳಿಗಾಲದಲ್ಲಿ ಹಿಮದ ಆವರಣದೊಳಗೆ ಹುದುಗಿದ ವಿಧುಮಂಡಲವು ಕುರುಡುಗನ್ನಡಿಯಂತೆ ಮಂಕಾಗಿದೆಯೆಂದೂ ಚಂದ್ರನ ಕಾಂತಿಯೆಲ್ಲವೂ ಸೂರ್ಯನಿಗೇ ಸೇರಿಹೋಗಿದೆಯೆಂದೂ ವರ್ಣಿಸುವಲ್ಲಿ...