ಗೀತರಚನೆಯ ಪಾಟವ ನವೋದಯದ ಕವಿಗಳ ಪೈಕಿ ಡಿ.ವಿ.ಜಿ.ಯವರಂತೆ ಲಕ್ಷಣಶುದ್ಧವಾದ ಗೀತಗಳನ್ನು ರಚಿಸಿದವರು ಹಲವರಿಲ್ಲ. ಅವರ ಗೀತಗಳಲ್ಲಿ ರಾಗ-ತಾಳಗಳ ಸುಂದರಾನ್ವಯಕ್ಕೆ ವಿಪುಲಾವಕಾಶವಿದೆ. ಜೊತೆಗೆ ಆದಿಪ್ರಾಸ, ಅನುಪ್ರಾಸ ಮತ್ತು ಅಂತ್ಯಪ್ರಾಸಗಳ ಅಂದವೂ ಸಮೃದ್ಧವಾಗಿದೆ. ಇಷ್ಟೇ ಅಲ್ಲದೆ ಅವರು ವಡಿ, ವರಣ, ಅತೀತ, ಅನಾಗತ, ಪದಗರ್ಭ, ಗಣಪರಿವೃತ್ತಿ ಮುಂತಾದ ಗೇಯಶಿಲ್ಪದ ತಾಂತ್ರಿಕಸೂಕ್ಷ್ಮತೆಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಮುಖ್ಯವಾಗಿ ಪಲ್ಲವಿ-ಅನುಪಲ್ಲವಿ-ಚರಣಗಳ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಗತಿಭೇದಗಳ ಹಾಗೂ ಕಾಲಭೇದಗಳ ಲಯವಿಲಾಸಗಳನ್ನು ಸಾಧಿಸಿರುವುದು ಡಿ...
ಪ್ರೀತಿ-ರಸಿಕತೆ-ಕಾವ್ಯ: ಪ್ರಣಯವು ಪ್ರಾರಂಭದಲ್ಲಿ ದ್ವೈತ, ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ; ಪ್ರಣಯಶಿಖರದಲ್ಲಿ ದ್ವೈತತಾವಿಸ್ಮೃತಿ, ಅಭೇದವೃತ್ತಿ, ಅದ್ವೈತ. (ಜೀವನಧರ್ಮಯೋಗ) ಪ್ರೇಮ-ವಾತ್ಸಲ್ಯರಸಗಳು ಧರ್ಮಪ್ರಣಾಲಿಯಲ್ಲಿ ಹರಿದಾಗ ವ್ಯಾಮೋಹಪಂಕಗಳಾಗದೆ ಪಾವನತೀರ್ಥಗಳಾದಾವು. (ಗೀತಶಾಕುಂತಲ) ಶ್ರೀರಾಮನಿಗೆ ಶೃಂಗಾರಪರೀಕ್ಷೆಯು ವಿಯೋಗರೂಪದಲ್ಲಿ ಬಂದರೆ ಶ್ರೀಕೃಷ್ಣನಿಗದು ಅತಿಯೋಗರೂಪದಲ್ಲಿ ಬಂದಿತು. (ಶ್ರೀಕೃಷ್ಣಪರೀಕ್ಷಣಂ) ರಸಿಕತೆ ಎಂದರೆ ಜೀವನದ ಎಲ್ಲ ರಂಗಗಳಲ್ಲಿಯೂ ಸೊಗಸನ್ನು ಹುಡುಕುವ ಪ್ರವೃತ್ತಿ, ಮತ್ತು ಇರುವ ಸೊಗಸನ್ನು ಕಂಡು ಸವಿಯುವ ಶಕ್ತಿ. (...
ಕೋಲಾರಮಂಡಲದಲ್ಲಿ ಹೆಚ್ಚು ಪ್ರಚಲಿತವಿರುವ ವಾಗ್ರೂಢಿಗಳ ಬಳಕೆ: ವೆಗಟು / ಎಗಟು (ಹೆಚ್ಚು ಸೇವನೆಯಿಂದ ರುಚಿಗೆಡುವುದು), ಅಂದಿಸು (ಎಟಕುವಂತಾಗಿಸು), ನಸನಸೆ (ರಂಪ; ಸಣ್ಣ ವಿಷಯಗಳನ್ನು ದೊಡ್ಡದು ಮಾಡುವುದು), ಸೊಟ್ಟಾಪಟ್ಟೆ (ಓರೆಯಾದ, ಡೊಂಕಾದ), ಪೋದಿ (ಆರೈಕೆ), ಮೊಡಕು (ಮೂಲೆ), ಐಲುಪೈಲು (ಹುಚ್ಚು), ಯರ್ರಿಬಿರ್ರಿ (ಶಿಸ್ತು ಇಲ್ಲದಿರುವುದು), ಪೀಕಲಾಟ (ತೊಂದರೆ; ಜಗಳ), ತಕರಾರು (ಆಕ್ಷೇಪಣೆ; ವಿರೋಧ; ಜಗಳ), ಏಮಾರು / ಯಾಮಾರು (ಮೊಸಹೋಗು; ಉಪೇಕ್ಷಿಸು), ಚಿತಾವಣೆಗಾರಿಕೆ (ಪ್ರಚೋದನೆ), ಪೊಗದಸ್ತು (ಸಮೃದ್ಧ), ಅಳ್ಳಕ (ಸಡಿಲ; ದ್ರವೀಯ). ನಾಮಪದಗಳಂತೆ “...
ಡಿ.ವಿ.ಜಿ. ಭಾಷೆಯ ಸಿಂಹಾವಲೋಕನ ಈ ಲೇಖನದ ಮುಂದಿನ ಭಾಗದಲ್ಲಿ ಗುಂಡಪ್ಪನವರ ಗದ್ಯದ ಬರೆಹಗಳಲ್ಲಿ ಅವರ ಹಸ್ತಾಕ್ಷರದಂತೆ ವಿಶಿಷ್ಟವಾಗಿ ತೋರುವ ಕೆಲವು ವಾಕ್ಯವಿಧಾನಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ಸಂಗ್ರಹಿಸಿದ್ದೇನೆ. ಉದಾಹರಣೆಗಳು ಹೆಚ್ಚಿನ ವಿವರಣೆಯನ್ನು ಅಪೇಕ್ಷಿಸದ ಕಾರಣ ಅವುಗಳ ಪರಿಯನ್ನು ನಿರೂಪಿಸುವ ಒಂದೆರಡು ಮಾತುಗಳನ್ನಷ್ಟೇ ಬರೆಯಲಾಗಿದೆ. ಗುಂಡಪ್ಪನವರ ಸಾಹಿತ್ಯ ಬಹಳ ವಿಸ್ತೃತವೂ ಗಹನವೂ ಆದದ್ದು. ಅದರ ಎಲ್ಲ ಬಗೆಯ ಸ್ವಾರಸ್ಯವನ್ನೂ ಹಿಡಿದಿಡಲು ಯತ್ನಿಸುವುದು ಸಾಹಸವೇ ಸರಿ. ಹೀಗಾಗಿ ಪ್ರಸ್ತುತಲೇಖನದ ಮಿತಿಯ ಒಳಗೆ ದಿಕ್ಸೂಚಕವಾಗಿ ಕೆಲವೇ...
ಪ್ರವೇಶಿಕೆ ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ. ವಿ. ಗುಂಡಪ್ಪನವರು ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್ವ-ವಿದ್ವತ್ತೆಗಳ ಬಗೆಗೆ, ಪ್ರತಿಭೆ-ಪ್ರಾಜ್ಞತೆಗಳ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿದೆ; ಇದು ಕನ್ನಡಿಗರ ಭಾಗ್ಯ. ಆದರೆ ಡಿ.ವಿ.ಜಿ.ಯವರದು ಮಹಾಕಾವ್ಯೋಪಮವಾದ ಜೀವನ. ಧ್ವನನಶೀಲತೆಯೇ ಶ್ರೇಷ್ಠಸಾಹಿತ್ಯದ ಹೆಗ್ಗುರುತಲ್ಲವೇ? ಪ್ರತಿಕ್ಷಣವೂ ಬಗೆಬಗೆಯ ಹೂವು-ಹಣ್ಣುಗಳಿಂದ ನವೋನವವಾಗಿ ಕಂಗೊಳಿಸುವ ವಸಂತದ ವನರಾಜಿಯಂತೆ, ಮಹಾಕಾವ್ಯವು ಸವಿದಷ್ಟೂ...