Himalaya
ಪರಿಚಿತರಿಗೆಲ್ಲ ಅಡ್ಡಹೆಸರನ್ನಿಡುವುದರಲ್ಲಿ ಎಸ್. ಕೆ. ಎಮ್. ಅಗ್ರಗಣ್ಯರು. ಒಬ್ಬ ಸಂಗೀತವಿದುಷಿಯನ್ನು ‘ಎನ್. ಬಿ.’ ಎಂದು ಕರೆಯುತ್ತಿದ್ದರು. ಆಗೆಲ್ಲ ಅಬ್ರಾಹ್ಮಣರನ್ನು ಸೂಚ್ಯವಾಗಿ ಹೀಗೆ ನಿರ್ದೇಶಿಸುತ್ತಿದ್ದುದು ಲೋಕದ ವಾಡಿಕೆ. ಇದನ್ನು ಗಮನಿಸಿದ ನಾನು “ಇಲ್ಲ ಸರ್; ಅವರು ಬ್ರಾಹ್ಮಣರೇ” ಎಂದೆ. ಆಗ ಕೃಷ್ಣಮೂರ್ತಿ ನಗುತ್ತ “ನಿಮಗೆ ವಾಸ್ತವ ಹೇಳಿದರೆ ಬೇಜಾರಾಗಬಹುದು. ಆದರೆ ಸತ್ಯವೇ ಮುಖ್ಯ ಅಲ್ಲವೇ! ಇದರ ಅರ್ಥ ನಾನ್-ಬ್ರಾಹ್ಮಿನ್ ಎಂದಲ್ಲ; ‘ನಿತ್ಯಬಹಿಷ್ಠೆ’ ಅಂತ!” ಇದನ್ನು ಕೇಳಿ ನಾನು ಮೂರ್ಚ್ಛೆ ಹೋಗುವುದೊಂದು ಬಾಕಿ. ಹೀಗೆಯೇ ಅವರಿಗೆ ಚೆನ್ನಾಗಿ...
ರಂಗನಾಥ್ ಅವರ ಮೊದಲ ಮಗಳ ಹೆಸರು ಅಂಜನಾ. ಎರಡನೆಯ ಮಗಳು ಹುಟ್ಟಿದಾಗ ಯಾವ ಹೆಸರು ಇಡಬೇಕೆಂದು ಕೇಳಿದಾಗ ಎಸ್. ಕೆ. ಎಮ್. ಹೀಗೆ ಹೇಳಿದ್ದರಂತೆ: “ನಿರಂಜನಾ ಅಂತ ಇಡಿ. ಮತ್ತೂ ಒಬ್ಬಳು ಹುಟ್ಟಿದರೆ ಇದ್ದೇ ಇದೆ ಅಮೃತಾಂಜನಾ!” ಇಲ್ಲಿಯ ಧ್ವನಿ ಆ ಕಾಲದ ಕನ್ಯಾಪಿತೃಗಳಿಗೆ ಚೆನ್ನಾಗಿ ತಿಳಿಯುತ್ತದೆ. ಚೋದ್ಯವೆಂದರೆ ರಂಗನಾಥ್ ಅವರಿಗೆ ನಿಜಕ್ಕೂ ಮೂವರು ಹೆಣ್ಣುಮಕ್ಕಳಾದರು! ಪುಣ್ಯಕ್ಕೆ ಹೆಸರುಗಳು ಮಾತ್ರ ಬೇರೆಯಾದವು. ಕೃಷ್ಣಮೂರ್ತಿಗಳ ಈ ವಿನೋದ ಎಚ್. ಕೆ. ಆರ್. ಅವರಿಗೆ ಅದೆಷ್ಟು ಇಷ್ಟವಾಯಿತೆಂದರೆ ಒಮ್ಮೆ ಡಿ.ವಿ.ಜಿ. “ನಿಮಗೆಷ್ಟು ಮಕ್ಕಳು?” ಎಂದು ಕೇಳಿದಾಗ “...
ವಿದ್ವದ್ರಸಿಕರ ಸಾಹಚರ್ಯ ೧೯೮೭ ಮತ್ತು ೧೯೮೮ರ ನಡುವೆ ಡಿ.ವಿ.ಜಿ. ಅವರ ಜನ್ಮಶತಾಬ್ದಿಯ ಅಂಗವಾಗಿ ರಂಗನಾಥ್ ವಾರಕ್ಕೊಂದರಂತೆ ಐವತ್ತೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದರ ಆಯೋಜನೆಯಲ್ಲಿ ನನ್ನನ್ನೂ ತೊಡಗಿಸಿದರು. ಆಗಲೇ ಹಿರಿಯರಾದ ಎನ್. ರಂಗನಾಥಶರ್ಮಾ, ಎಂ. ವಿ. ಸೀತಾರಾಮಯ್ಯ, ಟಿ. ಎನ್. ಪದ್ಮನಾಭನ್, ಡಿ. ಆರ್. ವೆಂಕಟರಮಣನ್, ನೀಲತ್ತಹಳ್ಳಿ ಕಸ್ತೂರಿ ಮುಂತಾದವರ ಬಳಕೆ ನನಗೆ ಒದಗಿತು. ಇದೇ ಸಂದರ್ಭದಲ್ಲಿ ಕುಲಪತಿ ಕೆ. ಎಂ. ಮುನ್ಷಿ ಅವರ ಜನ್ಮಶತಾಬ್ದಿಯೂ ಬಂದದ್ದು ಒಂದು ಸುಂದರ ಯೋಗಾಯೋಗ. ಈ ಕಾರಣದಿಂದಲೇ ನಾನು ಮುನ್ಷಿ ಅವರ ಎಲ್ಲ ಕೃತಿಗಳನ್ನೂ...
ಕಾರ್ಯಕ್ರಮಗಳ ನಿರ್ವಾಹ ರಂಗನಾಥ್ ಅವರು ಭವನಕ್ಕೆ ಬಂದ ಬಳಿಕ ಸುಮಾರು ಹತ್ತು ವರ್ಷಗಳ ಕಾಲ ನಡಸಿದ ಕಾರ್ಯಕ್ರಮಗಳ ಸಂಖ್ಯೆ ಅಕ್ಷರಶಃ ಸಾವಿರಾರು. ಸಾಮಾನ್ಯವಾಗಿ ತಿಂಗಳಿಗೆ ಹದಿನೈದಿಪ್ಪತ್ತು ಕಾರ್ಯಕ್ರಮಗಳು. ಕೆಲವೊಮ್ಮೆ ಇಪ್ಪತ್ತೈದನ್ನೂ ಮೀರುತ್ತಿದ್ದವು. Down the Memory Lane, Milestones in English Literature, Milestones in Sanskrit Literature, Humour: The Oil for the Wheel of Life, ಕನ್ನಡಸಾಹಿತ್ಯದ ಸಾಲು ದೀಪಗಳು, ಮಹಾಭಾರತದ ಪಾತ್ರಗಳು, ದರ್ಶನಪ್ರಪಂಚ, ಸಂಸ್ಕೃತಸಾಹಿತ್ಯಪ್ರಪಂಚ, ಪಂಚಮಹಾಕಾವ್ಯಗಳು ಮುಂತಾದ ಎಷ್ಟೋ...
Nature
ನನ್ನ ಜಾತಕದಲ್ಲಿ ಯಾವ ಸಂಸ್ಥೆಯಲ್ಲಿಯೂ ಐದು ವರ್ಷಕ್ಕಿಂತ ಹೆಚ್ಚಾಗಿ ದುಡಿಯುವ ಯೋಗವಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಾರತೀಯ ವಿದ್ಯಾಭವನದ ನೆರಳಿನಲ್ಲಿ ನಾನು ಐದು ವಸಂತಗಳ ಸಂತಸವನ್ನು ಕಂಡದ್ದೇ ಅತಿಶಯ. ಕಡೆಯ ವರ್ಷದಲ್ಲಿ ಆಡಳಿತದ ಮಾರ್ಪಾಟಿನ ಕಾರಣ ಅಲ್ಪ-ಸ್ವಲ್ಪದ ಇರುಸುಮುರುಸಾದರೂ ಅದನ್ನೆಲ್ಲ ಮರೆಸುವಂಥದ್ದು ಭವನದ ಬಾಳು. ನನಗೆ ಕಾಲೇಜಿನ ದಿನಗಳಿಂದಲೇ ಕುಲಪತಿ ಮುನ್ಷಿ ಅವರ ಸಾಹಿತ್ಯದ ಪರಿಚಯ ಇದ್ದಿತು. ಅಷ್ಟೇಕೆ, ಪ್ರೌಢಶಾಲೆಯಲ್ಲಿ ಇದ್ದಾಗಲೇ ಅವರ ‘ಭಗವಾನ್ ಕೌಟಿಲ್ಯ’ ಎಂಬ ಕಾದಂಬರಿಯ ಅನುವಾದವನ್ನು ಓದಿ ಹಿಗ್ಗಿದ್ದೆ. ಮೂಲದ ಸ್ವಾರಸ್ಯ...