Nature
ನವೋದಯದಿಂದ ಈಚೆಗೆ ಕಾಣಲು ಅಸಂಭವವೇ ಎನಿಸುವಷ್ಟರ ಮಟ್ಟಿಗೆ ವಿರಳವಾದ ಕರ್ಷಣಜಾತಿಯ ಸೀಸಪದ್ಯಕ್ಕೆ ಮಾದರಿಗಳಾಗಿ ನನ್ನ ಅವಧಾನದ ಎರಡು ಉದಾಹರಣೆಗಳನ್ನು ಗಮನಿಸಬಹುದು:  ಕಾಳರಾತ್ರಿಗಳಲ್ಲಿ ಕದವ ತಟ್ಟುವ ಭಾವ- ಜಾಲಂಗಳಲ್ಲಿರ್ಪ ಜೀವನವನು ಚಂಡಮಾರುತದಲ್ಲಿ ತಾಂಡವಾಂಬುಧಿಯಲ್ಲಿ ತತ್ತರಂಗೊಂಡಿರ್ಪ ತೆಪ್ಪಗಳನು ಮುಸ್ಸಂಜೆಮುಗುಳಾಗಿ ಮೂಗುವಟ್ಟುತ್ತಿರ್ಪ ಮುಂಜಾನೆ ಕಂಡಿರ್ದ ಕನಸುಗಳನು ನಕ್ಷತ್ರಲೋಕದೊಳ್ ನುಗ್ಗಿ ಹಿಂಬಾಗಿಲಿಂ ಮೇಲಾಟಕೆಳಸಿರ್ಪ ಮಿಂಚುಗಳನು ಕುರಿತು ಬರೆವನೇ ಕವಿ; ಬರೆವ ರೀತಿಯಲ್ಲಿ ಬಾಳಬಲ್ಲನೋ ಇಲ್ಲವೋ ತಿಳಿಯಲಾರೆಂ | ಗಿಡ-ಮರಂಗಳಂ...
ಎಲ್ಲಿಂದಲೋ ಒಲವು ಬಂದು ಮನಸನು ಹೊಗಲು ಯಾರು ತಡೆಯುವರದರ ಪ್ರೇರಣೆಯನು ಫಲವಿಹುದೆ, ನಲವಿಹುದೆ, ಒಲವು ಪಡಿಮೂಡಿಹುದೆ ಎನ್ನುವಾಲೋಚನೆಯೆ ಜನಿಸದಂತೆ | ಮರುಳಾಗಿ ಮೈಮರೆತು ದೂರದಿಂದಲೆ ತನ್ನ ಪ್ರಿಯಜನಕೆ ಪ್ರೇಮವನು ಸಲಿಸಬಹುದು ಬಿರಿದುದೇ ಸಾಕೆಂದು ಹೂವು ನಲಿಯದೆ? ಮತ್ತೆ ದೇವರಡಿಯಲಿ ಬೇಡುವುದೆ ವರವನು! ಈ ಬಗೆಯ ಕಥೆಯೆಷ್ಟೊ ಧರಣಿಯಲಿ ನಡೆದಿರುವುದು; ನನ್ನೊಲುಮೆಯೊಂದರೊಳೆ ಜೀವ ತಣಿದಿದ್ದಿತಂದು | ಬೂದಿ ಮುಸುಕಿದ ಸಣ್ಣ ಕೆಂಡದುರಿ ಕಾಣದಂತೆ ಆಸೆಗೊಡದೆಯೆ ನನ್ನ ಮನದೊಲವು ಮಲಗಿದ್ದಿತು (ಸಮಾಧಾನ (ಒಲುಮೆ), ಸಮಗ್ರಕವಿತೆಗಳು, ಪು. ೬೧)...
ಕನ್ನಡದಲ್ಲಿ ಸೀಸಪದ್ಯದ ಬೆಳೆವಣಿಗೆ ಕನ್ನಡದಲ್ಲಿ ಸಾನೆಟ್ಟಿಗೆ ಸಂವಾದಿಯಾಗಿ ಸೀಸಪದ್ಯವನ್ನು ಬಳಸಿದ ನವೋದಯದ ಕೆಲವೊಂದು ಮಾದರಿಗಳನ್ನು ಪರಿಶೀಲಿಸಬಹುದು. ಈ ಪದ್ಯಗಳು ನಿರಪವಾದವಾಗಿ ಮಾತ್ರಾಜಾತಿಯ ವರ್ಗದವು. ಇಲ್ಲಿಯ ಎತ್ತುಗೀತಿಗಳು ಆಟವೆಲದಿ ಮತ್ತು ತೇಟಗೀತಿ ಎಂಬ ಬಂಧಗಳಿಗೆ ಸಂವಾದಿಯಾಗದೆ ಪಂಚಮಾತ್ರಾಚೌಪದಿಗಳೇ ಆಗಿರುವುದು ಗಮನಾರ್ಹ. ತಾಮಸಾವೃತರಾಗಿ ನಿಜಜನರ್ ನಿದ್ರಿಸಿರ- ಲವರನೆಳ್ಚರಿಸಿದಾ ಧೀರನಾರು? ದೇಶೀಯರಾತ್ಮಗೌರವವ ಮರೆತಿರಲಂದು ದೇಶಮಹಿಮೆಯ ಸಾರಿ ಪೇಳ್ದನಾರು? ರಾಷ್ಟ್ರಜನನಿಯುಡುಂಗಿರಲ್ ಪಾರತಂತ್ರ್ಯದಲಿ ಸ್ವಾತಂತ್ರ್ಯವೇಕೆ...
ರಾಕೇಂದುಬಿಂಬಮೈ ರವಿಬಿಂಬಮೈ ಯೊಪ್ಪ ನೀರಜಾತೇಕ್ಷಣ ನೆಮ್ಮೊಗಂಬು ಕಂದರ್ಪಕೇತುವೈ ಘನಧೂಮಕೇತುವೈ ಯಲರು ಬೂಬೋಡಿಚೇಲಾಂಚಲಮ್ಮು | ಭಾವಜು ಪರಿಧಿಯೈ ಪ್ರಳಯಾರ್ಕು ಪರಿಧಿಯೈ ಮೆರಯುನಾಕೃಷ್ಟಮೈ ಮೊಲತ ಚಾಪ- ಮಮೃತಪ್ರವಾಹಮೈ ಯನಲಸಂದೋಹಮೈ ತನರಾರುನಿಂತಿ ಸಂದರ್ಶನಂಬು || ಹರ್ಷದಾಯಿಯೈ ಮಹಾರೋಷದಾಯಿಯೈ ಪರಗು ಮುದ್ದರಾಲಿ ಬಾನವೃಷ್ಟಿ | ಹರಿಕಿನರಿಕಿ ಜೂಡನಂದಂದ ಶೃಂಗಾರ- ವೀರರಸಮುಲೋಲಿ ವಿಸ್ತರಿಲ್ಲ || (ಶ್ರೀಮಹಾಭಾಗವತ, ೧೦.೨.೧೮೩) ನರಕಾಸುರನನ್ನು ಸಂಹರಿಸುವಾಗ ಸತ್ಯಭಾಮೆಯ ವ್ಯಕ್ತಿತ್ವ ಶೃಂಗಾರ-ವೀರಗಳನ್ನು ಕೃಷ್ಣ ಮತ್ತು ನರಕರತ್ತ ಒಮ್ಮೆಲೇ...
ತೆಲುಗಿನಲ್ಲಿ ಸೀಸಪದ್ಯದ ಬೆಳೆವಣಿಗೆ ಸಾನೆಟ್ಟಿಗೆ ಸಂವಾದಿಯಾಗುವಂತೆ ಕಾಣುವ ಸೀಸಪದ್ಯದ ಈ ಗುಣ ನಮ್ಮವರ ರೂಪಣವೇನಲ್ಲ. ಸಾವಿರ ವರ್ಷಗಳಿಗೂ ಮುನ್ನವೇ ತೆಲುಗಿನಲ್ಲಿ ಆ ಬಂಧಕ್ಕೆ ಇಂಥ ಕಟ್ಟಡ ಒದಗಿತ್ತು. ಇದಕ್ಕೆ ನನ್ನಯ, ತಿಕ್ಕನ ಮುಂತಾದ ಮಹಾಕವಿಗಳ ರಚನೆಗಳೇ ಸಾಕ್ಷಿ: ಧರ್ಮತತ್ತ್ವಜ್ಞುಲು ಧರ್ಮಶಾಸ್ತ್ರಂಬನಿ ಯಧ್ಯಾತ್ಮವಿದುಲು ವೇದಾಂತಮನಿಯು ನೀತಿವಿಚಕ್ಷಣುಲ್ ನೀತಿಶಾಸ್ತ್ರಂಬನಿ ಕವಿವೃಷಭುಲು ಮಹಾಕಾವ್ಯಮನಿಯು | ಲಾಕ್ಷಣಿಕುಲು ಸರ್ವಲಕ್ಷ್ಯಸಂಗ್ರಹಮನಿ ಯೈತಿಹಾಸಿಕುಲಿತಿಹಾಸಮನಿಯು ಬರಮಪೌರಾಣಿಕುಲ್ ಬಹುಪುರಾಣಸಮುಚ್ಚ- ಯಂಬನಿ ಮಹಿ...
Nature
ಕನ್ನಡದಲ್ಲಿ ಸೀಸಪದ್ಯ ಎಂಬ ಛಂದಃಪ್ರಕಾರ ಬೆಳೆದುಬಂದ ಬಗೆಯನ್ನು ಈಗಾಗಲೇ ವಿದ್ವಾಂಸರು ವ್ಯಾಪಕವಾಗಿ ಚರ್ಚಿಸಿದ್ದಾರೆ.[1] ಇದೇ ರೀತಿ ಕನ್ನಡಕ್ಕೆ ಸಾನೆಟ್ ಬಂದ ಬಗೆಯನ್ನೂ ವಿಪುಲವಾಗಿ ವಿಶ್ಲೇಷಿಸಿದ್ದಾರೆ.[2] ಇವುಗಳ ಪುನರಾಲೋಕನ ಅನವಶ್ಯ ಮಾತ್ರವಲ್ಲ, ಸದ್ಯದ ವಿವೇಚನೆಗೆ ಬಹಿರ್ಭೂತವೂ ಹೌದು. ಹೀಗಾಗಿ ಈ ಎರಡು ಛಂದೋಬಂಧಗಳ ಪದ್ಯಶಿಲ್ಪದ ಸಂತುಲನ ಮಾತ್ರವೇ ಸದ್ಯದ ಬರೆಹದ ಉದ್ದೇಶ. ಈ ಕಾರಣದಿಂದಲೇ ಇಲ್ಲಿ ಛಂದಸ್ಸೌಂದರ್ಯದ ಮೀಮಾಂಸೆ ಮುನ್ನೆಲೆಗೆ ಬಂದಿದೆ. ಸೀಸಪದ್ಯ ಕನ್ನಡ ಮತ್ತು ತೆಲುಗು ಸಾಹಿತ್ಯಗಳೆರಡಕ್ಕೂ ಸಂಬಂಧಿಸಿದೆಯಾದರೂ ಅದು ತೆಲುಗಿನಲ್ಲಿ ಕಂಡ...