Author:shashikiran

Himalaya

ಗಂಗಾದೇವಿ

ಕಥನಕಾವ್ಯಗಳನ್ನು ರಚಿಸಿದ ಕವಯಿತ್ರಿಯರ ಪೈಕಿ ಗಂಗಾದೇವಿಯ ಸ್ಥಾನ ಅದ್ವಿತೀಯ. ಅಷ್ಟೇಕೆ, ವಾರ್ತಮಾನಿಕ ವಸ್ತುವನ್ನು ಆಧರಿಸಿ ಪ್ರಸನ್ನಗಂಭೀರವಾದ ಶೈಲಿಯಲ್ಲಿ ಕಲ್ಪನಾವೈಚಿತ್ರ್ಯವಿರುವಂತೆ ಕಾವ್ಯವನ್ನು ರಚಿಸಿದ ಕವಿಗಳ ಪಂಕ್ತಿಯಲ್ಲಿಯೇ ಇವಳ ಸ್ಥಾನ ಗಣ್ಯವಾದುದು. ಈಕೆಯ “ಮಧುರಾವಿಜಯ” ಅಥವಾ “ವೀರಕಂಪಣರಾಯಚರಿತ” ಎಂಬ ಐತಿಹಾಸಿಕಮಹಾಕಾವ್ಯದ ಮೊದಲಿಗೆ ಬರುವ ಕೆಲವು ಮಾತುಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿವೆ.

ಗಂಗಾದೇವಿ ಗುಣ-ದೋಷಗಳನ್ನು ಕುರಿತು ಹೇಳುವ ಮಾತುಗಳು ಮನನೀಯ:

ಪ್ರಬಂಧಮೀಷನ್ಮಾತ್ರೋಪಿ ದೋಷೋ ನಯತಿ ದೂಷ್ಯತಾಮ್ |

ಸುಂದರದ ಭಾವವೇ ಸೌಂದರ್ಯ. ‘ಸುಂದರ’ಶಬ್ದವನ್ನು ಡಿ.ವಿ.ಜಿ. ಅವರು ‘ಉಂದೀ-ಕ್ಲೇದನೇ’ ಎಂಬ ಧಾತುವಿನಿಂದ ನಿಷ್ಪಾದನಮಾಡುತ್ತ ಅದು ನಮ್ಮನ್ನು ಚೆನ್ನಾಗಿ ಆರ್ದ್ರಗೊಳಿಸುವಂಥದ್ದು ಎಂದು ಹೇಳಿದ್ದಾರೆ. ಅರ್ಥಾತ್, ಸೌಂದರ್ಯವು ಸಹೃದಯರನ್ನು ರಸದಲ್ಲಿ ಮುಳುಗಿಸುತ್ತದೆ. ರಸನಿಮಜ್ಜನವೇ ಸೌಂದರ್ಯಾನುಭೂತಿ. ವಿ. ರಾಘವನ್ ಅವರು ‘ದೃಙ್–ಆದರೇ’ ಎಂಬ ಧಾತುವಿನ ಮೂಲಕ ಇದೇ ಪದವನ್ನು ‘ಚೆನ್ನಾಗಿ ಆದರಿಸಲ್ಪಡುವಂಥದ್ದು’ ಎಂಬ ಅರ್ಥದಲ್ಲಿ ನಿರ್ವಚಿಸಿದ್ದಾರೆ. ಈ ಪ್ರಕಾರ ಸೌಂದರ್ಯಾನುಭೂತಿ ಎಂಬುದು ಸಮ್ಯಕ್ಕಾದ ಸ್ವೀಕಾರ, ಸೊಗಸಾದ ಆದರಣೆ. ಹೀಗೆ ಅಂಗೀಕಾರ ಮತ್ತು ಸಮರ್ಪಣಗಳನ್ನು ಸೌಂದರ್ಯಾನುಭವದ ಹೆಗ್ಗುರುತುಗಳಾಗಿ ಹೇಳಬಹುದು. ಇಂಥ ಶರಣಾಗತಿಯು ಪ್ರೀತಿಯಿಲ್ಲದೆ ಸಾಧ್ಯವಿಲ್ಲ.

மேலும் தற்போதுள்ள நமது பண்டிதர்கள் புத்த மற்றும் ஜைன மத தத்துவங்களையும் கற்க முன்வர வேண்டும் என்று நான் எண்ணுகிறேன். வேதத்தை அடிப்படையாக கொள்ளாத இதுபோன்ற மதங்களை நான் கற்கச் சொல்வது புதுமைக்காக அல்ல. ஒரு காலத்தில் புறக்கோட்பாடுகளாக கருதப்பட்ட சாங்கியத்தையும் வைசேஷிகத்தையும் கூட நமது பண்டைய புலவர்கள் கற்றுத்தேர்ந்தனர். சங்கரர் முன்னதை போலி-பாரம்பரியக் கொள்கையெனவும், பின்னதை அறை-சூனியவாதம் என்றும் கருதிவந்தார்.[1] அப்படி இருந்தும்கூட, இவற்றை உன்னிப்பாக பயின்றனர். மேலும் மரபு வழாத தர்சனங்களுள் இவை இடம் பெறவும் செய்தன.

ವೇಂಕಟನಾಥ

ವೇದಾಂತದೇಶಿಕರೆಂಬ ಗೌರವಾಭಿಧಾನವನ್ನು ಗಳಿಸಿದ್ದ ವೇಂಕಟನಾಥನು “ಕವಿತಾರ್ಕಿಕಕೇಸರಿ” ಎಂದು ಪ್ರಸಿದ್ಧ. ಈತನ ಕಾವ್ಯಗಳ ಪೈಕಿ “ಸಂಕಲ್ಪಸೂರ್ಯೋದಯ”ವೆಂಬ ನಾಟಕವು ನಮ್ಮ ಉದ್ದೇಶವನ್ನು ಕೆಲಮಟ್ಟಿಗೆ ಈಡೇರಿಸುತ್ತದೆ. ಈ ಕೃತಿ ಹನ್ನೊಂದನೆಯ ಶತಾಬ್ದದಲ್ಲಿದ್ದ ಕೃಷ್ಣಮಿಶ್ರಯತಿಯ “ಪ್ರಬೋಧಚಂದ್ರೋದಯ”ವನ್ನು ಆದ್ಯಂತ ಅನುಕರಿಸಿದೆ. ಈ ಅನುಕರಣೆ ಇತಿವೃತ್ತ ಮತ್ತು ಪಾತ್ರಗಳನ್ನೆಲ್ಲ ವ್ಯಾಪಿಸಿಕೊಂಡಿದೆ. ಇಂತಿದ್ದರೂ ಮೂಲಕ್ಕೆ ತನ್ನ ಆನೃಣ್ಯವನ್ನು ನಾಮಮಾತ್ರವಾಗಿಯೂ ಹೇಳದ ಮತಾಗ್ರಹ ವೇಂಕಟನಾಥನದು. ಆದರೆ ಪ್ರಬೋಧಚಂದ್ರೋದಯದಲ್ಲಿ ಪರಾಮೃಷವಾಗದ ಶಾಂತರಸಮೀಮಾಂಸೆಯ ಕೆಲವೊಂದು ಅಂಶಗಳು ಇದರ  ಪ್ರಸ್ತಾವನೆಯಲ್ಲಿ ಬಂದಿರುವುದು ಮುದಾವಹ.

Padma Subrahmanyam

ನಾಟ್ಯಶಾಸ್ತ್ರೀಯ ಶುಷ್ಕಾಕ್ಷರಗಳು - ಆಂಗಿಕದಲ್ಲಿ ತಾಳವ್ಯಾಪಾರ

ಡಾ।। ಪದ್ಮಾಸುಬ್ರಹ್ಮಣ್ಯಂ ಅವರು ಈಚಿನ ಶತಮಾನಗಳಲ್ಲಿ ಲುಪ್ತಪ್ರಾಯವಾಗಿದ್ದಂತಹ ನಾಟ್ಯಶಾಸ್ತ್ರದಲ್ಲಿ  ಉಲ್ಲೇಖಗೊಂಡಿರುವ ಶುಷ್ಕಾಕ್ಷರಗಳನ್ನು ನೃತ್ತ-ನೃತ್ಯ-ನಾಟ್ಯ-ಪ್ರಯೋಗಗಳಲ್ಲಿಯೂ (ಅಂಗಹಾರಾದಿಗಳ ಪ್ರಯೋಗ), ಪೂರ್ವರಂಗದ ಭಾಗವಾಗಿಯೂ ವಿನಿಯೋಗಿಸಿರುವರು. ಇವರಿಂದ ಪ್ರೇರಿತರಾದ ಅವರ ಶಿಷ್ಯ-ಪ್ರಶಿಷ್ಯವರ್ಗವೂ ಇಂತಹ  ಶುಷ್ಕಾಕ್ಷರಗಳನ್ನು ಔಚಿತ್ಯಪೂರ್ಣವಾಗಿಯೂ ರಸಪೋಷಕವಾಗಿಯೂ ವಿನಿಯೋಗಿಸಿರುವುದನ್ನು ಕಾಣಬಹುದು. [1]ಇವೇ ಶುಷ್ಕಾಕ್ಷರಗಳು ದೇಶೀನೃತ್ಯ-ನಾಟ್ಯಪದ್ಧತಿಗಳಲ್ಲಿ 'ಸೊಲ್ಲು-ಕಟ್ಟು', 'ತತ್ಕಾರ್' ಇತ್ಯಾದಿಯಾಗಿ ಪ್ರತಿಬಿಂಬಿತವಾಗಿವೆ.