‘ನೆಲೆ’: ಸಾವಿನ ಹಿನ್ನೆಲೆಯಲ್ಲಿ ಜೀವನಮೀಮಾಂಸೆ - 2
ಕಾಳಪ್ಪ. ಇವನ ಹೆಸರು ಯಮಧರ್ಮನ ಸಂಕೇತವೂ ಹೌದು, ಕಾಲದ ಸಂಕೇತವೂ ಹೌದು. ಸದಾ ದೇಶ-ವಿದೇಶಗಳಲ್ಲಿ ತಿರುಗಾಡುವ ವೃತ್ತಿಪರನನ್ನಾಗಿ ಕಾಳಪ್ಪನನ್ನು ಚಿತ್ರಿಸುವ ಮೂಲಕ ಭೈರಪ್ಪನವರು ಕಾಲದ ಚಲನಶೀಲತೆಯನ್ನು ಸೂಚಿಸಿದ್ದಾರೆ. ಸಾವನ್ನೂ ಸೇರಿದಂತೆ ಜವರಾಯಿಯ ಜೀವನದ ಹಲವು ಸಂಗತಿಗಳನ್ನು ಅವನ ಡೈರಿಯ ಮೂಲಕ ಕಾಳಪ್ಪ ತಿಳಿದುಕೊಳ್ಳುವುದು ಕಾಲದ ಸಾಕ್ಷಿಸ್ವಭಾವವನ್ನು ಧ್ವನಿಸುವಂತಿದೆ. ಈ ಹಿನ್ನೆಲೆಯಲ್ಲಿ ನಾವು ಪಾತ್ರವಿಶ್ಲೇಷಣೆಗೆ ತೊಡಗಬಹುದು. ಕಾಳಪ್ಪನನ್ನು ಅವನ ಅರವತ್ತೊಂದನೆಯ ವಯಸ್ಸಿನಲ್ಲಿ ಸಾವಿನ ಆಲೋಚನೆ ಆವರಿಸಿಕೊಳ್ಳುತ್ತದೆ. ಆತನ ಮಾತಿನಲ್ಲಿಯೇ ಹೇಳುವುದಾದರೆ, ಅದು “ಇದ್ದಕ್ಕಿಂದ್ದಂತೆಯೇ ತೋರಿಸಿಕೊಂಡ ಮುಪ್ಪಲ್ಲ, ಶಕ್ತಿಹೀನತೆಯಲ್ಲ, ಕಾಹಿಲೆಯಲ್ಲ, ಸಾವು.