ಈ ಲೇಖನವನ್ನು ಸಮಾಪ್ತಿಗೊಳಿಸುವ ಮುನ್ನ ಪ್ರಕೃತ ಗ್ರಂಥದ ಕಡೆಗೆ ಬಂದಿರುವ ವರ್ಣ ಹಾಗೂ ಮತತ್ರಯಸಮನ್ವಯಗಳ ಬಗೆಗೆ ಒಂದೆರಡು ಮಾತು ಹೇಳಬೇಕು. ಡಿ.ವಿ.ಜಿ. ಅವರ ವಿಚಾರ ಇಲ್ಲಿ ಕೊಂಚ ಕುಂಠಿತವಾದಂತಿದೆ. ಜನ್ಮದಿಂದಲೇ ವರ್ಣವು ನಿರ್ಧಾರಿತವಾಗುತ್ತದೆ ಎಂಬುದು ಅವರ ನಿಲುಮೆ. ವರ್ಣನಿರ್ಣಯವು ಜನ್ಮದಿಂದಲೂ ಸಾಧ್ಯವೆಂದರೆ ಯಾವ ವಿಪ್ರತಿಪತ್ತಿಯೂ ಇಲ್ಲ; ಜನ್ಮದಿಂದ ಮಾತ್ರ ವರ್ಣನಿರ್ಣಯ ಸಾಧ್ಯವೆಂದು ಹೇಳುವುದು ಯುಕ್ತವಾಗಿ ತೋರದು. ಶ್ರೀಕೃಷ್ಣನೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ” (೪.೧೩) ಎಂದು ಹೇಳಿದ್ದಾನಷ್ಟೆ. ಜೊತೆಗೆ ‘ವರ್ಣ’ ಎಂಬ ಶಬ್ದದ ಧಾತ...
ಸ್ವೋಪಜ್ಞ ವ್ಯಾಖ್ಯೆ ಡಿ.ವಿ.ಜಿ. ಅವರು ಸ್ವಯಂ ಒಬ್ಬ ಶ್ರೇಷ್ಠ ದಾರ್ಶನಿಕರಾದ ಕಾರಣ ಎಷ್ಟೋ ಪಾರಂಪರಿಕ ತತ್ತ್ವಗಳಿಗೆ ಅವರು ತಮ್ಮದೇ ಆದ ವಿಶಿಷ್ಟ ವ್ಯಾಖ್ಯೆಗಳನ್ನು ಒದಗಿಸಿದ್ದಾರೆ. ಸಂಸ್ಕೃತಭಾಷೆಯಲ್ಲಿ ರಚಿತವಾದ ಸಾಂಪ್ರದಾಯಿಕ ಭಾಷ್ಯಾದಿ ಗ್ರಂಥಗಳಲ್ಲಿಯೂ ಕಾಣದ ಒಳನೋಟ ಡಿ.ವಿ.ಜಿ. ಅವರ ವ್ಯಾಖ್ಯೆಗಳಲ್ಲಿ ಧಾರಾಳವಾಗಿ ಕಂಡುಬರುತ್ತದೆ. ಇವು ‘ಜೀವನಧರ್ಮಯೋಗ’ವನ್ನು ಸ್ವತಂತ್ರ ಶಾಸ್ತ್ರದ ಮಟ್ಟಕ್ಕೆ ಏರಿಸಿವೆಯೆಂದರೆ ತಪ್ಪಾಗದು. ಆಧುನಿಕ ಕಾಲದಲ್ಲಿ ಆರ್ಷವಾಙ್ಮಯದ ಬಗೆಗೆ ಬಂದ ವಿವರಣೆಗಳ ಪೈಕಿ ಈ ವ್ಯಾಖ್ಯೆಗಳಿಗೆ ಮಹತ್ತ್ವದ ಸ್ಥಾನವಿದೆ. ಪ್ರಾಚೀನ ಶಾಸ್ತ್...
ಸೂಚನೆ, ಸಾರಾಂಶ, ಸಂಗ್ರಹ ಡಿ.ವಿ.ಜಿ. ಅವರ ಮನಸ್ಸು ಸದಾ ಸಾರಗ್ರಹಣದತ್ತ ಲಗ್ನವಾಗಿರುವಂಥದ್ದು. ಹೀಗೆ ಗ್ರಹಿಸಿದ ಸಾರವನ್ನು ಸ್ಪಷ್ಟವಾಗಿ, ಸ್ಮರಣೀಯವಾಗಿ, ಸುಂದರವಾಗಿ ಹೇಳುವಲ್ಲಿ ಅವರ ಕಾವ್ಯ-ಶಾಸ್ತ್ರಗಳ ಅಧ್ಯಯನ ಸಹಕರಿಸಿದೆ. ಅವರ ಈ ದೃಷ್ಟಿ ಗದ್ಯ-ಪದ್ಯಗಳಾಗಿ ಮೂಡಿ ಓದುಗರಿಗೆ ಮಹೋಪಕಾರ ಮಾಡಿದೆ. ಪ್ರತಿ ಅಧ್ಯಾಯದ ಆರಂಭದಲ್ಲಿಯೂ ಕೊನೆಯಲ್ಲಿಯೂ ಕಂಡುಬರುವ ಈ ಸಂಕ್ಷಿಪ್ತ ರಚನೆಗಳು ನಿರ್ದಿಷ್ಟ ಗ್ರಂಥಭಾಗವು ಮನಸ್ಸಿಗೆ ನಾಟುವಂತೆ ಮಾಡುತ್ತವೆ; ಇಡಿಯ ವಿವರಣೆಯನ್ನು ಒಂದೇ ದೃಕ್‌ಪ್ರಸಾರದಲ್ಲಿ ಗ್ರಹಿಸುವಂತೆ ಮಾಡುತ್ತವೆ. ಇಂಥ ಕೆಲವು ಮಾದರಿಗಳನ್ನು ಈಗ ಪರ...
Himalaya
ಕೃತಿವೈಶಿಷ್ಟ್ಯ ಹೀಗೆ ಡಿ.ವಿ.ಜಿ. ಅವರು ರಚಿಸಿದ ‘ಜೀವನಧರ್ಮಯೋಗ’ ಒಂದು ಅಪೂರ್ವ ಕೃತಿ. ಸಾಂಪ್ರದಾಯಿಕ ವಾಙ್ಮಯವನ್ನು ನಮ್ಮ ಕಾಲಕ್ಕೆ ತಕ್ಕಂತೆ ಅನ್ವಯಿಸಿ ವ್ಯಾಖ್ಯಾನಿಸುವುದು ಅವರ ಸಾಹಿತ್ಯಸೃಷ್ಟಿಯ ಪ್ರಮುಖ ಆಯಾಮಗಳಲ್ಲೊಂದು. ‘ಈಶೋಪನಿಷತ್ತು’, ‘ಪುರುಷಸೂಕ್ತ’, ‘ಮನುಸ್ಮೃತಿ’ (ಇಂಗ್ಲಿಷ್) ಮುಂತಾದ ಆರ್ಷಗ್ರಂಥಗಳ ಮೇಲಣ ಅವರ ಬರೆಹಗಳು ರೂಪುಗೊಂಡದ್ದು ಈ ಹಿನ್ನೆಲೆಯಲ್ಲಿ. ಡಿ.ವಿ.ಜಿ. ಅವರು ಈ ನಿಟ್ಟಿನಲ್ಲಿ ತೋರಿದ ನಿತಾಂತ ಶ್ರದ್ಧೆ, ಪರಿಶ್ರಮದ ಸಾತತ್ಯ, ಅಂತರ್ದೃಷ್ಟಿ - ಒಂದೊಂದೂ ಅನುಪಮವಾದುದು. ಹಳತೆಲ್ಲದರಲ್ಲಿಯೂ ಹುಳುಕನ್ನೇ ಹುಡುಕದೆ, ಹೊಸತೆಲ್...
ಪ್ರಾಣಿಗಳಿಗಿಂತ ವಿಶಿಷ್ಟವಾದ ಆಲೋಚನಸಾಮರ್ಥ್ಯವನ್ನು ಹೊಂದಿರುವ ಮಾನವನಿಗೆ ತನ್ನ ಸ್ವರೂಪವೇನು, ತಾನು ವ್ಯವಹರಿಸುವ ಜಗತ್ತಿನ ಜಾಡು ಎಂಥದ್ದು, ತನಗೂ ಜಗತ್ತಿಗೂ ಇರುವ ಸಂಬಂಧ ಯಾವ ತೆರನಾದುದು, ಈ ಸಂಬಂಧದಿಂದ ಉಂಟಾದ ಬಂಧದ ಬಗೆ ಎಂಥದ್ದು, ಇಂಥ ಬಂಧದಿಂದ ಬಿಡುಗಡೆ ಹೇಗೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಆತ ಶಾಸ್ತ್ರ, ಯುಕ್ತಿ, ಅನುಭವ ಎಂಬ ಪ್ರಮಾಣಗಳನ್ನು ಆಶ್ರಯಿಸಿ ಶ್ರವಣ, ಮನನ, ನಿದಿಧ್ಯಾಸನಗಳ ಹಾದಿಯಲ್ಲಿ ಮುನ್ನಡೆಯುತ್ತಾನೆ. ಈ ಪ್ರಶ್ನೆಗಳಿಗೆ ದೊರೆತ ಉತ್ತರಗಳಿಂದ ಉಪಶಾಂತಿ ಲಭಿಸಿದರೆ ಜೀವನ...