ಮಹಾಭಾರತದ ಮತ್ತೊಂದು ಸ್ವಾರಸ್ಯವೆಂದರೆ ಅದರ ಕಥೆಯ ಉದ್ದಕ್ಕೂ ನಿರ್ಣಾಯಕಘಟ್ಟಗಳಲ್ಲಿ ಕೃತಿಕಾರರಾದ ವ್ಯಾಸರು ಬಂದುಹೋಗುತ್ತಾರೆ; ಮುಖ್ಯಪಾತ್ರಗಳನ್ನೆಲ್ಲ ಉದ್ಬೋಧಿಸುತ್ತಾರೆ. ಹೀಗೆ ಕವಿಯೇ ತನ್ನ ಕೃತಿಯಲ್ಲಿ ಪಾತ್ರವಾಗಿ ಬರುವುದು ರಾಮಾಯಣದಲ್ಲಿ ಕೂಡ ಉಂಟು. ಆದರೆ ಅದು ತೀರ ವಿರಳ. ರಾಮಾಯಣದ ಮೊದಲಿಗೆ ಪೀಠಿಕಾಸರ್ಗದಲ್ಲಿ ವಾಲ್ಮೀಕಿಮುನಿಗಳು ಪ್ರವೇಶಿಸಿದ ಬಳಿಕ ಮತ್ತೆ ಕಾಣಿಸಿಕೊಳ್ಳುವುದು ಉತ್ತರಕಾಂಡದಲ್ಲಿಯೇ.[1] ಇಲ್ಲವರು ಸೀತಾರಾಮರ ಜೀವನದಲ್ಲಿ ಪ್ರಮುಖಪಾತ್ರವನ್ನೇ ವಹಿಸುವರಾದರೂ ಅಷ್ಟು ಹೊತ್ತಿಗೆ ಆ ಪಾತ್ರಗಳ ಸಕ್ರಿಯಜೀವನ ಮುಗಿಯುವ ಹಂತಕ್ಕೆ...
ಈ ಎಲ್ಲ ಅಂಶಗಳಿಗಿಂತ ಮಿಗಿಲಾಗಿ ವೇದವ್ಯಾಸರು ಮಹಾಕವಿಗಿರಬೇಕಾದ ಒಂದು ಮಹಾಲಕ್ಷಣವನ್ನು ತಮ್ಮ ಕಾವ್ಯದ ಪರಿಣಾಮವೆಂಬಂತೆ ಹೀಗೆ ರೂಪಿಸಿದ್ದಾರೆ: ಇತಿಹಾಸಪ್ರದೀಪೇನ ಮೋಹಾವರಣಘಾತಿನಾ | ಲೋಕಗರ್ಭಗೃಹಂ ಕೃತ್ಸ್ನಂ ಯಥಾವತ್ ಸಂಪ್ರಕಾಶಿತಮ್ || (ಮಹಾಭಾರತದ ಕುಂಭಕೋಣಂ ಆವೃತ್ತಿ, ೧.೯೬.೧೦೩) ಮಹಾಭಾರತವು ಮೋಹವೆಂಬ ಕತ್ತಲೆಯನ್ನು ಕಳೆಯುವ ಇತಿಹಾಸಪ್ರದೀಪ.[1] ಇದರ ಮೂಲಕ ಲೋಕದ ಅಂತರಂಗವೆಲ್ಲ ಬೆಳಗಿ ಅಲ್ಲಿ ಇದ್ದದ್ದೆಲ್ಲ ಇರುವ ಹಾಗೆಯೇ ಸ್ಪಷ್ಟವಾಗಿ ತೋರುತ್ತದೆ.   ಇಲ್ಲಿಯ ಒಂದೊಂದು ಮಾತೂ ಕಾವ್ಯಮೀಮಾಂಸೆಯ ಹೃದ್ಭಾಗಕ್ಕೆ ಸೇರಿದೆ. ಕವಿಕರ್ಮವು...
ಎಷ್ಟೋ ಬಾರಿ ನರಕವಿಗಳೂ ವರಕವಿಗಳೂ ತಮ್ಮ ಕಾವ್ಯಗಳ ಮಟ್ಟಿಗೆ ಮೌಲ್ಯನಿಷ್ಠರಾಗಿರುವರಲ್ಲದೆ ಅವುಗಳ ಆಚೆಗೆ ಸಾಮಾನ್ಯಮಾನವರಂತೆಯೇ ಮೌಲ್ಯವಿಕ್ಷೋಭೆಗಳೊಳಗೇ ಒದ್ದಾಡುತ್ತಿರುತ್ತಾರೆ. ಋಷಿಕವಿಗಳು ಮಾತ್ರ ತಮ್ಮ ಕೃತಿಯಿಂದಾಚೆಗೂ ಮೌಲ್ಯಬದ್ಧರಾಗಿರುತ್ತಾರೆ. ಈ ಕಾರಣದಿಂದಲೇ ಅವರ ಭಣಿತಿ ಮಾತ್ರವಲ್ಲದೆ ಬದುಕೂ ಕಾವ್ಯವೆನಿಸುತ್ತದೆ. ಇಂಥ ಒಂದು ಮಹತ್ತ್ವದ ಸಂಗತಿಯನ್ನು ಉತ್ತರಕಾಂಡದ ಕಡೆಯಲ್ಲಿ ಕಾಣಬಹುದು. ಪರಿತ್ಯಕ್ತಳಾದ ಸೀತೆಯನ್ನು ಮತ್ತೆ ರಾಮನು ಸ್ವೀಕರಿಸುವಂತೆ ಮಾಡುವಲ್ಲಿ ಆಸ್ಥೆಯುಳ್ಳ ವಾಲ್ಮೀಕಿಮುನಿಗಳು ಸೀತೆಯ ಚಾರಿತ್ರ್ಯಶುದ್ಧಿಯನ್ನು ಶಪಥಪೂರ್ವಕವಾಗಿ...
ಅನಂತರ ಚತುರ್ಮುಖಬ್ರಹ್ಮನೇ ಮಹರ್ಷಿಗಳ ಬಳಿ ಬರುತ್ತಾನೆ. ಆ ಹೊತ್ತಿನಲ್ಲಿ ಕೂಡ ವಾಲ್ಮೀಕಿಮುನಿಗಳಿಗೆ ಆ ಶ್ಲೋಕದ್ದೇ ಗುಂಗು: ತದ್ಗತೇನೈವ ಮನಸಾ ವಾಲ್ಮೀಕಿರ್ಧ್ಯಾನಮಾಸ್ಥಿತಃ, ೧.೨.೨೮. ಕ್ರೌಂಚವಧೆಯ ಧರ್ಮಾಧರ್ಮಗಳ ವಿಚೇಚನೆಯೂ ಕ್ರೌಂಚಿಗೊದಗಿದ ವೈಧವ್ಯಕ್ಕೆ ಮರುಕವೂ ಮತ್ತೆ ಮತ್ತೆ ಸುಳಿಸುತ್ತುತ್ತಿತ್ತು. ಇದು ಕವಿಯೊಬ್ಬ ತನ್ನ ಕಾವ್ಯಕ್ಕೆ ಪ್ರೇರಕವಾದ ಘಟನೆಯನ್ನು ಮತ್ತೆ ಮತ್ತೆ ಪರ್ಯಾಲೋಚಿಸುವ ಪರಿಯೇ ಹೌದು. ಜಗತ್ತಿನ ಭಾವಗಳು ಈ ಮಟ್ಟದ ಕ್ಷೋಭೆಯನ್ನುಂಟುಮಾಡದೆ ಕಾವ್ಯರಚನೆಗೆ ತಕ್ಕ ಪ್ರೇರಣೆ ಒದಗಿಬರದು. ಹೀಗೆ ಪ್ರೇರಿತನಾದ ಕವಿ ತನ್ನ ತಾರ್ಕಿಕವಾದ...
ಮಹರ್ಷಿ ವಾಲ್ಮೀಕಿ ಶ್ರೀಮದ್ರಾಮಾಯಣದ ಮೊದಲಿಗೇ ಬರುವ ನಾಲ್ಕು ಸರ್ಗಗಳ ಕಥೆ ಕವಿ-ಕಾವ್ಯ-ಸಹೃದಯರ ದೃಷ್ಟಿಯಿಂದ ತುಂಬ ಮಹತ್ತ್ವದ್ದಾಗಿದೆ. ಪ್ರಥಮಸರ್ಗದಲ್ಲಿ ವಾಲ್ಮೀಕಿಮುನಿಗಳು ನಾರದರನ್ನು ಆದರ್ಶನಾಯಕನೊಬ್ಬನ ಸಾಧ್ಯತೆಯ ಬಗೆಗೆ ಪ್ರಶ್ನಿಸುವುದು ಬಹ್ವರ್ಥಗ್ರಾಸಿಯಾಗಿದೆ. ಮಹಾಕಾವ್ಯ-ನಾಟಕಗಳ ನಾಯಕರು ಧೀರೋದಾತ್ತರಾಗಿ ಇರಬೇಕೆಂದು ನಮ್ಮ ಆಲಂಕಾರಿಕರು ಒಕ್ಕಣಿಸುವುದು ಎಷ್ಟೋ ಬಾರಿ ಶುಷ್ಕವೂ ಅಜ್ಞೇಯವೂ ಆಗಿ ತೋರುತ್ತದೆ. ಆದರೆ ಸದ್ಯದ ಸಂದರ್ಭ ಅದನ್ನು ರಸಾರ್ದ್ರವಾಗಿ, ಸುಗ್ರಾಹ್ಯವಾಗಿ ಮಾಡಿದೆ. ಇಷ್ಟೇ ಅಲ್ಲದೆ ಸಂವೇದನಶೀಲನಾದ ಯಾವುದೇ ಕವಿಗೆ ತಾನು...
ಕಲಾಮೀಮಾಂಸೆಯು ಸಾಮಾನ್ಯವಾಗಿ ವಿದ್ವದ್ರಸಿಕರಿಂದಲೇ ಮೊದಲಾಗುತ್ತದೆ. ಇದೇ ಮುಂದೆ ಆಯಾ ಕಲೆಗಳ ಸೌಂದರ್ಯಶಾಸ್ತ್ರವಾಗಿ ರೂಪುಗೊಂಡು ಹೆಚ್ಚಿನ ವ್ಯಾಪ್ತಿ-ವೈಶದ್ಯಗಳನ್ನು ಗಳಿಸುತ್ತದೆ. ಅದೆಷ್ಟೋ ಬಾರಿ ಕಲಾನಿರ್ಮಾತೃಗಳಾದ ಕವಿ-ಕಲಾವಿದರಿಗೇ ತಮ್ಮ ತಮ್ಮ ಕಲೆಗಳ ರೂಪ-ಸ್ವರೂಪಗಳಲ್ಲಿ ಹುದುಗಿರುವ ಸೊಗಸನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಇಂಥ ಸೊಗಸಿನ ಲಕ್ಷಣಪರಿಷ್ಕಾರವನ್ನು ನಡಸುವ ಸಾಮರ್ಥ್ಯವಾಗಲಿ, ಮನೋಧರ್ಮವಾಗಲಿ ಅವರಿಗಿರುವುದಿಲ್ಲ. ಆದರೆ ಹಲಕೆಲವರು ಕವಿ-ಕಲಾವಿದರು ತಮ್ಮ ಕಲಾಮಾಧ್ಯಮದ ನಿರ್ಮಾಣರಹಸ್ಯವನ್ನೂ ಆಸ್ವಾದವೈಶಿಷ್ಟ್ಯವನ್ನೂ...