ಬಾಣಭಟ್ಟ ಮಹಾಕವಿ ಭಟ್ಟಬಾಣನ ಕೃತಿಗಳ ಪೈಕಿ “ಹರ್ಷಚರಿತ” ಒಂದರಲ್ಲಿಯೇ ಕಾವ್ಯಮೀಮಾಂಸೆಯ ಚಿಂತನಶಕಲಗಳು ಕಂಡುಬರುತ್ತವೆ. “ಕಾದಂಬರಿ”ಯ ಉಪಕ್ರಮಶ್ಲೋಕಗಳಲ್ಲಿ ಕಾವ್ಯಕಲೆಯನ್ನು ಕುರಿತ ಒಂದೆರಡು ಮಾತುಗಳಿದ್ದರೂ ಅವು ಸಾಹಿತ್ಯತತ್ತ್ವಕ್ಕೆ ನೇರವಾಗಿ ಸಂಬಂಧಿಸಿಲ್ಲ; ಮೌಲಿಕವೂ ಎನಿಸಿಲ್ಲ. ಹೀಗಾಗಿ ಹರ್ಷಚರಿತವೊಂದೇ ನಮಗಿರುವ ಆಲಂಬನ. ಇಲ್ಲಿಯ ಕೆಲವೊಂದು ಮಾತುಗಳು ನಿಜಕ್ಕೂ ಸತ್ತ್ವಪೂರ್ಣವಾಗಿವೆ. ಆರಂಭದಲ್ಲಿಯೇ ಕೃತಿಚೋರರನ್ನು ಕುರಿತು ಹೀಗೆ ಹೇಳುತ್ತಾನೆ: ಅನ್ಯವರ್ಣಪರಾವೃತ್ತ್ಯಾ ಬಂಧಚಿಹ್ನನಿಗೂಹನೈಃ | ಅನಾಖ್ಯಾತಃ ಸತಾಂ ಮಧ್ಯೇ ಕವಿಶ್ಚೌರೋ ವಿಭಾವ್ಯತೇ...
ಸುಬಂಧು ಸಂಸ್ಕೃತಸಾಹಿತ್ಯದಲ್ಲಿ ಸುಬಂಧುವಿನ ಸ್ಥಾನ ಹೆಮ್ಮೆ ಪಡುವಂಥದ್ದೇನೂ ಅಲ್ಲ. ಬಾಣನ ಪೂರ್ವಸೂರಿಯಾಗಿ ಕೆಲಮಟ್ಟಿಗೆ ಮಾರ್ಗದರ್ಶಿಯಾಗಿದ್ದಾನೆಂದರೆ ಸಾಕಾದೀತು. ಶ್ಲೇಷವನ್ನು ಅಳವು ಮೀರಿ ಬೆಳೆಸುವಲ್ಲಿ ಇವನು ಸಾಧಿಸಿರುವ ಅನೌಚಿತ್ಯ ಮುಂದಿನ ಎಷ್ಟೋ ಮಂದಿಗೆ ಮಾದರಿಯಾದದ್ದೊಂದು ವಿಪರ್ಯಾಸ. ಈತನ ಏಕೈಕ ಉಪಲಬ್ಧಕೃತಿ “ವಾಸವದತ್ತಾ.” ಇದರ ಉಪಕ್ರಮದಲ್ಲಿ ಕಾವ್ಯಮೀಮಾಂಸೆಗೆ ಸಲ್ಲಬಲ್ಲ ಒಂದೆರಡು ಒಳ್ಳೆಯ ಮಾತುಗಳನ್ನಾಡಿದ್ದಾನೆ: ಅವಿದಿತಗುಣಾಪಿ ಸತ್ಕವಿಭಣಿತಿಃ ಕರ್ಣೇಷು ವಮತಿ ಮಧುಧಾರಾಮ್ | ಅನಧಿಗತಪರಿಮಲಾಪಿ ಹಿ ಹರತಿ ದೃಶಂ ಮಾಲತೀಮಾಲಾ || (೧೧)...
Forest
ಈ ಮಾತುಗಳು ಕಾವ್ಯದ ಸಂದರ್ಭಕ್ಕೆ ಎಷ್ಟು ಯುಕ್ತವಾಗಿವೆಯೋ ಕಾವ್ಯಮೀಮಾಂಸೆಯ ಸಂದರ್ಭಕ್ಕೂ ಅಷ್ಟೇ ಯುಕ್ತವಾಗಿವೆ. ಇಲ್ಲಿ ಭಾರವಿಯು ತನ್ನ ಕಾವ್ಯಾಭಿವ್ಯಕ್ತಿಯ ಆದರ್ಶವನ್ನೇ ಸೂಚಿಸಿರುವನೆಂದರೆ ತಪ್ಪಾಗದು. ಅವನು ವಶ್ಯವಾಕ್ಕಾದ ಮಹಾಕವಿ; ಆದುದರಿಂದ ಆತನ ವೈಯಕ್ತಿಕ ಅಭಿಪ್ರಾಯವೂ ಸಾರ್ವತ್ರಿಕವಾದ ಶಾಸ್ತ್ರಾಭಿಪ್ರಾಯವೆನಿಸುವ ಮಟ್ಟಿಗೆ ಅರ್ಥಗರ್ಭಿತವಾಗಿದೆ. ಭಾರವಿಯ ಪ್ರಕಾರ ಮಾತೆಂಬುದು ವಕ್ತೃವಿನ ಆಶಯವನ್ನೆಲ್ಲ ಚೆನ್ನಾಗಿ ಪ್ರತಿಬಿಂಬಿಸಲು ಸಮರ್ಥವಾದ ಕೊಳಕಿಲ್ಲದ ಹೊಳೆಹೊಳೆಯುವ ಕನ್ನಡಿಯಂತಿರಬೇಕು. ಅಂತೆಯೇ ಅದಕ್ಕೊಂದು ಸರ್ವಹಿತಕರವಾದ ಆಶಯವೂ ಇರಬೇಕು. ಇದೇ...
ಶ್ಯಾಮಿಲಕ ಗುಪ್ತಯುಗದ ಮತ್ತೊಬ್ಬ ವಿಶಿಷ್ಟಕವಿ ಶ್ಯಾಮಿಲಕ. ಈತನದಾಗಿ ನಮಗೆ ಉಳಿದಿರುವುದು “ಪಾದತಾಡಿತಕ” ಎಂಬ ಭಾಣವೊಂದೇ. ಇದೊಂದು ರೂಪಕವೇ ಅವನ ಪ್ರತಿಭೆ-ವ್ಯುತ್ಪತ್ತಿಗಳನ್ನೂ ಲೋಕಪರಿಜ್ಞಾನವನ್ನೂ ಸಮರ್ಥವಾಗಿ ತಿಳಿಸುತ್ತದೆ. ಇದರ ಪ್ರಸ್ತಾವನೆಯಲ್ಲಿ ಅವನಾಡುವ ಎರಡು ಮಾತುಗಳು ಕಾವ್ಯಮೀಮಾಂಸೆಯ ದೃಷ್ಟಿಯಿಂದ ಮಹತ್ತ್ವದ್ದಾಗಿವೆ. ಮೊದಲಿಗೆ ಆಲಂಕಾರಿಕರು ಹೇಳುವ “ಪದಪಾಕ”ವನ್ನು ಅವನು ವ್ಯಾಪಕಾರ್ಥದಲ್ಲಿ ಸಮಗ್ರಕಾವ್ಯಕ್ಕೆ ಅನ್ವಯಿಸಿ ಕಂಡಿರುವ ಪರಿ ಸ್ಮರಣೀಯ: ಇದಮಿಹ ಪದಂ ಮಾ ಭೂದೇವಂ ಭವತ್ವಿದಮನ್ಯಥಾ             ಕೃತಮಿದಮಯಂ ಗ್ರಂಥೇನಾರ್ಥೋ...
ಕಾಳಿದಾಸನ ಪರಿಣತಪ್ರಜ್ಞೆಯ ಫಲವಾದ “ರಘುವಂಶ”ಮಹಾಕಾವ್ಯದಲ್ಲಿ ಕಾವ್ಯಮೀಮಾಂಸೆಯ ಮೌಲ್ಯಗಳು ಸಾಕಷ್ಟಿವೆ. ಅವನು ಮಂಗಳಶ್ಲೋಕದಲ್ಲಿಯೇ ಲೋಕೋತ್ತರವಾದ ಕಾವ್ಯದರ್ಶನವನ್ನು ಮಾಡಿಸುತ್ತಾನೆ: ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ || (೧.೧)    ಮಾತು ಮತ್ತು ಅರ್ಥಗಳಂತೆ ಅವಿಭಾಜ್ಯರಾಗಿ ಜಗತ್ತಿನ ಜನನೀಜನಕರೆನಿಸಿದ ಪಾರ್ವತೀ-ಪರಮೇಶ್ವರರನ್ನು  ಮಾತು ಮತ್ತು ಅರ್ಥಗಳ ಪ್ರಾಪ್ತಿಗಾಗಿ ವಂದಿಸುತ್ತೇನೆ. ಈ ಶ್ಲೋಕದ ಸ್ವಾರಸ್ಯ ಬಹುಮುಖವಾದುದು. ಇಲ್ಲಿಯೇ ಮೊದಲ ಬಾರಿಗೆ ಅರ್ಧನಾರೀಶ್ವರತತ್ತ್ವ ಮತ್ತು...
ಆರನೆಯ ಅಂಕದಲ್ಲಿ ದುಷ್ಯಂತ ಶಕುಂತಲೆಯ ಭಾವಚಿತ್ರವನ್ನು ಚಿತ್ರಿಸುತ್ತಿರುತ್ತಾನೆ. ಅದನ್ನು ಕಂಡ ವಿದೂಷಕ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಮಧುರಾವಸ್ಥಾನದರ್ಶನೀಯೋ ಭಾವಾನುಪ್ರವೇಶಃ ಎಂದು ಉದ್ಗರಿಸುತ್ತಾನೆ. ಇದಂತೂ ಕಲಾನಿರ್ಮಾಣದೃಷ್ಟಿಯಿಂದ ಅತ್ಯದ್ಭುತವಾದ ಒಳನೋಟ. ಈ ಮಾತಿನ ಸರಳತಾತ್ಪರ್ಯವಿಷ್ಟು: ಶಕುಂತಲೆಯನ್ನು ಚಿತ್ರಿಸುವಾಗ ಅವಳಲ್ಲಿ ದುಷ್ಯಂತನಿಗಿರುವ ಉತ್ಕಟವಾದ ಪ್ರೀತಿಭಾವವು ಆ ಚಿತ್ರದಲ್ಲಿ ಕೂಡ ಸೇರಿಹೋಗಿರುವ ಕಾರಣ ಅದು ಪ್ರತಿಯೊಂದು ಅಂಶದಿಂದಲೂ ಅಂದವಾಗಿದೆ, ಆಕರ್ಷಕವಾಗಿದೆ. ಕಲಾವಿದನು ಕಲಾನಿರ್ಮಾಣಕಾಲದಲ್ಲಿ ತನ್ನ...
ಇನ್ನು ಮುಂದೆ “ವಿಕ್ರಮೋರ್ವಶೀಯ”ವನ್ನು ಗಮನಿಸಬಹುದು. ಇಲ್ಲಿಯ ಪ್ರಸ್ತಾವನೆಯ ಕೆಲವೊಂದು ಅಂಶಗಳು ಪರಿಶೀಲನೀಯ. ಮಾಲವಿಕಾಗ್ನಿಮಿತ್ರದಲ್ಲಿದ್ದಂತೆ ಈ ಕೃತಿಯಲ್ಲಿ ಕವಿಗೆ ತನ್ನ ರೂಪಕವನ್ನು ಪ್ರದರ್ಶಿಸುವಲ್ಲಿ ಹೆಚ್ಚಿನ ಸಂಕೋಚವಿಲ್ಲ; ಸಮರ್ಥನೆಯ ಒತ್ತಡವೂ ಹೆಚ್ಚಿಲ್ಲ. ಏಕೆಂದರೆ, ಅವನೇ ಬಲ್ಲಂತೆ ಸಹೃದಯಪರಿಷತ್ತು ಪೂರ್ವಕವಿಗಳ ರಚನೆಗಳನ್ನು ಆಸ್ವಾದಿಸಿದೆ; ಹಾಗೆಂದ ಮಾತ್ರಕ್ಕೆ ಹೊಸತರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಮಟ್ಟಕ್ಕೆ ಪರ್ಯಾಪ್ತಕುತೂಹಲವೂ ಆಗಿಲ್ಲ. ಇದನ್ನು ಅವನ ಸೊಗಸಾದ ಮಾತು ಹೀಗೆ ಧ್ವನಿಸಿದೆ: ಪರಿಷದೇಷಾ ಪೂರ್ವೇಷಾಂ ಕವೀನಾಂ...
ಮುಂದಿನ ಪದ್ಯದಲ್ಲಿ ಗಣದಾಸನು ತಾನು ಮಾಲವಿಕೆಗೆ ಕಲಿಸಿದ ಪಾಠವನ್ನು ಅವಳು ಮತ್ತೆ ತನಗೆ ಒಪ್ಪಿಸುವಾಗ ಅದು ಆಕೆಯೇ ತನಗೆ ಬೋಧಿಸುವ ಪಾಠದಂತೆ ತೋರುವುದೆಂದು ಹೇಳುತ್ತಾನೆ (೧.೫). ಇಲ್ಲಿ “ಭಾವಿಕ” ಎಂಬ ಪದ ಬಳಕೆಯಾಗಿದೆ. ಯಾವುದೇ ಕಲೆಯನ್ನು ಕಲಿಸುವಾಗ ಅದಕ್ಕೊಂದು ಭಾವಪೂರ್ಣತೆ ಅವಶ್ಯ. ಇದೇ “ಭಾವಿಕ” ಎಂಬ ಶಬ್ದದ ಇಂಗಿತ. ಭಾವಪೂರ್ಣತೆಯಿಲ್ಲದೆ ಕಲೆಗೆ ಸ್ವಂತಿಕೆ ಬಾರದು. ಗುರು ಕಲಿಸಿದ್ದು ಶಿಷ್ಯನಲ್ಲಿ ಶುಕಪಾಠದ ಹಾಗೆ ಆಗದಿರಬೇಕೆಂದರೆ ಶಿಷ್ಯನು ತನ್ನ ಕಲಿಕೆಯನ್ನು ಭಾವಿಕತ್ವದ ಮೂಲಕ ಆತ್ಮೀಕರಿಸಿಕೊಳ್ಳಬೇಕು. ಕವಿಯಾದರೂ ಅಷ್ಟೆ, ತನ್ನ ಕಾವ್ಯವನ್ನು...
ಶೂದ್ರಕನು ನಾಯಕ-ನಾಯಿಕೆಯರನ್ನು ನಿರ್ದೇಶಿಸಿದ ಬಳಿಕ ತನ್ನ ರೂಪಕದ ವಸ್ತುವನ್ನು ಅದರ ಎಲ್ಲ ಸಂಕೀರ್ಣತೆಯೊಡನೆ ಸೂಚಿಸಿರುವುದು ಅನ್ಯಾದೃಶ. ಮೃಚ್ಛಕಟಿಕವೊಂದು ಪ್ರಕರಣವಾದ ಕಾರಣ ಇಲ್ಲಿ ವೀರರಸಕ್ಕೆ ಹೆಚ್ಚಿನ ಅವಕಾಶವಿಲ್ಲ. ಅದೇನಿದ್ದರೂ ನಾಟಕದ ದೈವ-ಮಾನುಷಭೂಮಿಕೆಗಳಿಗೆ ಸಹಜವೆನಿಸಬಲ್ಲ ರಸ. ಸಾಮಾನ್ಯರ ಬದುಕಿನಲ್ಲಿ ವೀರಾದ್ಭುತಗಳಿಗಿಂತ ಶೃಂಗಾರ-ಕರುಣ-ಹಾಸ್ಯಗಳೇ ಸಹಜ, ಸಮೃದ್ಧ. ಅದನ್ನೇ “ಸುರತೋತ್ಸವಾಶ್ರಯ” ಎಂಬ ಪದದ ಮೂಲಕ ಶೂದ್ರಕ ಅಭಿವ್ಯಂಜಿಸಿದ್ದಾನೆ. ಸಂಭೋಗಶೃಂಗಾರಕ್ಕೆ ಹಾಸ್ಯವು ಅಂಗವಾದರೆ ವಿಪ್ರಲಂಭಶೃಂಗಾರಕ್ಕೆ ಕರುಣವು ಅಂಗ. ಹೀಗೆ ಈ ಮೂರು ರಸಗಳ...
ಬೌದ್ಧಸಂನ್ಯಾಸಿಯಾದ ಅಶ್ವಘೋಷನು ಸ್ವಮತಪ್ರಚಾರ ಮತ್ತು ತತ್ತ್ವೋಜ್ಜೀವನಕ್ಕಾಗಿ ಕಾವ್ಯದ ಮಾಧ್ಯಮವನ್ನು ಬಳಸಿಕೊಂಡಿರುವುದು ಅವನ ಮಾತುಗಳಿಂದಲೇ ಸ್ಪಷ್ಟವಾಗಿದೆ. ವಿಶೇಷತಃ ಕಹಿಯಾದ ಔಷಧವನ್ನು ಸಿಹಿಯಾದ ಜೇನಿನ ಅನುಪಾನದಿಂದ ಉಣಿಸುವ ದೃಷ್ಟಾಂತ ಮುಂದಿನ ಎಷ್ಟೋ ಆಲಂಕಾರಿಕರಿಗೆ ಅಚ್ಚುಕಟ್ಟಾಗಿ ಒದಗಿಬಂದಿತು.[1] ಹೀಗೆ ಕಾವ್ಯಮಾಧ್ಯಮವನ್ನು ವಿಚಾರಸಂವಹನಕ್ಕಾಗಿ ಬಳಸಿಕೊಳ್ಳುವುದು ಎಲ್ಲ ದೇಶ-ಕಾಲಗಳಲ್ಲಿಯೂ ವ್ಯಾಪಕವಾಗಿರುವ ರೂಢಿ. ಅಷ್ಟೇಕೆ, ಇದೇ ಕಾವ್ಯದ ಸಾರ್ಥಕ್ಯವೆಂದು ಕೂಡ ಹೇಳುವುದುಂಟು. ಮತಾಂಧರೂ ಕರ್ಮಠರೂ ಆದವರಿಗೆ ಇದರಲ್ಲಿ ಬಲವಾದ ನಂಬಿಕೆ. ಹಿಂದಿನ...