ರಸಪಾರಮ್ಯವನ್ನು ಕವಿಯು ಎತ್ತಿಹಿಡಿಯುವ ಬಗೆ ಹೀಗೆ: ಅರ್ಥೋऽಸ್ತಿ ಚೇನ್ನ ಪದಶುದ್ಧಿರಥಾಸ್ತಿ ಸಾಪಿ             ನೋ ರೀತಿರಸ್ತಿ ಯದಿ ಸಾ ಘಟನಾ ಕುತಸ್ತ್ಯಾ | ಸಾಪ್ಯಸ್ತಿ ಚೇನ್ನ ನವವಕ್ರಗತಿಸ್ತದೇತ-             ದ್ವ್ಯರ್ಥಂ ವಿನಾ ರಸಮಹೋ ಗಹನಂ ಕವಿತ್ವಮ್ || (೨.೩೦) ಒಳ್ಳೆಯ ಆಶಯವಿದ್ದಲ್ಲಿ ಅದನ್ನು ವ್ಯಕ್ತಪಡಿಸುವ ಪದಗಳು ವ್ಯಾಕರಣದೃಷ್ಟಿಯಿಂದ ಶುದ್ಧವಾಗಿರುವುದಿಲ್ಲ. ಒಂದು ವೇಳೆ ಇಂಥ ಪದಶುದ್ಧಿಯಿದ್ದರೆ ರೀತಿಯಲ್ಲಿ ಸೊಗಸಿರುವುದಿಲ್ಲ. ಹಾಗೇನಾದರೂ ರೀತಿಯಲ್ಲಿ ಸೊಗಸಿದ್ದರೆ ಕಾವ್ಯದ ವಿವಿಧಾಂಗಗಳಲ್ಲಿ ಸಾಮರಸ್ಯವಿರುವುದಿಲ್ಲ. ಒಂದು ಪಕ್ಷ...
ಹರಿಚಂದ್ರ ಈತನ “ಧರ್ಮಶರ್ಮಾಭ್ಯುದಯ”ವೆಂಬ ಕಾವ್ಯದ ಮೊದಲಿಗೇ ಬರುವ ಕೆಲವೊಂದು ವಿಚಾರಗಳು ಮನನೀಯ. ಇಲ್ಲಿ ಕಲ್ಪನೆಯಿದ್ದೂ ಶಿಲ್ಪನವಿಲ್ಲದ ಮತ್ತು ಶಿಲ್ಪನವಿದ್ದೂ ಕಲ್ಪನೆಯಿಲ್ಲದ ಎರಡು ಬಗೆಯ ವಿಪರ್ಯಾಸಗಳನ್ನು ಕವಿ ಮನಗಾಣಿಸಿದ್ದಾನೆ: ಅರ್ಥೇ ಹೃದಿಸ್ಥೇऽಪಿ ಕವಿರ್ನ ಕಶ್ಚಿ-             ನ್ನಿರ್ಗ್ರಂಥಿಗೀರ್ಗುಂಫವಿಚಕ್ಷಣಃ ಸ್ಯಾತ್ | ಜಿಹ್ವಾಂಚಲಸ್ಪರ್ಶಮಪಾಸ್ಯ ಪಾತುಂ             ಶ್ವಾ ನಾನ್ಯಥಾಂಭೋ ಘನಮಪ್ಯವೈತಿ || (೧.೧೪) ಕೆಲವು ಕವಿಗಳಿಗೆ ಕಾವ್ಯಾರ್ಥವು ಅಂತರಂಗದಲ್ಲಿ ಸ್ಫುಟವಾಗಿದ್ದರೂ ಅದನ್ನು ತೊಡಕಿಲ್ಲದೆ ಪದ್ಯರೂಪದಲ್ಲಿ ಹವಣಿಸುವ...
Himalaya
ಕ್ಷೇಮೇಂದ್ರನು ತನ್ನ “ರಾಮಾಯಣಮಂಜರಿ” ಮತ್ತು “ಭಾರತಮಂಜರಿ”ಗಳ ಕಡೆಯಲ್ಲಿ ತುಂಬ ಒಳನೋಟವುಳ್ಳ ಎರಡು ಶ್ಲೋಕಗಳನ್ನು ರಚಿಸಿದ್ದಾನೆ. ಅವು ವಾಲ್ಮೀಕಿ-ವ್ಯಾಸರ ಕೃತಿಗಳಲ್ಲಿರುವ ಪ್ರಧಾನರಸ ಶಾಂತವೆಂದು ಪ್ರತಿಪಾದಿಸುತ್ತವೆ. ಈ ನಿಲವಿಗೆ ಬರುವುದಕ್ಕೆ ಕಾರಣವಾದ ಉಪಪತ್ತಿಗಳನ್ನು ಕೂಡ ಕ್ಷೇಮೇಂದ್ರನು ಕೊಟ್ಟಿರುವುದು ಮಹತ್ತ್ವದ ಸಂಗತಿ. ಶಾಂತರಸದ ಅಸ್ತಿತ್ವ-ಅನಸ್ತಿತ್ವಗಳನ್ನು ಕುರಿತು ತೀವ್ರವಾದ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ ಆನಂದವರ್ಧನ ಮತ್ತು ಅಭಿನವಗುಪ್ತರು ಮಹಾಭಾರತವನ್ನು ಶಾಂತರಸಪ್ರಧಾನವೆಂದೂ ಸಕಲರಸಗಳ ಪೈಕಿ ಶಾಂತವೇ ಮೌಲಿಭೂತವೆಂದೂ ಪ್ರತಿಪಾದಿಸಿದ...
ಪರಿಮಳಪದ್ಮಗುಪ್ತ ಪರಿಮಳಗುಪ್ತ ಅಥವಾ ಪರಿಮಳಪದ್ಮಗುಪ್ತನು ಬರೆದ ಐತಿಹಾಸಿಕಮಹಾಕಾವ್ಯ “ನವಸಾಹಸಾಂಕಚರಿತ.” ಇದು ಭೋಜದೇವನ ತಂದೆ ಸಿಂಧುಲನ ಸಾಧನೆಗಳನ್ನು ಕೊಂಡಾಡುವ ಕೃತಿ. ಇದರ ಒಂದು ಶ್ಲೋಕವು ನಮ್ಮ ಪ್ರಕೃತೋದ್ದೇಶಕ್ಕೆ ಒದಗಿಬರುವಂತಿದೆ: ಚಕ್ಷುಸ್ತದುನ್ಮೇಷಿ ಸದಾ ಮುಖೇ ವಃ             ಸಾರಸ್ವತಂ ಶಾಶ್ವತಮಾವಿರಸ್ತು | ಪಶ್ಯಂತಿ ಯೇನಾವಹಿತಾಃ ಕವೀಂದ್ರಾ-             ಸ್ತ್ರಿವಿಷ್ಟಪಾಭ್ಯಂತರವರ್ತಿ ವಸ್ತು || (೧.೪) ಕವಿಗಳ ವದನಗಳಲ್ಲಿ ಸಾರಸ್ವತನೇತ್ರವು ಸದಾ ತೆರೆದಿದ್ದು ಬೆಳಗಲಿ. ಇದರ ಮೂಲಕವೇ ಮಹಾಕವಿಗಳು ಸಾವಧಾನವಾಗಿ ಮೂಜಗದ...
ಈತನ “ಬಾಲರಾಮಾಯಣ”ದ ಪ್ರಸ್ತಾವನೆಯಲ್ಲಿ ಭಾಷಾಸಾಮರಸ್ಯವನ್ನು ಮತ್ತೂ ಪ್ರಸ್ಫುಟವಾಗಿ ಕಾಣಬಹುದು: ಗಿರಃ ಶ್ರವ್ಯಾ ದಿವ್ಯಾಃ ಪ್ರಕೃತಿಮಧುರಾಃ ಪ್ರಾಕೃತಧುರಾಃ             ಸುಭವ್ಯೋऽಪಭ್ರಂಶಃ ಸರಸರಚನಂ ಭೂತವಚನಮ್ | ವಿಭಿನ್ನಾಃ ಪಂಥಾನಃ ಕಿಮಪಿ ಕಮನೀಯಾಶ್ಚ ತ ಇಮೇ             ನಿಬದ್ಧಾ ಯಸ್ತ್ವೇಷಾಂ ಸ ಖಲು ನಿಖಿಲೇऽಸ್ಮಿನ್ ಕವಿವೃಷಾ || (೧.೧೧) ಕಿವಿಗಿಂಪಾದ ದೇವವಾಣಿ ಸಂಸ್ಕೃತ, ನಿಸರ್ಗಮಾಧುರ್ಯವುಳ್ಳ ಪ್ರಾಕೃತ, ಭವ್ಯವಾದ ಅಪಭ್ರಂಶ, ರಸಮಯವಾದ ಪೈಶಾಚಿಯೇ ಮೊದಲಾದ ಬಗೆಬಗೆಯ ಚೆಲುವಿನ ಭಾಷಾಮಾರ್ಗಗಳಿವೆ. ಇವೆಲ್ಲವುಗಳಲ್ಲಿ ಸೊಗಸಾಗಿ...
ಜಿನಸೇನ ಆರಂಭಶೂರರಾದ ಕವಿಗಳನ್ನು ಹೀಗೆ ಪರಿಹಾಸ್ಯ ಮಾಡುತ್ತಾನೆ: ಯಥೇಷ್ಟಂ ಪ್ರಕೃತಾರಂಭಾಃ ಕೇಚಿನ್ನಿರ್ವಹಣಾಕುಲಾಃ | ಕವಯೋ ಬತ ಸೀದಂತಿ ಕರಾಕ್ರಾಂತಕುಡುಂಬಿವತ್  || (೧.೧.೭೧) ಕೆಲವು ಕವಿಗಳು ಕಾವ್ಯದ ಆರಂಭವನ್ನೇನೋ ಉತ್ಸಾಹದಿಂದ ಮಾಡಿಬಿಡುತ್ತಾರೆ, ಆದರೆ ಅದನ್ನು ಕ್ರಮವಾಗಿ ರಚಿಸಿ ಮುಗಿಸುವಲ್ಲಿ ಸೋಲುತ್ತಾರೆ. ಇವರ ಪಾಡು ತೆರಿಗೆಯ ಭಾರಕ್ಕೆ ತತ್ತರಿಸುವ ಸಂಸಾರಿಯಂತೆಯೇ ಸರಿ! ಕ್ಷೇಮೇಂದ್ರನು ಈ ಅಂಶವನ್ನು ಗಮನಿಸಿ ಕವಿಗಳಿಗೆ ಎಚ್ಚರಿಕೆ ಹೇಳಿದ್ದಾನೆ.[1] ಆದರೆ ಅವನಿಗಿಂತ ಮುನ್ನವೇ ಜಿನಸೇನ ಇದರತ್ತ ಗಮನ ಹರಿಸಿರುವುದು ಸ್ತವನೀಯ. ಇದು...
ಮುರಾರಿ ಸಂಸ್ಕೃತದ ದೃಶ್ಯಕಾವ್ಯಪರಂಪರೆಯಲ್ಲಿ ಎಲ್ಲರಿಗಿಂತ ಮಿಗಿಲಾದ ವಿದ್ವತ್ಕವಿಯೆಂದು ಹೆಸರಾದವನು ಮುರಾರಿ. ಈತನ ಏಕೈಕರೂಪಕ “ಅನರ್ಘರಾಘವ”ದ ಪ್ರಸ್ತಾವನೆಯಲ್ಲಿ ಬಂದಿರುವ ಕೆಲವೊಂದು ಮಾತುಗಳು ನಮ್ಮ ಆಸಕ್ತಿಗೆ ಅರ್ಹರಾಗಿವೆ. ರಸಿಕರು ಅಪೇಕ್ಷಿಸುವುದು ವೀರ-ಅದ್ಭುತರಸಗಳನ್ನು ಒಳಗೊಂಡ ಉದಾರಗಂಭೀರವಾದ ವಸ್ತುವನ್ನುಳ ಕಾವ್ಯವನ್ನೆಂದು ಮುರಾರಿಯು ಮೊದಲಿಗೇ ಒಕ್ಕಣಿಸಿದ್ದಾನೆ: ತಸ್ಮೈ ವೀರಾದ್ಭುತಾರಂಭಗಂಭೀರೋದಾತ್ತವಸ್ತವೇ | ಜಗದಾನಂದಕಂದಾಯ ಸಂದರ್ಭಾಯ ತ್ವರಾಮಹೇ || (೧.೬) ಇಲ್ಲಿ ಕವಿಯು ಧರ್ಮಾರ್ಥಸಾಧಕವಾದ ವೀರ ಮತ್ತು ಸರ್ವಜನಮನೋಹರವಾದ...
ಭವಭೂತಿ “ಉತ್ತರರಾಮಚರಿತ”ದ ಕಡೆಯ ಅಂಕದಲ್ಲಿ ಗರ್ಭಾಂಕತಂತ್ರವನ್ನು ಬಳಸಿ ಸೀತಾ-ರಾಮರ ಪುನರ್ಮೇಲನವನ್ನು ಸಾಧಿಸಿದ್ದಾನೆ. ಇದನ್ನು ವಾಲ್ಮೀಕಿಮುನಿಗಳ ರಾಮಾಯಣದ ಕಡೆಯ ಭಾಗವೆಂಬಂತೆಯೂ ಕಲ್ಪಿಸಿದ್ದಾನೆ. ಅವನ ಪ್ರಕಾರ ಶ್ರವ್ಯಕಾವ್ಯವಾದ ರಾಮಾಯಣದ ಮುಗಿತಾಯವು ದೃಶ್ಯಕಾವ್ಯದ ಮೂಲಕ ಆಗಬೇಕೆಂದು ವಾಲ್ಮೀಕಿಯದೇ ಸಂಕಲ್ಪ. ಆದುದರಿಂದಲೇ ಕಡೆಯ ಭಾಗವನ್ನು ರಂಗಕ್ಕೆ ತರಲು ಭರತಮುನಿಯ ನೆರವನ್ನು ಕೋರಿ ಅವನಿಗೆ ಹಸ್ತಪ್ರತಿಯನ್ನೂ ಕೊಡಲಾಗಿತ್ತು. ಹೀಗೆ ಸಜ್ಜುಗೊಂಡ ರೂಪಕವು ರಾಮನ ಸಾನ್ನಿಧ್ಯದಲ್ಲಿ, ಅಶೇಷ ಕೋಸಲಪ್ರಜೆಗಳ ಸಮಕ್ಷದಲ್ಲಿ ಪ್ರಯುಕ್ತವಾಯಿತು. ಈ ರೂಪಕದಲ್ಲಿ...
ಭವಭೂತಿ ಮಹಾಕವಿ ಭವಭೂತಿಯ ರೂಪಕಗಳಲ್ಲಿ ಆತನ ವ್ಯಕ್ತಿತ್ವ ಮತ್ತು ಕೃತಿತ್ವಗಳಲ್ಲದೆ ಕಾವ್ಯಮೀಮಾಂಸೆಯ ಸೂಚನೆಗಳೂ ಗಣ್ಯವಾಗಿವೆ. ಅವುಗಳನ್ನು ಪರಾಮರ್ಶಿಸಬಹುದು. “ಮಾಲತೀಮಾಧವ”ದ ಪ್ರಸ್ತಾವನೆಯಲ್ಲಿ ತನ್ನೀ ರೂಪಕದ ವೈಶಿಷ್ಟ್ಯವನ್ನು ಹೀಗೆ ಹೇಳಿಕೊಳ್ಳುತ್ತಾನೆ: ಭೂಮ್ನಾ ರಸಾನಾಂ ಗಹನಪ್ರಯೋಗಾಃ             ಸೌಹಾರ್ದಹೃದ್ಯಾನಿ ವಿಚೇಷ್ಟಿತಾನಿ | ಔದ್ಧತ್ಯಮಾಯೋಜಿತಕಾಮಸೂತ್ರಂ             ಚಿತ್ರಾಃ ಕಥಾ ವಾಚಿ ವಿದಗ್ಧತಾ ಚ || (ಮಾಲತೀಮಾಧವ, ೧.೪) ರಸಸಮೃದ್ಧಿಯಿಂದ ಕೂಡಿದ ಗಹನವಾದ ಸಂವಿಧಾನಕ, ಸ್ನೇಹ-ವಿಶ್ವಾಸಗಳಿಂದ ಪ್ರೇರಿತವಾದ ವರ್ತನೆಗಳು,...
ಮಾಘ ಮಾಘನು “ಶಿಶುಪಾಲವಧ”ಮಹಾಕಾವ್ಯದ ಎರಡನೆಯ ಸರ್ಗದಲ್ಲಿ ಅನೇಕಶಾಸ್ತ್ರಗಳನ್ನು ಉದಾಹರಣೆಗಳಾಗಿ ಬಳಸಿಕೊಳ್ಳುತ್ತ ರಾಜನೀತಿಯನ್ನು ಪೋಷಿಸುತ್ತಾನೆ. ಈ ಶಾಸ್ತ್ರಸಮೂಹದಲ್ಲಿ ಅಲಂಕಾರಶಾಸ್ತ್ರಕ್ಕೂ ಅವಕಾಶವನ್ನು ಕೊಟ್ಟಿರುವುದು ಕವಿಯ ಔಚಿತ್ಯಪ್ರಜ್ಞೆಗೆ ಸಾಕ್ಷಿ. ಇಲ್ಲಿಯ ಕೆಲವು ಮಾತುಗಳು ನಿಜಕ್ಕೂ ಮನನೀಯವಾಗಿವೆ. ಅವನ್ನೀಗ ಪರಿಶೀಲಿಸೋಣ. ಬಹ್ವಪಿ ಸ್ವೇಚ್ಛಯಾ ಕಾಮಂ ಪ್ರಕೀರ್ಣಮಭಿಧೀಯತೇ | ಅನುಜ್ಝಿತಾರ್ಥಸಂಬಂಧಃ ಪ್ರಬಂಧೋ ದುರುದಾಹರಃ || (೨.೭೩) ಅಸ್ತವ್ಯಸ್ತವಾದ ವಿಷಯಗಳನ್ನು ಮನಬಂದಂತೆ ಎಷ್ಟೂ ಹೇಳಬಹುದು. ಆದರೆ ಪರಸ್ಪರಸಾಂಗತ್ಯವಿರುವ...