ಕಲಾಮೀಮಾಂಸೆಯು ಸಾಮಾನ್ಯವಾಗಿ ವಿದ್ವದ್ರಸಿಕರಿಂದಲೇ ಮೊದಲಾಗುತ್ತದೆ. ಇದೇ ಮುಂದೆ ಆಯಾ ಕಲೆಗಳ ಸೌಂದರ್ಯಶಾಸ್ತ್ರವಾಗಿ ರೂಪುಗೊಂಡು ಹೆಚ್ಚಿನ ವ್ಯಾಪ್ತಿ-ವೈಶದ್ಯಗಳನ್ನು ಗಳಿಸುತ್ತದೆ. ಅದೆಷ್ಟೋ ಬಾರಿ ಕಲಾನಿರ್ಮಾತೃಗಳಾದ ಕವಿ-ಕಲಾವಿದರಿಗೇ ತಮ್ಮ ತಮ್ಮ ಕಲೆಗಳ ರೂಪ-ಸ್ವರೂಪಗಳಲ್ಲಿ ಹುದುಗಿರುವ ಸೊಗಸನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಇಂಥ ಸೊಗಸಿನ ಲಕ್ಷಣಪರಿಷ್ಕಾರವನ್ನು ನಡಸುವ ಸಾಮರ್ಥ್ಯವಾಗಲಿ, ಮನೋಧರ್ಮವಾಗಲಿ ಅವರಿಗಿರುವುದಿಲ್ಲ. ಆದರೆ ಹಲಕೆಲವರು ಕವಿ-ಕಲಾವಿದರು ತಮ್ಮ ಕಲಾಮಾಧ್ಯಮದ ನಿರ್ಮಾಣರಹಸ್ಯವನ್ನೂ ಆಸ್ವಾದವೈಶಿಷ್ಟ್ಯವನ್ನೂ...
 
0