Nature
ಪೈಗಳ ಕವಿತೆಯಲ್ಲಿ ಭಕ್ತಿಯ ಮತ್ತೊಂದು ಆಯಾಮವಾದ ಹೃದಯವಿಸ್ತಾರ, ಆತ್ಮನಿವೇದನೆ ಮತ್ತು ಭೂತಾನುಕಂಪೆಗಳನ್ನು ಕೂಡ ಗಮನಿಸಬಹುದು. ಅವರು ಮೇಲ್ನೋಟಕ್ಕೆ ಜಿಗುಟಾದ ಅಭಿಪ್ರಾಯಗಳನ್ನು ಹೊಂದಿದ ನಿರ್ಭೀತ ವಿದ್ವಾಂಸರೆಂದು ತೋರಿದರೂ ಅಂತರಂಗದಲ್ಲಿ ಅವರದು ಸಮಾರ್ದ್ರ ಮನಸ್ಸು. ಹೀಗಾಗಿ ಜಗತ್ತಿನಲ್ಲಿ ಎಲ್ಲಿ ನೋವು ಕಂಡರೂ ಎಲ್ಲಿ ಕಷ್ಟ ಕೆರಳಿದರೂ ಅವರ ಹೃದಯ ಕರಗುತ್ತದೆ, ಅವರ ಮನಸ್ಸು ಮರುಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಹಲವು ಕವಿತೆಗಳಿವೆ. ತುರ್ಕಿಯ ಪರವಾಗಿ ಅವರು ಮಾಡಿದ ಪ್ರಾರ್ಥನೆಯನ್ನು ಈಗಾಗಲೇ ನೋಡಿದ್ದೇವೆ. ‘ಹೊಲೆಯನು ಯಾರು?’ (ಪು. ೧೬) ಎಂಬ ಕವಿತೆಯಲ್ಲಿ...
ವಸ್ತು ಎಸ್. ಶಿವಾಜಿ ಜೋಯಿಸ್ ಅವರು ಸಂಪಾದಿಸಿಕೊಟ್ಟಿರುವ ಗೋವಿಂದ ಪೈಗಳ ಸಮಗ್ರ ಕವಿತೆಗಳ ಪ್ರಸ್ತಾವನೆಯನ್ನು ಕಂಡಾಗ ಅಲ್ಲಿ ಸುಮಾರು ನೂರೆಂಬತ್ತು ಕವಿತೆಗಳು ಅಡಕವಾಗಿವೆಯೆಂದು ತಿಳಿಯುತ್ತದೆ; ಇವಲ್ಲದೆ ಮತ್ತೂ ಒಂಬತ್ತು ಅನುಪಲಬ್ಧ ಕವಿತೆಗಳಿದ್ದಂತೆಯೂ ತಿಳಿಯುತ್ತದೆ.[1] ಸದ್ಯದ ಅಧ್ಯಯನವು ಪೂರ್ವೋಕ್ತ ಸಂಗ್ರಹವನ್ನಲ್ಲದೆ ‘ಹೆಬ್ಬೆರಳು’ ಎಂಬ ಏಕಾಂಕನಾಟಕವನ್ನೂ ಸೇರಿಸಿಕೊಂಡಿದೆ. ಇದಕ್ಕೆ ಕಾರಣ ಈ ರೂಪಕದ ಸಂಪೂರ್ಣ ಪದ್ಯಾತ್ಮಕತೆಯೇ. ಆದರೆ ಈ ಅವಲೋಕನದಲ್ಲಿ ಪೈಗಳು ಮಾಡಿದ ಗೀತಾಂಜಲಿಯ ಗದ್ಯಾನುವಾದವಾಗಲಿ, ಅವರ ಇಂಗ್ಲಿಷ್ ಮತ್ತು ಕೊಂಕಣಿ ಕವನಗಳಾಗಲಿ...
ಪ್ರವೇಶ ಉಕ್ತಿ ಎಂದರೆ ನುಡಿ, ಹೇಳಿಕೆ ಎಂಬೆಲ್ಲ ಅರ್ಥಗಳುಂಟು. ಬರಿಯ ಮಾತಿಗೆ ಸೊಗಸು ಬಂದಾಗ ಅದೊಂದು ವಿಶೇಷವೆನಿಸುತ್ತದೆ. ಇದು ಕವಿತೆಯಲ್ಲಿ ಎದ್ದುಕಾಣುತ್ತದೆ; ಇದಿಲ್ಲದ ಪಕ್ಷದಲ್ಲಿ ಕಾವ್ಯತ್ವಕ್ಕೆ ಕುಂದು ಬರುತ್ತದೆ. ಆದುದರಿಂದಲೇ ಕಾವ್ಯವನ್ನು ‘ಉಕ್ತಿವಿಶೇಷ’ ಎನ್ನುತ್ತಾರೆ. ರಾಜಶೇಖರನ ‘ಕರ್ಪೂರಮಂಜರೀ’ (೧.೮) ಎಂಬ ಪ್ರಾಕೃತರೂಪಕ ಈ ಮಾತನ್ನು ಸಮರ್ಥವಾಗಿ ನಿರೂಪಿಸುತ್ತದೆ: “ಉತ್ತಿವಿಸೇಸೋ ಕವ್ವಮ್” (ಉಕ್ತಿವಿಶೇಷಃ ಕಾವ್ಯಮ್). ಈ ಅಂಶವನ್ನೇ ‘ವಕ್ರತೆ’ ಎಂಬ ಹೆಸರಿನಿಂದ ಕುಂತಕ ವಿಸ್ತೃತವಾಗಿ ವಿವೇಚಿಸಿದ್ದಾನೆ. ಅವನ ಪ್ರಕಾರ ವಕ್ರತೆಯೆಂಬುದು...